Advertisement
ಅಭಯಚಂದ್ರ ಅವರು ಕ್ರೀಡಾ ಸಚಿವರಾಗಿದ್ದಾಗ ಜಿಲ್ಲಾ ಫುಟ್ಬಾಲ್ ಅಸೋಸಿಯೇಶನ್ ಮನವಿ ಮೇರೆಗೆ ಫುಟ್‌ಬಾಲ್ ಮೈದಾನಕ್ಕೆ ಟರ್ಫ್ ಅಳವಡಿಕೆ ಸಂಬಂಧಿಸಿ 1 ಕೋಟಿ ರೂ. ಮಂಜೂರು ಆಗಿತ್ತು. ಆಗ ಕ್ರೀಡಾ ಇಲಾಖೆಯಿಂದ ಲೋಕೋಪಯೋಗಿ ಇಲಾಖೆಗೆ ಕಾಮಗಾರಿಯ ಉಸ್ತುವಾರಿ ವಹಿಸಲಾಗಿತ್ತು. ಅದರಂತೆ ಟೆಂಡರ್ ಕರೆಯ ಲಾಗಿತ್ತಾದರೂ, ಅಷ್ಟು ಮೊತ್ತಕ್ಕೆ ಟೆಂಡರ್ ಆಗಿಲ್ಲ. ಬಿಡ್ಡುದಾರರು ಶೇ.25ಕ್ಕಿಂತ ಹೆಚ್ಚಿನ ಮೊತ್ತವನ್ನೇ ನಮೂದಿಸಿದ್ದರು.
Related Articles
Advertisement
ನಿರ್ಮಿತಿ ಕೇಂದ್ರಕ್ಕೆ ವಹಿಸಬೇಕಿತ್ತು: ಅಭಯಚಂದ್ರ ಅವರು ಕ್ರೀಡಾ ಸಚಿವರಾಗಿದ್ದಾಗ ಫುಟ್‌ಬಾಲ್ ಮೈದಾನಕ್ಕೆ ಟರ್ಫ್ ಸಹಿತ ಅಭಿವೃದ್ಧಿಗೆಂದು 1 ಕೋಟಿ ರೂ. ಬಿಡುಗಡೆ ಮಾಡಿದ್ದರು. ಪಿಡಬ್ಲ್ಯುಡಿಗೆ ವಹಿಸಿ ಟೆಂಡರ್ ಮೊದಲಾದ ಕಾರಣಕ್ಕೆ ವಿಳಂಬವಾಯಿತು. ಆಗಲೇ ನಿರ್ಮಿತಿ ಕೇಂದ್ರಕ್ಕೆ ಕಾಮಗಾರಿ ವಹಿಸಿದ್ದರೆ ಇಷ್ಟೊತ್ತಿಗಾಗಲೇ ಸುಸಜ್ಜಿತ ಮೈದಾನ ನಿರ್ಮಾಣವಾಗುತ್ತಿತ್ತು. ಸದ್ಯ ಟರ್ಫ್ ಮೈದಾನ ನಿರ್ಮಿಸುವಷ್ಟು ಅನುದಾನವೂ ಇಲ್ಲ. ಕ್ರೀಡಾ ಇಲಾಖೆ ಟರ್ಫ್ ಕ್ರೀಡಾಂಗಣ ನಿರ್ಮಿಸುವತ್ತ ಮತ್ತೂಮ್ಮೆ ಚಿಂತನೆ ನಡೆಸಬೇಕು. – ಡಿ.ಎಂ. ಅಸ್ಲಾಂ, ದ.ಕ ಜಿಲ್ಲಾ ಫುಟ್ಬಾಲ್ ಅಸೋಸಿಯೇಶನ್ ಅಧ್ಯಕ್ಷ
ಶೀಘ್ರ ಶಿಲಾನ್ಯಾಸ: ಟರ್ಫ್ ಕ್ರೀಡಾಂಗಣ ಮಾಡಿದರೆ, ಫುಟ್‌ಬಾಲ್ ಹೊರತು ಪಡಿಸಿ ಬೇರೆ ಚಟುವಟಿಕೆಗಳಿಗೆ ಉಪಯೋಗಿಸಲು ಸಾಧ್ಯವಿಲ್ಲ. ಆದ್ದರಿಂದ 35 ಲಕ್ಷ ರೂ. ವೆಚ್ಚದಲ್ಲಿ ಫುಟ್‌ಬಾಲ್ ಕ್ರೀಡಾಂಗಣವನ್ನು ಅಭಿವೃದ್ಧಿ ಪಡಿಸಲು ಯೋಜನೆ ರೂಪಿಸಲಾಗಿದೆ. ಈಗಾಗಲೇ ಸ್ಥಳೀಯ ಪಾಲಿಕೆ ಸದಸ್ಯರು, ಫುಟ್‌ಬಾಲ್ ಅಸೋಸಿಯೇಶನ್ ಪ್ರಮುಖರು, ಎಂಜಿನಿಯರ್‌ಗಳು ಜಂಟಿಯಾಗಿ ಸಮೀಕ್ಷೆ ನಡೆಸಿ ಯಾವ ರೀತಿ ಅಭಿವೃದ್ಧಿ ಪಡಿಸಬೇಕು ಎಂದು ನಿರ್ಧರಿಸಿದ್ದಾರೆ. ಶೀಘ್ರ ಶಿಲಾನ್ಯಾಸ ನೆರವೇರಿಸಲಾಗುವುದು. – ವೇದವ್ಯಾಸ ಕಾಮತ್, ಶಾಸಕರು
-ಭರತ್ ಶೆಟ್ಟಿಗಾರ್