Advertisement

ಉಡುಪಿ ಉತ್ಸವದಲ್ಲಿ ಕಾಡುಪ್ರಾಣಿಗಳ ದಂಡು

08:26 PM Dec 19, 2019 | Sriram |

ಉಡುಪಿ: ಉಡುಪಿ ಜನತೆಯ ವಿಶೇಷ ಆಕರ್ಷಣೆಯಾಗಿರುವ ಉಡುಪಿ ಉತ್ಸವವು ಕಲ್ಸಂಕ ಬಳಿ ಇರುವ ರಾಯಲ್‌ ಗಾರ್ಡನ್‌ನಲ್ಲಿ ಆರಂಭವಾಗಿದ್ದು ಈ ಬಾರಿ ಅನೇಕ ಹೊಸ ಹೊಸ ಬಗೆಯ ಆಕರ್ಷಣೆಗಳಿವೆ.

Advertisement

ಇಲ್ಲಿನ ಎನಿಮಲ್‌ ಕಿಂಗ್‌ಡಮ್‌ ಒಳಗೆ ಪ್ರವೇಶಿಸುವಾಗ ಕಾಡಿನ ಒಳಗೆ ಪ್ರವೇಶಿಸಿದಂತೆ ಅನುಭವವಾಗುತ್ತದೆ. ನೀರಾನೆ, ಪಾಂಡ, ಬಿಳಿ ಮತ್ತು ಅರಸಿನ ಬಣ್ಣದ ಹುಲಿ, ಕುಟುಂಬ ಸಮೇತವಾಗಿ ಆಗಮಿಸಿದ ಆಫ್ರಿಕಾದ ಆನೆ, ಹಳೆಯ ಕಾಲದ ಆನೆ, ಕರಡಿ, ಸಿಂಹ, ಮರುಭೂಮಿಯಿಂದ ಬಂದ ಜೀಬ್ರಾ, ಮರಕ್ಕೆ ಸುತ್ತಿಕೊಂಡ ಉದ್ದದ ಹೆಬ್ಟಾವು, ಬೃಹತ್‌ ಗಾತ್ರದ ಗೊರಿಲ್ಲಾ , ಸಮುದ್ರದಲ್ಲಿ ಹಾರುತ್ತಿರುವ ಸಾರ್ಕ್‌ ಮೀನು, ಮಲೆನಾಡಿನಿಂದ ಬಂದ ಮೊಸಲೆ, ಖಡ್ಗಮೃಗ ಅಲ್ಲದೆ ಇನ್ನಿತರ ಪ್ರಾಣಿಗಳು ಇಲ್ಲಿ ಇದ್ದು ಇವೆಲ್ಲವು ಜೀವಂತ ಪ್ರಾಣಿಗಳಂತೆ ಚಲಿಸುತ್ತಿದೆ.

ಕಾಡಿನ ಒಳಗೆ ಇರುವಂಥ ಬೃಹತ್‌ ಗಾತ್ರದ ಮರಗಳು, ಬಂಡೆಕಲ್ಲುಗಳು ಇಲ್ಲಿವೆ. ಒಮ್ಮೆ ನೋಡಿದರೆ ಮತ್ತೆ ಮತ್ತೆ ನೋಡಬೇಕೆನಿಸುತ್ತದೆ.

ಮಕ್ಕಳು, ಯುವಕರು ಮತ್ತು ಗೃಹಿಣಿಯರನ್ನು ವಿಶೇಷವಾಗಿ ಗಮನದಲ್ಲಿರಿಸಿಕೊಂಡು ಈ ಉತ್ಸವ ವನ್ನು ಸಿದ್ಧಗೊಳಿಸಲಾಗಿದೆ. ನೂರಕ್ಕೂ ಅಧಿಕ ಮಳಿಗೆಗಳು, ಅಟೋಮೊಬೈಲ್ಸ್‌, ಗೃಹಬಳಕೆ ಸಾಮಗ್ರಿಗಳು, ಎಲೆಕ್ಟ್ರಾನಿಕ್‌ ಪರಿಕರ ಗಳು, ಹ್ಯಾಂಡ್‌ಲೂಮ್ಸ್‌ ಬಟ್ಟೆಗಳು, ಚಪ್ಪಲಿ, ಬ್ಯಾಗ್‌, ಸಿದ್ಧ ಉಡುಪುಗಳು, ಆಲಂಕಾರಿಕ ಸಾಮಗ್ರಿಗಳು, ಕ್ಯಾಲೆಂಡರ್‌ ಫೋಟೋಗಳು, ಒಂದು ಗ್ರಾಂ ಚಿನ್ನದ ಆಭರಣಗಳು ಇಲ್ಲಿವೆ.

ಜೋಳದ ವಿವಿಧ ಖಾದ್ಯಗಳು, ದೋಸಾ ಕ್ಯಾಂಪ್‌ ಗ್ರಾಹಕರನ್ನು ಆಕರ್ಷಿಸಲಿವೆ.

Advertisement

ಇಟಾಲಿಯನ್‌ ಟೊರ ಟೊರ, ಬ್ರೇಕ್‌ ಡ್ಯಾನ್ಸ್‌, ಡ್ರಾÂಗನ್‌ ಟ್ರೇನ್‌, 3ಡಿ ಶೋ, ಟೈಟಾನಿಕ್‌, ಜಿಗ್‌ ಸ್ಯಾಗ್‌, ಬೋಟಿಂಗ್‌, ಎಲೆಕ್ಟ್ರಾನಿಕ್‌ ಟ್ರೇನ್‌, ಡ್ರಾಗನ್‌ ಸ್ಲೆ$çಡ್‌, ಹಾಂಟೆಡ್‌ ಹೌಸ್‌ ಹಾಗೂ ಕ್ಯಾಟರ್‌ ಪಿಲ್ಲರ್‌ ಜನರಿಗೆ ಮನೋರಂಜನೆ ನೀಡುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next