ಮಂಗಳೂರು/ಉಡುಪಿ: ಯೇಸು ಕ್ರಿಸ್ತರನ್ನು ಶಿಲುಬೆಗೇರಿಸಿದ ದಿನದ ಪ್ರಯುಕ್ತ ಎ. 7ರಂದು ಶುಭ ಶುಕ್ರವಾರ (ಗುಡ್ ಫ್ರೈಡೇ)ವನ್ನು ಕರಾವಳಿಯಾದ್ಯಂತ ಉಪವಾಸ, ಧ್ಯಾನ ಮತ್ತು ಪ್ರಾರ್ಥನೆಯೊಂದಿಗೆ ಆಚರಿಸಲಾಯಿತು.
ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ವಿವಿಧ ಚರ್ಚ್‌ಗಳಲ್ಲಿ ಬೆಳಗ್ಗೆಯಿಂದಲೇ ವಿಶೇಷ ಪ್ರಾರ್ಥನೆ, ಶಿಲುಬೆಯ ಹಾದಿ, ಶಿಲುಬೆಯ ಆರಾಧನೆ ಮತ್ತಿತರ ಕಾರ್ಯಕ್ರಮಗಳು ನಡೆದವು.ಚರ್ಚ್‌ಗಳಲ್ಲಿ ನಡೆದ ವಿವಿಧ ಕಾರ್ಯಕ್ರಮಗಳಲ್ಲಿ ಹೆಚ್ಚಿನ ಸಂಖ್ಯೆಯ ಮಂದಿ ಭಾಗವಹಿಸಿದ್ದರು. ಯೇಸು ಕ್ರಿಸ್ತರ ಬಂಧನ, ಶಿಲುಬೆಯ ಮೇಲೆ ಮರಣವನ್ನಪ್ಪುವ ತನಕದ ಘಟನೆಗಳನ್ನು ಪ್ರಸ್ತುತ ಪಡಿಸ ಲಾಯಿತು. ಭಕ್ತರು ಶಿಲುಬೆಯ ಹಾದಿಯ 14 ಪ್ರಮುಖ ಘಟ್ಟಗಳನ್ನು ನೆನಪಿಸಿ ಧ್ಯಾನಿಸಿ ಪ್ರಾರ್ಥಿಸಿದರು. ಸಂಜೆ ಚರ್ಚ್‌ಗಳಲ್ಲಿ ನಡೆದ ಪ್ರಾರ್ಥನೆಯ ವಿಧಿಗಳಲ್ಲಿ ಬೈಬಲ್ ವಾಚನದ ವೇಳೆ ಧರ್ಮಗುರುಗಳು ರಕ್ತವರ್ಣದ ಪೂಜಾ ಬಟ್ಟೆಯನ್ನು ಧರಿಸಿ ಯೇಸು ಕ್ರಿಸ್ತರ ಕೊನೆಯ ಘಳಿಗೆಗಳ ಕಥನವನ್ನು ಓದಿದರು. ಬಳಿಕ ಪ್ರವಚನ ನೀಡಿದರು.
ಪಾಪದ ವಿಮೋಚನೆಗೆ ಔಷಧವಿಲ್ಲ: ಬಿಷಪ್
ರೈ|ರೆ| ಡಾ| ಪೀಟರ್ ಪಾವ್ಲ್ ಸಲ್ಡಾನ್ಹಾ ಅವರು ಶಕ್ತಿನಗರದ ಮದರ್ ಆಫ್ ಗಾಡ್ ಚರ್ಚ್‌ನಲ್ಲಿ ಪ್ರಾರ್ಥನೆ ಮತ್ತು ಪ್ರವಚನ ನೀಡಿ, ಯಾವುದೇ ವೈದ್ಯರಿಂದ, ಮನಃಶಾಸ್ತ್ರಜ್ಞರಿಂದ ಪಾಪದ ವಿಮೋಚನೆ ಸಾಧ್ಯವಿಲ್ಲ. ಪಾಪದ ವಿಮೋಚನೆಗೆ ಯಾವುದೇ ಔಷಧವಿಲ್ಲ ಎಂದು ಹೇಳಿದರು.
ಇದೇ ವೇಳೆ ಪ್ರಾರ್ಥನಾ ವಿಧಿಯಲ್ಲಿ ಚರ್ಚಿನ ಪ್ರಧಾನ ಧರ್ಮಗುರು ವಂ| ಜೆರಾಲ್ಡ್ ಡಿ’ಸೋಜಾ, ರೆಸಿಡೆಂಟ್ ಧರ್ಮಗುರುಗಳಾದ ವಂ| ವಿನ್ಸೆಂಟ್ ವಿನೋದ್ ಸಲ್ಡಾನ, ವಂ| ಪ್ರಮೋದ್ ಕ್ರಾಸ್ತಾ ಭಾಗ ವಹಿಸಿದ್ದರು. ಕೆಥೋಲಿಕ್ ಚರ್ಚ್ ಗಳಲ್ಲಿ ಶುಭ ಶುಕ್ರವಾರದಂದು ಯಾವುದೇ ಬಲಿಪೂಜೆಗಳು ಚರ್ಚ್‌ಗಳಲ್ಲಿ ನಡೆಯಲಿಲ್ಲ. ಬದಲಾಗಿ ಬೆಳಗ್ಗೆಯಿಂದ ಮಧ್ಯಾಹ್ನವರೆಗೆ ಶಿಲುಬೆಯ ಹಾದಿಯ ಭಕ್ತಿಯ ಕಾರ್ಯಕ್ರಮಗಳು ಜರಗಿದವು.
Related Articles
ಎ. 8ರಂದು ಯೇಸುವಿನ ಪುನರು ತ್ಥಾನದ ಜಾಗರಣೆ ಹಾಗೂ ಎ.9ರಂದು ಈಸ್ಟರ್ ಹಬ್ಬದ ಆಚರಣೆಗಳು ನಡೆ ಯ ಲಿವೆ. ಬಿಷಪ್ ಅವರು ಈಸ್ಟರ್ ಜಾಗರಣೆಯ ಬಲಿಪೂಜೆಯನ್ನು ನಗರದ ರೊಸಾರಿಯೋ ಕೆಥೆಡ್ರಲ್‌ನಲ್ಲಿ ನಡೆಸಿಕೊಡಲಿದ್ದಾರೆ. ರವಿವಾರ ಈಸ್ಟರ್ ಹಬ್ಬದ ಬಲಿಪೂಜೆಯನ್ನು ಬಂಟ್ವಾಳದ ವಾಮದಪದವಿನ ಚರ್ಚ್‌ನಲ್ಲಿ ನಡೆಸಲಿದ್ದಾರೆ.
ಉಡುಪಿ ಜಿಲ್ಲೆ: ಪ್ರಾರ್ಥನೆ, ಧ್ಯಾನ
ಉಡುಪಿ: ಶುಭ ಶುಕ್ರವಾರವನ್ನು ಜಿಲ್ಲಾದ್ಯಂತ ಉಪವಾಸ, ಧ್ಯಾನ ಹಾಗೂ ಪ್ರಾರ್ಥನೆಯೊಂದಿಗೆ ಆಚರಿಸ ಲಾಯಿತು. ಜಿಲ್ಲೆಯ ಎಲ್ಲ ಚರ್ಚ್
ಗಳಲ್ಲೂ ಬೆಳಗ್ಗಿನಿಂದ ಪ್ರಾರ್ಥನೆ, ಧ್ಯಾನ, ಯೇಸುವಿನ ಶಿಲುಬೆಯ ಹಾದಿಯ ವಾಚನ ಜರಗಿತು.
ಧರ್ಮ ಪ್ರಾಂತದ ಪ್ರಧಾನ ದೇವಾಲಯ ಮಿಲಾಗ್ರಿಸ್ ಕೆಥೆಡ್ರಲ್‌ನಲ್ಲಿ ಧರ್ಮಾಧ್ಯಕ್ಷ ರೈ| ರೆ| ಡಾ| ಜೆರಾಲ್ಡ್ ಐಸಾಕ್ ಲೋಬೊ ಪ್ರಾರ್ಥನ ವಿಧಿಯನ್ನು ನೆರವೇರಿಸಿದರು. ಈ ಸಂದರ್ಭ ಚರ್ಚ್‌ನ ಪ್ರಧಾನ ಧರ್ಮಗುರು ವಂ| ವಲೇರಿಯನ್ ಮೆಂಡೊನ್ಸಾ, ಸಹಾಯಕ ಧರ್ಮಗುರು ವಂ| ಜೋಯ್ ಅಂದ್ರಾದೆ, ಪಿಲಾರ್ ಸಭೆಯ ರೆ| ಡೆನ್ಜಿಲ್ ಮಾರ್ಟಿಸ್, ರೆ| ನಿತೇಶ್ ಡಿ’ಸೋಜಾ ಉಪಸ್ಥಿತರಿದ್ದರು.
ಬೆಳ್ತಂಗಡಿ: ಶುಭ ಶುಕ್ರವಾರ ಆಚರಣೆ
ಬೆಳ್ತಂಗಡಿ: ಬೆಳ್ತಂಗಡಿ ಧರ್ಮಪ್ರಾಂತಕ್ಕೆ ಒಳಪಟ್ಟ 55 ಚರ್ಚ್‌ಗಳಲ್ಲಿ ಎ. 7ರಂದು ಶುಭ ಶುಕ್ರವಾರದ ವಿಧಿ ವಿಧಾನಗಳನ್ನು ಭಕ್ತಿಪೂರ್ವಕ ವಾಗಿ ಆಚರಿಸಲಾಯಿತು. ಇಲ್ಲಿನ ಸಂತ ಲಾರೆನ್ಸ್ ರವರ ಕೆಥಡ್ರಲ್ ದೇವಾಲಯದಲ್ಲಿ ಧರ್ಮಾಧ್ಯಕ್ಷ ರೈ| ರೆ| ಡಾ| ಲಾರೆನ್ಸ್ ಮುಕ್ಕುಯಿ ಅವರು ವಿಧಿವಿಧಾನಗಳನ್ನು ನೆರವೇರಿಸಿ ಪ್ರವಚನ ನೀಡಿದರು. ಬಳಿಕ ಏಸು ಸ್ವಾಮಿಯು ಅನುಭವಿಸಿದ ಯಾತನೆಯನ್ನು ಸ್ಮರಿಸುವ ಶಿಲುಬೆಯ ಹಾದಿಯಲ್ಲಿ ಎಲ್ಲ ಧರ್ಮಭಗಿನಿಯರು ಪಾಲ್ಗೊಂಡರು.
ಧರ್ಮಗುರು ವಂ| ತೋಮಸ್ ಕಣ್ಣಾಂಞಳ್, ಮುಖ್ಯ ನ್ಯಾಯಾಧೀಶ ವಂ| ಕುರಿಯಾಕೋಸ್ ವೆಟ್ಟುವಯಿ, ಚಾನ್ಸೆಲರ್ ವಂ| ಲಾರೆನ್ಸ್ ಪುಣೋಳಿಲ್, ವಂ| ಅಬ್ರಹಾಂ ಪಟ್ಟೇರಿಲ್, ಜ್ಞಾನ ನಿಲಯ ನಿರ್ದೇಶಕ ವಂ| ಜೋಸೆಪ್ ಮಟ್ಟಂ, ವಂ| ವಿನ್ಸೆಂಟ್ ಉಪಸಿœತರಿದ್ದರು.