ದೋಟಿಹಾಳ: ಗ್ರಾಮದ ರಾಜೇಸಾಬ ಯಲಬುರ್ಗಿ ನೈಕಾರಿಕೆ ಕೈಬಿಟ್ಟು ಕೃಷಿ ಕಡೆಗೆ ಒಲವು ತೋರಿದ ಕಾರಣ ಇಂದು ಅವರು ಇತರ ರೈತರಿಗೆ ಒಬ್ಬ ಮಾದರಿಯ ರೈತನಾಗಿ ಹೊರಹೊಮ್ಮಿದ್ದಾರೆ.
ರಾಜೇಸಾಬ ಯಲಬುರ್ಗಿ ನೈಕಾರಿಕೆ ಕೈಬಿಟ್ಟು ಸೀತಾಫಲ ಕೃಷಿಯಲ್ಲಿ ಯಶಸ್ವಿಯಾಗಿದ್ದಾರೆ. ಎರಡು ಎಕರೆ ಜಮೀನಿನಲ್ಲಿ ಮಹಾರಾಷ್ಟçದ ಬಾರಸಿ ಗ್ರಾಮದಿಂದ 700 ಎನ್‌ಎಮ್‌ಕೆ ಗೋಡ್ ತಳಿಯ ಸೀತಾಫಲ ಸಸಿಗಳನ್ನು ಕರಿದಿ ಸದ್ಯ ಹೊಲದಲ್ಲಿ ಬೆಳೆದು, ವಾರ್ಷಿಕ 5-6 ಲಕ್ಷ ರೂಪಾಯಿಗಳಿಗೂ ಹೆಚ್ಚು ಲಾಭ ಗಳಿಸುತ್ತಿದ್ದಾರೆ. ಇದೀಗ ಇವರು ತಾಲೂಕಿನ ಇತರ ರೈತರಿಗೆ ಮಾದರಿಯಾಗಿದೆ.
“ಆಳಾಗಿ ದುಡಿ ಅರಸನಾಗಿ ಉಣ್ಣು” ಎನ್ನುವ ಮಾತು ಈ ರೈತನನ್ನು ನೋಡಿಯೇ ಹೇಳಿದಂತಿದೆ. ಏಕೆಂದರೆ ಮತ್ತೊಬ್ಬರ ಬಳಿ ಆಳಾಗಿ ದುಡಿಯುವ ಬದಲು, ಸ್ವಂತ ಜಮೀನಿನಲ್ಲಿ ದಂಪತಿಗಳಿಬ್ಬರು ಕೃಷಿ ಮಾಡಿ ಭರ್ಜರಿ ಲಾಭ ಪಡೆಯುತ್ತಿದ್ದಾರೆ. ಈ ಮೂಲಕ ತಾಲೂಕಿನಲ್ಲಿ ಸೀತಾಫಲ ಹಣ್ಣಿನ ಕೃಷಿಗೆ ಕೈ ಹಾಕಿ ಯಶಸ್ವಿ ಕಂಡ ರೈತನಾಗಿದಾನೆ.
ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ದೋಟಿಹಾಳ ಗ್ರಾಮದ ರಾಜೇಸಾಬ ಯಲಬುರ್ಗಿ ಎಂಬ ರೈತ ಸದ್ಯ ಇತರೆ ರೈತರಿಗೆ ಮಾದರಿಯಾಗಿದ್ದಾರೆ. ಈಗಿನ ಕಾಲದಲ್ಲಿ ಎಷ್ಟು ಬೆಳೆಗಳು ಬೆಳೆದರು ಸೂಕ್ತ ಬೆಲೆ ಸಿಗುತ್ತಿಲ್ಲ ಎನ್ನುವ ರೈತರ ಮಧ್ಯೆ ರಾಜೇಸಾಬ ಯಲಬುರ್ಗಿ ಸೀತಾಫಲ ಹಣ್ಣಿನ ಕೃಷಿ ಮಾಡಿ ಭರ್ಜರಿ ಲಾಭ ಗಳಿಸುತ್ತಿದ್ದಾರೆ. ಇವರು ಓದಿದ್ದು ಬಿಇ ಹಾಗೂ ಎರಡು ವರ್ಷ ತೋಟಗಾರಿಕೆ ಶಿಕ್ಷಣ ಪಡೆದಿದ್ದಾನೆ. ಈ ಮೊದಲು ನೈಕಾರಕ್ಕೆ ವೃತ್ತಿಯನ್ನು ಮಾಡುತ್ತಿದ್ದ. ಸುಮಾರು 10-12 ವರ್ಷ ಕೆಲಸ ಮಾಡಿಕೊಂಡು ಬಂದಿದ್ದರು. ನೈಕಾರಿಕೆ ನಶಿಸಿ ಹೋದ ಮೇಲೆ ಅವರಿಗೆ ಮೊದಲು ಒಲವು ಬಂದಿದ್ದೆ ಕೃಷಿ ಕಡೆ. ಹೀಗಾಗಿ ಬೇರೆಯವರ ಕೈಕೆಳಗೆ ಯಾಕೆ ಕೆಲಸ ಮಾಡಬೇಕು ಅಂತ ತಮ್ಮ ಸ್ವಂತ ಜಮೀನಿನಲ್ಲಿ ಆಧುನಿಕ ಕೃಷಿ ಕಾರ್ಯ ಕೈ ಹಾಕಿ ಕೃಷಿ ಯಶಸ್ವಿ ಕಂಡಿದ್ದಾರೆ.
ತಮ್ಮ ಎರಡು ಎಕರೆ ಜಮೀನಿನಲ್ಲಿ ಜಿಲ್ಲೆಯಲ್ಲಿ ಯಾರು ಬೆಳೆಯದಂತ ಸೀತಾಫಲ ಹಣ್ಣು ಬೆಳೆಯುತ್ತಿದ್ದಾರೆ. ಎರಡು ಎಕರೆ ಜಮೀನಿನಲ್ಲಿ ಸುಮಾರು 700 ಸೀತಾಫಲ ಹಣ್ಣಿನ ಗಿಡಗಳನ್ನ ಹಚ್ಚಿದ್ದಾರೆ. ಸಾಮಾನ್ಯ ಗುಡ್ಡಗಾಡು ಪ್ರದೇಶದಲ್ಲಿ ಸಿಕ್ಕ ಸಿಕ್ಕ ಕಡೆ ಬೆಳೆಯುವ ಸೀತಾಫಲ ಹಣ್ಣು ಸಿಗುತ್ತದೆ. ಆದರೆ ಇವರು ಬೆಳೆಯುವ ಈ ಸೀತಾಫಲ ಹಣ್ಣುಗಳು ಸ್ವಲ್ಪ ಸ್ವಲ್ಪ ವಿಭಿನ್ನವಾಗಿದೆ. ಒಂದು ಹಣ್ಣು.700 ರಿಂದ 800 ಗ್ರಾಂ ವರೆಗೆ ತೂಕ ಇರುತ್ತದೆ, ಈ ಹಣ್ಣಿನಲ್ಲಿ ಬೀಜಗಳು ಕಡಿಮೆ ಪ್ರಮಾಣದಲ್ಲಿದ್ದು ಮಾರುಕಟ್ಟೆಯಲ್ಲಿ ಇದರ ಬೇಡಿಕೆ ಜಾಸ್ತಿ ಇದೆ.
ಸಸಿ ನಾಟಿ ಮಾಡಿದ ಮೂರು ವರ್ಷದ ನಂತರ ಫಲ ಕೊಡಲು ಆರಂಭವಾಗುತ್ತದೆ. ಪ್ರತಿ ಗಿಡದಿಂದ ಸುಮಾರು 35 ಕೆಜಿಯಷ್ಟು ಹಣ್ಣು ಬರುತ್ತಿವೆ. ಒಂದೊಂದು ಗಿಡದಲ್ಲಿ ಸುಮಾರು 50-60ಹಣ್ಣುಗಳು ಬೆಳೆದಿವೆ. ಇಲ್ಲಿವರೆಗೆ ಕೇವಲ 1.50 ಲಕ್ಷ ರೂಪಾಯಿಗವರಗೆ ಹಣ ಖರ್ಚು ಮಾಡಿರುವ ರಾಜೇಸಾಬ ಮೊದಲ ಬಾರಿಗೆ ಬರೋಬ್ಬರಿ 4-5 ಲಕ್ಷ ರೂ. ಲಾಭ ಗಳಿಸಿದ್ದಾರೆ. ಒಂದು ಬಾರಿ ನಾಟಿ ಮಾಡಿದ ಈ ಸಸಿಗಳು ಮೂರು ವರ್ಷದ ನಂತರ ಫಲ ಕೊಡಲು ಆರಂಭಿಸುತ್ತವೆ. ತದನಂತರ ಸುಮಾರು 30-40 ವರ್ಷಗಳಿಗೆ ರೈತರಿಗೆ ಫಲ ಕೊಡುವ ಬೆಳೆಯಾಗಿದೆ. ಒಮ್ಮೆ ನಾಟಿ ಮಾಡಿದರೆ ಕನಿಷ್ಟ 30-40 ವರ್ಷದವರೆಗೆ ಆದಾಯ ಬರುತ್ತದೆ ಎನ್ನುತ್ತಾರೆ ರೈತ ರಾಜೇಸಾಬ,
ಸೀತಾಫಲ ಹಣ್ಣುಗಳಿಗೆ ಹೆಚ್ಚು ಬೇಡಿಕೆ ಇದೆ. ರಾಜ್ಯದ ಮಹಾನಗರಗಳಲ್ಲಿ ಬಾರಿ ಬೇಡಿಕೆ ಜೊತೆಗೆ ವಿದೇಶದಲ್ಲೂ ಹೆಚ್ಚು ಬೇಡಿಕೆ ಕೂಡ ಇದೆಯಂತೆ. ಸದ್ಯ ರಾಜೇಸಾಬ ಬೆಳೆದ ಸೀತಾಫಲ ಹಣ್ಣಿಗೆ ಮಾರುಕಟ್ಟೆಯಲ್ಲಿ ಕೆಜಿ ಗೆ 150 ರಿಂದ 160 ರೂ. ಬೆಲೆಯಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚು ಲಾಭ ಸಿಗುವ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಈ ಮಾದರಿ ರೈತನನ್ನ ನೋಡಿದ ಇತರರು ಕೃಷಿ ಕಾಯಕದಲ್ಲಿ ತೊಡಗಿಸಿ ಜೀವನ ಕಟ್ಟಿಕೊಳ್ಳಬೇಕು ಎಂದು ರೈತ ಶರಣಪ್ಪ ಗೌಡರ ಹೇಳುತ್ತಾರೆ.
ಮಹಾರಾಷ್ಟ್ರದಿಂದ ಎನ್‌ಎಮ್‌ಕೆ ಗೋಡ್ ತಳಿಯ ಸೀತಾಫಲ ಸಸಿಗಳನ್ನು ಕರಿದಿ ಎರಡು ಎಕರಿ ಭೂಮಿಯಲ್ಲಿ ನಾಟಿ ಮಾಡಿದೆ. 3 ವರ್ಷ ಕಳೆದಿದ್ದೆ. ಹೀಗ ಬೆಳೆ ಬರಲು ಆರಂಭವಾಗಿದೆ. ಇದು ದೀಘಲಾಕದ ಬೆಳೆ ಹಾಗೂ ಹೆಚ್ಚು ಆದಾಯ ನೀಡುವ ಬೆಳೆಯಾಗಿದೆ.
– ರಾಜೇಸಾಬ ಯಲಬುರ್ಗಿ. ಸೀತಾಫಲ ರೈತ ದೋಟಿಹಾಳ.
ಸದ್ಯ ತಾಲೂಕಿನ ರೈತರು ಹಣ್ಣುಗಳ ಬೆಳೆಯ ಕಡೆಗೆ ವಾಲುತ್ತಿದ್ದಾರೆ. ಸದ್ಯ 10-15 ಎಕರೆ ಭೂಮಿಯಲ್ಲಿ ಸೀತಾಫಲ ಬೆಳೆಯಲಾಗುತ್ತಿದೆ. ನೀರು ಕಡಿಮೆ ಇದ್ದರೂ ಬೆಳೆಯುತ್ತದೆ. ದೀರ್ಘ ಕಾಲದ ಬೆಳೆಯಾಗಿದ್ದು ರೈತರಿಗೆ ಉತ್ತಮ ಲಾಭ ನೀಡುವ ಬೆಳೆಯಾಗಿದೆ.
– ಮಂಜುನಾಥ ಲಿಂಗಣ್ಣನವರ್. ಹಿರಿಯ ಸಹಾಯಕ ನಿರ್ದೇಶಕ ತೋಟಗಾರಿಕೆ ಇಲಾಖೆ ಕುಷ್ಟಗಿ.
ವರದಿ: ಮಲ್ಲಿಕಾರ್ಜುನ ಮೆದಿಕೇರಿ ದೋಟಿಹಾಳ,