Advertisement
ಇಂದು ಈ ಅಂಗನವಾಡಿ ಕೇಂದ್ರದ ಚಿತ್ರಣವೇ ಬದಲಾಗಿದೆ. ಆದರೆ ಇದು ನೆರವೇರಿದ್ದು, ಯಾವುದೇ ಸರಕಾರಿ ಅನುದಾನದಿಂದಲ್ಲ. ಬದಲಾಗಿ ಮೂವರು ಸ್ನೇಹಿತರು ಸೇರಿಕೊಂಡು ಈ ಅಂಗನವಾಡಿಗೆ ಆಧುನಿಕ ಸ್ಪರ್ಶ ನೀಡಿದ್ದಾರೆ!
Related Articles
ಕಟ್ಟಡದ ಮೇಲ್ಛಾವಣಿ, ಗೋಡೆ, ನೆಲದ ದುರಸ್ತಿ, ಪೈಂಟಿಂಗ್, ಪಾಲ್ ಸೀಲಿಂಗ್, ಮಿರರ್, ರ್ಯಾಕ್‌ಗಳ ಅಳವಡಿಕೆ, ಪುಟಾಣಿಗಳಿಗೆ ಆಟದ ಸಾಮಗ್ರಿ, ಪ್ಲೇ ಏರಿಯಾ, ಗಾರ್ಡನ್, ಆವರಣಗೋಡೆಯ ಕಾಮಗಾರಿ ನಡೆಸಲಾಗಿದೆ. ಅಂಗನವಾಡಿ ಕೇಂದ್ರ ಹೊರಗಿನ ಭಾಗದಲ್ಲಿದ್ದ ಸುಮಾರು 6 ಲೋಡ್ ಟಿಪ್ಪರ್ ಮಣ್ಣು ತೆಗೆದು ಗಾರ್ಡನ್ ನಿರ್ಮಿಸಿದ್ದು, ಜತೆಗೆ ಸುಮಾರು 15 ಸಾವಿರ ರೂ. ವೆಚ್ಚದ ಆಟದ ಸಾಮಗ್ರಿಗಳನ್ನೂ ಖರೀದಿಸಲಾಗಿವೆ.
Advertisement
ಅರ್ಲಿ ಲರ್ನಿಂಗ್ ಸೆಂಟರ್ಈಗ ಸಂಪೂರ್ಣ ಆಧುನೀಕರಣಗೊಂಡಿರುವ ಅಂಗನವಾಡಿಯನ್ನು ದಾನಿಗಳನ್ನು ಅರ್ಲಿ ಲರ್ನಿಂಗ್ ಸೆಂಟರ್ ಆಗಿ ಅಭಿವೃದ್ಧಿಪಡಿಸುವ ಗುರಿ ಹೊಂದಿ ದ್ದಾರೆ. ಸಿಎಫ್‌ಎಎಲ್‌ನ ಇಎಲ್‌ಸಿ ಶಿಕ್ಷಕಿಯೊಬ್ಬರು ಇಲ್ಲಿನ ಪುಟಾಣಿಗಳಿಗೆ ಬೋಧಿಸಲಿದ್ದಾರೆ. ಮಕ್ಕಳ ಮೇಲಿನ ಇವರ ಕಾಳಜಿ ಹಾಗೂ ಉತ್ತಮ ಶಿಕ್ಷಣ ನೀಡ ಬೇಕು ಎಂಬ ತುಡಿತ ಕಂಡು ಸಂತೋಷ ವಾಗುತ್ತಿದೆ ಎನ್ನುತ್ತಾರೆ ಅಂಗನವಾಡಿ ಕಾರ್ಯಕರ್ತೆ ಹರಿಣಾಕ್ಷಿ. ಶೌಚಾಲಯ ಅಭಿವೃದ್ಧಿ
ಅಂಗನವಾಡಿ ಕೇಂದ್ರ ಪಕ್ಕದಲ್ಲೇ ಶಿಥಿಲಾವಸ್ಥೆಯ ಶೌಚಾ ಲಯವೊಂದಿದೆ. ಎ. 10ರ ಬಳಿಕ ಶಾಲೆಯ ರಾಜಾ ಅವಧಿಯಲ್ಲಿ ಅದನ್ನು ದುರಸ್ತಿ ಪಡಿಸಲಾಗುವುದು. ಜತೆಗೆ ಅಲ್ಲೇ ಪಕ್ಕದಲ್ಲಿ ಇನ್ನೊಂದು ಶಿಥಿಲಾವಸ್ಥೆಯ ಕಟ್ಟಡವಿದ್ದು, ಅದನ್ನು ಸಂಪೂರ್ಣ ಕೆಡವಿ ಹೊಸ ಕಟ್ಟಡ ನಿರ್ಮಾಣ ಮಾಡ ಲಾಗುತ್ತದೆ. ಇಎಲ್‌ಸಿಯಲ್ಲಿ ಉಚಿತ ಶಿಕ್ಷಣ ಸಿಗುವುದರಿಂದ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಳವಾದಾಗ ಹೊಸ ಕಟ್ಟಡವನ್ನು ಉಪಯೋಗಿಸಲಾಗುವುದು ಕಿರಣ್ ವಿವರಿಸುತ್ತಾರೆ. ಇಂತಹ ಕಾರ್ಯದಿಂದ ತೃಪ್ತಿ
ಇಂತಹ ಕಾರ್ಯಗಳು ಹೆಚ್ಚು ತೃಪ್ತಿ ನೀಡುತ್ತವೆ. ನಾವು ಕ್ರೀಡಾಕ್ಷೇತ್ರಕ್ಕೂ ಸಹಕಾರ ನೀಡಿ, ಯುವಕರನ್ನು ಆಸ್ತಿಯನ್ನಾಗಿಸುವ ಕಾರ್ಯ ಮಾಡುತ್ತಿದ್ದೇವೆ. ಅಂಗನವಾಡಿಯ ದುರಸ್ತಿಯ ಸಂದರ್ಭದಲ್ಲಿ ಹಣದ ಕುರಿತು ಯೋಚಿಸಿಲ್ಲ. ಸ್ಥಳೀಯ ವಿದ್ಯಾರ್ಥಿಗಳು ಇಲ್ಲಿ ಕಲಿಯಬೇಕು ಎನ್ನುವುದು ನಮ್ಮ ಆಸೆ.
– ಕಿರಣ್ ಬಿ.ಎನ್.
ದಾನಿ ಜ. 22: ಉದ್ಘಾಟನೆ
ಅಂಗನವಾಡಿ ಕೇಂದ್ರದ ದುರಸ್ತಿ ಕಾರ್ಯ ಪ್ರಸ್ತುತ ಪೂರ್ಣಗೊಂಡಿದ್ದು, ಜ. 22ರಂದು ಬೆಳಗ್ಗೆ 9.30ಕ್ಕೆ ಉದ್ಘಾಟನೆ ನೆರವೇರಲಿದೆ. ಜತೆಗೆ ಹೊಸ ಕೇಂದ್ರವನ್ನು ‘ಸಂತ ಪೀಟರ್ ಕಿಂಡರ್‌ಗಾರ್ಡನ್ ಅಂಗನವಾಡಿ’ ಎಂದು ನಾಮಕರಣಗೊಳಿಸಲು ನಿರ್ಧರಿಸಿದ್ದಾರೆ. ಕಿರಣ್ ಸರಪಾಡಿ