Advertisement

Sullia ನ್ಯಾಯಾಧೀಶರಿಗೆ ಮಾಹಿತಿ ನೀಡದ ವೈದ್ಯರು

12:37 AM Sep 24, 2024 | Team Udayavani |

ಸುಳ್ಯ: ಆಸ್ಪತ್ರೆಯಲ್ಲಿ ದಾಖಲಾಗಿದ್ದ ಮಹಿಳೆಯ ಮರಣಪೂರ್ವ ಹೇಳಿಕೆ ಪಡೆಯಲು ಸುಳ್ಯ ಸರಕಾರಿ ಆಸ್ಪತ್ರೆಗೆ ಬಂದಿದ್ದ ಕಾಸರಗೋಡಿನ ನ್ಯಾಯಾಧೀಶರೊಂದಿಗೆ ಆಸ್ಪತ್ರೆಯ ವೈದ್ಯೆಯೋರ್ವರು ಉದ್ದಟತನದಿಂದ ವರ್ತಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

Advertisement

ಕಾಸರಗೋಡಿನ ದೇಲಂಪಾಡಿ ಮೂಲದ ಮಹಿಳೆಯೋರ್ವರ ಆತ್ಮಹತ್ಯೆ ಯತ್ನ ಪ್ರಕರಣಕ್ಕೆ ಸಂಬಂಧಿಸಿ ಸುಳ್ಯ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಆ ಮಹಿಳೆಯ ಮರಣಪೂರ್ವ ಹೇಳಿಕೆ ಪಡೆಯಲು ಕಾಸರಗೋಡಿನ ಜೆಎಂಎಫ್‌ಸಿ 2 ನ್ಯಾಯಾಧೀಶರೋರ್ವರು ಆದೂರು ಪೊಲೀಸರ ಜತೆಗೆ ಸೆ. 22ರ ಮುಂಜಾನೆ ಗಂಟೆ 1.30ಕ್ಕೆ ಹೇಳಿಕೆ ಪಡೆಯುತ್ತಿದ್ದರು.

ಈ ಸಂದರ್ಭದಲ್ಲಿ ಆಸ್ಪತ್ರೆಯ ಪ್ರಭಾರ ವೈದ್ಯರಲ್ಲಿ ನ್ಯಾಯಾಧೀಶರು ರೋಗಿಯ ಸ್ಥಿತಿ ಮತ್ತು ದೃಷ್ಟಿಕೋನದ ಪ್ರಮಾಣ ಪತ್ರವನ್ನು ನೀಡುವಂತೆ ಕೇಳಿದರು. ಆಗ ಕರ್ತವ್ಯದಲ್ಲಿದ್ದ ಪುರುಷ ವೈದ್ಯರೋರ್ವರು ಪ್ರಮಾಣಪತ್ರ ನೀಡಲು ಹಿಂಜರಿದರು. ಮೇಲಧಿಕಾರಿ ಬರುವವರೆಗೆ ಕಾಯಿರಿ ಎಂದು ಉಡಾಫೆಯಿಂದ ತಿಳಿಸಿದ್ದು, ಅನಂತರ ಬಂದ ಮಹಿಳಾ ವೈದ್ಯೆ ಕೂಡ ತನ್ನಲ್ಲಿ ಲಿಖಿ ತ ಮನವಿ ಕೇಳಿ, ರೋಗಿಯ ಸ್ಥಿತಿ ಮತ್ತು ದೃಷ್ಟಿಕೋನದ ಪ್ರಮಾಣಪತ್ರವನ್ನು ನೀಡದೆ ಸರಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿರುತ್ತಾರೆ ಎಂದು ನ್ಯಾಯಾಧೀಶರು ಸುಳ್ಯ ಠಾಣೆಗೆ ದೂರು ನೀಡಿದ್ದಾರೆ. ಅದರಂತೆ ಸುಳ್ಯ ಸರಕಾರಿ ಆಸ್ಪತ್ರೆಯ ಇಬ್ಬರು ವೈದ್ಯರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next