Advertisement

Puttur: ವಿದ್ಯಾರ್ಥಿಗಳಿಗೆ “ಆಪತ್ತು”ತಂದ ವಿಪತ್ತಿನ ಸಿಗ್ನಲ್‌!

10:21 PM Oct 12, 2023 | Team Udayavani |

ಪುತ್ತೂರು: ವಿಪತ್ತು ಸಂದರ್ಭದಲ್ಲಿ ಮೊಬೈಲ್‌ ಮೂಲಕ ಎಚ್ಚರಿಕೆಯ ಸಂದೇಶವನ್ನು ನೀಡುವ ಬಗ್ಗೆ ಪ್ರಾಯೋಗಿಕ ಪರೀಕ್ಷೆ ಗುರುವಾರ ದೇಶಾದ್ಯಂತ ನಡೆದಿದೆ. ಆದರೆ ಇದು ಪುತ್ತೂರಿನ ಕಾಲೇಜೊಂದರ ಹಲವು ವಿದ್ಯಾರ್ಥಿಗಳ ಪಾಲಿಗೆ ಮಾತ್ರ “ಆಪತ್ತು’ ತಂದಿದೆ!

Advertisement

ತರಗತಿಯೊಳಗೆ ಮೊಬೈಲ್‌ ಕೊಂಡೊಯ್ಯುವುದಕ್ಕೆ ನಿಷೇಧ ಇದ್ದರೂ ಎಷ್ಟೋ ವಿದ್ಯಾರ್ಥಿಗಳು ಸೈಲೆಂಟ್‌ ಮೋಡ್‌ನ‌ಲ್ಲಿ ಇರಿಸಿ ಉಪನ್ಯಾಸಕರ ಗಮನಕ್ಕೆ ಬಾರದಂತೆ ಕೊಂಡೊಯ್ಯುವುದು ಸಾಮಾನ್ಯ. ಆದರೆ ಗುರುವಾರ ಬೆಳಗ್ಗೆ 11.45ರ ಸುಮಾರಿಗೆ ಧ್ವನಿ ಮತ್ತು ಕಂಪನದೊಂದಿಗೆ ಮೊಬೈಲ್‌ಗ‌ಳಿಗೆ ಎಚ್ಚರಿಕೆ ಸಂದೇಶ ಬರಲಾರಂಭಿಸಿದ್ದು, ಸೈಲೆಂಟ್‌ ಮೋಡ್‌ನ‌ಲ್ಲಿರುವ ಮೊಬೈಲ್‌ಗ‌ಳೂ ತಮ್ಮ ಇರವನ್ನು ತೋರಿಸಿದವು.

ಈ ಸಂದೇಶ ಮತ್ತು ಧ್ವನಿಗೆ ಯಾರೂ ಭಯಪಡಬೇಕಿಲ್ಲ ಎಂದು ದೂರಸಂಪರ್ಕ ಇಲಾಖೆ ತಿಳಿಸಿದ್ದರೂ ವಿದ್ಯಾರ್ಥಿಗಳು ಕಕ್ಕಾಬಿಕ್ಕಿಯಾದರು.ಉಪನ್ಯಾಸಕರಿಗೆ ಯಾರೆಲ್ಲಾ ತರಗತಿಯೊಳಗೆ ಮೊಬೈಲ್‌ ಬಳಸುತ್ತಿದ್ದಾರೆ ಅನ್ನುವ ಸಂಗತಿ ತಿಳಿಯಿತು. ಉಪನ್ಯಾಸಕರು ಮೊಬೈಲನ್ನು ತಾತ್ಕಾಲಿಕವಾಗಿ ವಶಕ್ಕೆ ಪಡೆದು ಮುಂದೆ ತರಗತಿಯೊಳಗೆ ತರದಂತೆ ವಿದ್ಯಾರ್ಥಿಗಳಿಗೆ ಎಚ್ಚರಿಕೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next