Advertisement
ಈ ಕಾರ್ಯಕ್ರಮವು ಜಾಗೃತಿ ಮೂಡಿಸಲು ಮತ್ತು ಆಲ್ಝೈಮರ್ ಕಾಯಿಲೆಯನ್ನು ತಡೆಗಟ್ಟುವ ಮತ್ತು ಚಿಕಿತ್ಸೆ ನೀಡುವ ವಿಧಾನಗಳ ಕುರಿತು ಚರ್ಚೆಗಳಿಗೆ ವೇದಿಕೆಯನ್ನು ಸೃಷ್ಟಿಸುವ ಗುರಿಯನ್ನು ಹೊಂದಿದೆ. ಈ ವರ್ಷದ ಥೀಮ್ ಎರಡು ಮುಖ್ಯ ವಿಷಯಗಳ ಮೇಲೆ ಗಮನಹರಿಸುತ್ತದೆ: ಆಲ್ಝೈಮರ್ ಕಾಯಿಲೆ ತಡೆಗಟ್ಟುವಿಕೆ ಮತ್ತು ಚಿಕಿತ್ಸೆ ವಿಧಾನಗಳು, ಮತ್ತು ಚಿಕಿತ್ಸೆಗೆ ಮಾನಸಿಕ ವಿಧಾನಗಳು.
Related Articles
Advertisement
ಆಲ್ಝೈಮರ್ ಕಾಯಿಲೆಯು ದೈನಂದಿನ ಕೆಲಸಗಳನ್ನು ಮಾಡುವ ವ್ಯಕ್ತಿಯ ಸಾಮರ್ಥ್ಯದ ಮೇಲೆ ಪರಿಣಾಮ ಬೀರಬಹುದು. ಡಾ.ಶ್ವೇತಾ ಕಡಬ ಮಾತನಾಡಿ, “ಮರೆಗುಳಿತನವು ರೋಗಿಗಳ ಕುಟುಂಬಗಳು ಮತ್ತು ಅರೋಗ್ಯ ಸೇವಾ ಆರೈಕೆದಾರರ ಮೇಲೆ ದೊಡ್ಡ ಒತ್ತಡವನ್ನು ಉಂಟುಮಾಡುತ್ತದೆ ಏಕೆಂದರೆ ಮರೆಗುಳಿತನ ಹೊಂದಿರುವ ಜನರು ಪರಿಸ್ಥಿತಿಯು ಹದಗೆಟ್ಟಾಗ ತಮ್ಮನ್ನು ತಾವು ಕಾಳಜಿ ವಹಿಸುವ ಸಾಮರ್ಥ್ಯವನ್ನು ನಿಧಾನವಾಗಿ ಕಳೆದುಕೊಳ್ಳುತ್ತಾರೆ,” ಎಂದರು.
ರೋಗದ ಸುತ್ತಲೂ ಇರುವ ತಪ್ಪು ಕಲ್ಪನೆಗಳು ಜನರ ಆರೋಗ್ಯ ಮತ್ತು ಯೋಗಕ್ಷೇಮದ ಮೇಲೆ ಪರಿಣಾಮ ಬೀರುತ್ತದೆ. ಹಾಗಾಗಿ ನಾವು ಇವರಿಗೆ ಉತ್ತಮ ಬೆಂಬಲ ಮತ್ತು ಸೌಲಭ್ಯಗಳನ್ನು ಒದಗಿಸಬೇಕಾಗಿದೆ. ಇದರ ಬಗ್ಗೆ ಪ್ರತಿಕ್ರಿಯಿಸಿದ ಡಾ.ಲಕ್ಷ್ಮೀಕೃಷ್ಣ ವಿ ಮಾತನಾಡಿ, “ಮರೆಗುಳಿತನವು ಆಲ್ಝೈಮರ್ ನ ಒಂದು ಸಾಮಾನ್ಯ ರೋಗಲಕ್ಷಣವಾಗಿದೆ. ಆಲ್ಝೈಮರ್ ಜ್ಞಾಪಕ ಶಕ್ತಿ, ಆಲೋಚನೆ ಮತ್ತು ದೈನಂದಿನ ಚಟುವಟಿಕೆಗಳ ಮೇಲೆ ಪರಿಣಾಮ ಬೀರುತ್ತದೆ ಏಕೆಂದರೆ ಅಮಿಲಾಯ್ಡ್ ಪ್ಲೇಕ್‌ಗಳು ಮತ್ತು ಟೌ ಪ್ರೋಟೀನ್ ಗಳು ಮೆದುಳಿನ ಚಟುವಟಿಕೆಗಳನ್ನು ದುರ್ಬಲಗೊಳಿಸುತ್ತದೆ. ಈ ವರ್ಷದ ಥೀಮ್: ಮರೆಗುಳಿತನದ ವಿರುದ್ಧ ಹೋರಾಡುವ ಸಮಯ, ಆಲ್ಝೈಮರ್ ವಿರುದ್ಧ ಹೋರಾಡುವ ಸಮಯ. ಈ ಕಾರ್ಯಕ್ರಮವು ತಪ್ಪು ಕಲ್ಪನೆಗಳನ್ನು ಕಡಿಮೆ ಮಾಡಲು ಮತ್ತು ಆರೈಕೆ ಮಾಡುವವರಿಗೆ ಸಹಾಯ ಒದಗಿಸುವ ಗುರಿಯನ್ನು ಹೊಂದಿದೆ. ಏಕೆಂದರೆ ರೋಗಿಗಳು, ಆಗಾಗ್ಗೆ ಭಾರೀ ಭಾವನಾತ್ಮಕ, ದೈಹಿಕ ಮತ್ತು ಆರ್ಥಿಕ ಸವಾಲುಗಳನ್ನು ಎದುರಿಸುತ್ತಾರೆ, ಇದು ಒತ್ತಡ ಮತ್ತು ಒಂಟಿತನಕ್ಕೆ ಕಾರಣವಾಗಬಹುದು” ಎಂದರು.
ಈ ಪರಿಸ್ಥಿತಿಯಲ್ಲಿ ಹಲವಾರು ಬಗೆಯ ಭಾವನೆಗಳನ್ನು ಅನುಭವಿಸುವುದು ಸಾಮಾನ್ಯವಾಗಿದೆ, ಮತ್ತು ಈ ಭಾವನೆಗಳನ್ನು ನಿರ್ವಹಿಸುವುದು ನಿಮ್ಮ ಜೀವನ ಮತ್ತು ಆರೋಗ್ಯದ ಮೇಲೆ ಹೆಚ್ಚು ನಿಯಂತ್ರಣವನ್ನು ಪಡೆಯಲು ಸಹಾಯ ಮಾಡುತ್ತದೆ. ಡಾ.ಆದಿತ್ಯ ಕುಲಕರ್ಣಿ ಮಾತನಾಡಿ, “ಬುದ್ಧಿಮಾಂದ್ಯತೆಯ ಆರಂಭಿಕ ಹಂತಗಳಲ್ಲಿ, ಅನೇಕ ಜನರು ಬೇರೆಯವರ ಸಹಾಯವಿಲ್ಲದೆ ಬದುಕಬಹುದು, ಆದರೆ ಶುಚಿ ನಿರ್ವಹಣೆ, ಅಡುಗೆ ಮಾಡುವುದು ಮತ್ತು ಬಿಲ್‌ಗಳನ್ನು ಪಾವತಿಸುವಂತಹ ನಿತ್ಯದ ಕೆಲಸಗಳಲ್ಲಿ ಅವರಿಗೆ ಸಹಾಯ ಬೇಕಾಗಬಹುದು. ಸಮಯ ಕಳೆದಂತೆ ಪರಿಸ್ಥಿತಿಯು ಹದಗೆಡುವುದರಿಂದ ಭವಿಷ್ಯದ ಅಗತ್ಯಗಳಿಗಾಗಿ ಕುಟುಂಬದ ಸದಸ್ಯರು ಅಥವಾ ಸ್ನೇಹಿತರ ಸಹಾಯವನ್ನು ಪಡೆಯಬಹುದು” ಎಂದರು.