ಬೆಂಗಳೂರು: ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ (ಎಸ್‌ಎಂಬಿಗಳು) ಡಿಜಿಟಲ್ ಸೌಲಭ್ಯವನ್ನು ಕಲ್ಪಿಸುವ ಅಮೆಜಾನ್ ಇಂಡಿಯಾದ ಪ್ರಯತ್ನದ ಭಾಗವಾಗಿ 85 ಲಕ್ಷಕ್ಕೂ ಹೆಚ್ಚು ಆಫ್‌ಲೈನ್ ಸಣ್ಣ ಉದ್ಯಮದ ಮಾಲೀಕರು ಮತ್ತು ಉದ್ಯಮಿಗಳಿಗೆ ತನ್ನ ಡಿಜಿಟಲ್ ಪಾವತಿ ಮೂಲಸೌಕರ್ಯವನ್ನು ಅಮೆಜಾನ್ ಒದಗಿಸಿದೆ.
ಈ ಹಿಂದೆ, ಈ ವ್ಯಾಪಾರಿಗಳು ತಮ್ಮ ವ್ಯಾಪಾರದಲ್ಲಿ ನಗದು ವಹಿವಾಟನ್ನೇ ಹೆಚ್ಚು ಮಾಡುತ್ತಿದ್ದವು. ಈಗ ಇವು ಅಮೆಜಾನ್ ಪೇ ಕ್ಯೂಆರ್ ಕೋಡ್ ಬಳಸಿ ತಮ್ಮ ಗ್ರಾಹಕರಿಂದ ಪಾವತಿಗಳನ್ನು ತೆಗೆದು ಕೊಳ್ಳುತ್ತಿವೆ. ಅಷ್ಟೇ ಅಲ್ಲ, ಅಮೆಜಾನ್ ಪೇ ಫಾರ್ ಬ್ಯುಸಿನೆಸ್ ಆಪ್, ವಾಯ್ಸ್ ನೊಟಿಫಿಕೇಶನ್ ಸೌಲಭ್ಯ, ಕಾರ್ಯಕಾರಿ ಬಂಡವಾಳ ಸಾಲದ ಸುಲಭ ಲಭ್ಯತೆಯಂತ ಸೌಲಭ್ಯಗಳು ಸಣ್ಣ ಉದ್ಯಮಗಳಿಗೆ ಮತ್ತು ವ್ಯಾಪಾರಿಗಳಿಗೆ ಡಿಜಿಟಲ್ ಪಯಣ ಇನ್ನಷ್ಟು ಅನುಕೂಲಕರವನ್ನಾಗಿಸಿದೆ ಎಂದು ಪ್ರಕಟಣೆ ತಿಳಿಸಿದೆ.
ಇದನ್ನೂ ಓದಿ:ಪ್ರವಾದಿ ಕುರಿತಾಗಿ ವಿವಾದ; ಮೌನ ಮುರಿದ ಹಿರಿಯ ನಟ ನಾಸಿರುದ್ದೀನ್ ಶಾ
ಅಮೆಜಾನ್ ಪೇ ಇಂಡಿಯಾದ ಸಿಇಒ ಮತ್ತು ವಿಪಿ ಮಹೇಂದ್ರ ನೆರೂರ್‌ಕರ್ ಹೇಳುವಂತೆ “ಭಾರತದ ಆರ್ಥಿಕ ಪ್ರಗತಿಗೆ ಎಸ್‌ಎಂಬಿಗಳು ಬೆನ್ನೆಲುಬು. ಆಫ್‌ಲೈನ್ ವ್ಯಾಪಾರಿಗಳಿಗೆ ತಮ್ಮ ವ್ಯಾಪಾರವನ್ನು ಬೆಳೆಸಲು ಅವಕಾಶವನ್ನು ಒದಗಿಸುವುದು ನಮ್ಮ ಧ್ಯೇಯವಾಗಿದೆ. ಭಾರತದ 85 ಲಕ್ಷಕ್ಕೂ ಹೆಚ್ಚು ಎಸ್‌ಎಂಬಿಗಳು ನಮ್ಮ ಮೇಲೆ ಇಟ್ಟಿರುವ ವಿಶ್ವಾಸಕ್ಕೆ ಇದು ಸಾಕ್ಷಿಯಾಗಿದೆ ಎಂದಿದ್ದಾರೆ.
ಸಣ್ಣ ವ್ಯಾಪಾರಿಗಳು ಮತ್ತು ಉದ್ಯಮಿಗಳಿಗೆ ವೈವಿಧ್ಯಮಯ ಸೌಲಭ್ಯವನ್ನು ಅಮೆಜಾನ್ ಪೇ ಒದಗಿಸಿದೆ. 85 ಲಕ್ಷಕ್ಕೂ ಹೆಚ್ಚು ಎಸ್‌ಎಂಬಿಗಳ ಪೈಕಿ, 40 ಲಕ್ಷಕ್ಕೂ ಹೆಚ್ಚು ರಿಟೇಲ್ ಮತ್ತು ಶಾಪಿಂಗ್ ಔಟ್‌ಲೆಟ್‌ಗಳಾದ ಕಿರಾಣಾ ಸ್ಟೋರ್‌ಗಳು ಮತ್ತು ಜನರಲ್ ಸ್ಟೋರ್‌ಗಳು, 13 ಲಕ್ಷಕ್ಕೂ ಹೆಚ್ಚು ಆಹಾರ ಮತ್ತು ಪಾನೀಯ ಔಟ್‌ಲೆಟ್‌ಗಳಾದ ರೆಸ್ಟೋರೆಂಟ್‌ಗಳು, ಸಣ್ಣ ಉಪಾಹಾರ ದರ್ಶಿನಿಗಳು, ಫಾಸ್ಟ್ ಫುಡ್ ಜಾಯಿಂಟ್‌ಗಳು, ಸುಮಾರು 30 ಲಕ್ಷ ಸೇವಾ ಪೂರೈಕೆದಾರರಾದ ಸಲೂನ್‌ಗಳು, ಮೊಬೈಲ್ ರಿಚಾರ್ಜ್, ಇಂಟರ್ನೆಟ್ ಕೆಫೆ, ಆರೋಗ್ಯ ಮತ್ತು ವೈದ್ಯಕೀಯ ಆರೈಕೆ, ಪ್ರವಾಸ ಮತ್ತು ಸಾರಿಗೆ, ಶಿಕ್ಷಣ ಸೇವೆಗಳು, ಸ್ಟೋರ್ ಮಾಲೀಕರನ್ನು ಒಳಗೊಂಡಿದೆ.