ಈ ಹಿನ್ನೆಲ್ಲಿಯಲ್ಲಿಯೇ ಪ್ರಪಂಚದ್ಯಾಂತ ಚಿತ್ರಗಳ ಬಿಡುಗಡೆಗಾಗಿ ವಿಭಿನ್ನ ಮಾರ್ಗಗಳನ್ನು ಕಂಡುಕೊಳ್ಳುತ್ತಿದ್ದು, ಸಾರ್ವಜನಿಕವಾಗಿ ಶೋಗಳನ್ನು ಏರ್ಪಡಿಸುತ್ತಿವೆ.
Advertisement
ಬೋಟಿಂಗ್ ಚಿತ್ರಮಂದಿರಫ್ರಾನ್ಸ್ ಲಾಕ್‌ಡೌನ್ ಬಳಿಕ ಅನ್‌ಲಾಕ್ ಸ್ಥಿತಿಯತ್ತ ಮುಖ ಮಾಡಿದೆ. ಬೆಸಗೆ ಚಟುವಟಿಕೆಗಳ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ಇದನ್ನು ವಿಶಿಷ್ಟವಾಗಿ ಶುರು ಮಾಡಲು ಅಲ್ಲಿ ನಿರ್ಧರಿಸಲಾಗಿದೆ. ಇದಕ್ಕಾಗಿ ತೇಲುವ ಥಿಯೇಟರ್ ಕಾರ್ಯ ನಿರ್ವಹಿಸಲಿದೆ. ಪ್ಯಾರಿಸ್‌ನ ನದಿಯ ಮೇಲೆ ಬೋಟ್‌ಗಳಲ್ಲಿ ಕುಳಿತು ಸಿನಿಮಾ ನೋಡಬಹುದು. ಅದೂ ಕೂಡ ವ್ಯಕ್ತಿಗತ ಅಂತರ ಕಾಯ್ದುಕೊಂಡು. ಪ್ರತಿ ಬೇಸಿಗೆಯಲ್ಲಿ ಇಲ್ಲಿನ ಸಿಯನ್ನಾ ನದಿ ತೀರದಲ್ಲಿ ನಿರ್ಮಿಸಲಾಗುವ ಕೃತಕ ಬೀಚ್ಗಳಲ್ಲಿ ನಡೆಸಲಾಗುವ ಪ್ಯಾರಿಸ್ ಪ್ಲೇಗಸ್‌ಉತ್ಸವದಲ್ಲಿ ಈ ತೇಲುವ ಥಿಯೇಟರ್ ಪರಿಕಲ್ಪನೆ ಸಿದ್ಧಪಡಿಸಲಾಗಿದೆ. ಸುಮಾರು 38 ಬೋಟ್‌ಗಳು ಕೆರೆಯ ರೀತಿ ಇರುವ ಪ್ರದೇಶದಲ್ಲಿ ಇರಬಹುದು. ಕೆಲವು ಬೋಟ್‌ಗಳಲ್ಲಿ ಇಬ್ಬರು ಕೂರಬಹುದಾದರೆ, ಇನ್ನು ಕೆಲವು ಬೋಟ್‌ಗಳಲ್ಲಿ ಆರು ಮಂದಿಯವರೆಗೆ ಕೂರಬಹುದು. ಇದರಲ್ಲಿ ಆರಾಮದಾಯಕ ಸೀಟುಗಳನ್ನು ಅಳವಡಿಸಲಾಗಿದ್ದು ವಿಶಿಷ್ಟ ಅನುಭವ ನೀಡಲಿದೆ ಎಂದು ಆಯೋಜಕರು ತಿಳಿಸಿದ್ದಾರೆ.
ಇದಕ್ಕೆ ಯಾವುದೇ ಪ್ರವೇಶ ಶುಲ್ಕವಿಲ್ಲ. ಬೋಟ್‌ಗಳಲ್ಲಿ ಪ್ರಯಾಣಿಸಲು ಟಿಕೆಟ್ ಪಡೆದು ಸಿನಿಮಾ ವೀಕ್ಷಿಸಬಹುದು ಎಂದು ಆಯೋಜಕರು ತಿಳಿಸಿದ್ದಾರೆ. ಜುಲೈ 18ರಂದು ಪ್ರದರ್ಶನ ಇರಲಿದ್ದು, 15ರವರೆಗೆ ಸ್ಥಳೀಯರು ಟಿಕೆಟ್ ಕಾದಿರಿಸಬಹುದು. ಇನ್ನು ಈ ಹಿಂದೆ ಅಮೆರಿಕದಲ್ಲಿ ಡ್ರೈವ್-ಇನ್ ಚಿತ್ರಮಂದಿರಗಳ ಕಲ್ಪನೆಗೆ ಮತ್ತೆ ಚಾಲನೆ ಸಿಕ್ಕಿದ್ದು, ಪಾರ್ಕಿಂಗ್ ತಾಣದಲ್ಲಿ ಬೃಹತ್ ಪರದೆಗಳ ಮೇಲೆ ಸಿನಿಮಾ ಪ್ರದರ್ಶಿಸಿದರೆ, ಜನರು ತಮ್ಮ ವಾಹನಗಳಲ್ಲಿಯೇ ಕುಳಿತು ಚಿತ್ರ ನೋಡುವ ವ್ಯವಸ್ಥೆ ಮಾಡಲಾಗಿತ್ತು.