ಮಂಗಳೂರು/ಉಡುಪಿ:ಯೇಸು ಕ್ರಿಸ್ತರು ಶಿಲುಬೆಯಲ್ಲಿ ಮರಣಿಸಿದ ದಿನದ ಸ್ಮರಣಾರ್ಥ ಕರಾವಳಿ ಮತ್ತು ಒಳನಾಡಿನಾದ್ಯಂತ ಕ್ರೈಸ್ತರು ಎ. 19ರಂದು ಶುಭ ಶುಕ್ರವಾರವನ್ನು ಆಚರಿಸಿದರು. ಆ ಪ್ರಯುಕ್ತ ಚರ್ಚ್‌ಗಳಲ್ಲಿ ದಿನವಿಡೀ ವಿಶೇಷ ಪ್ರಾರ್ಥನೆ, ಶಿಲುಬೆಯ ಆರಾಧನೆ ಮತ್ತು ಇತರ ಕಾರ್ಯಕ್ರಮಗಳು ನಡೆದವು.
ಚರ್ಚ್‌ಗಳಲ್ಲಿ ಶುಭ ಶುಕ್ರವಾರ ನಡೆದ ಪ್ರಾರ್ಥನೆ, ಧ್ಯಾನ, ಶಿಲುಬೆಯ ಆರಾಧನೆ ಕಾರ್ಯಕ್ರಮಗಳಲ್ಲಿ ಕ್ರೈಸ್ತರು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.
ಬಿಷಪ್ ನೇತೃತ್ವ
ಮಂಗಳೂರಿನ ಬಿಷಪ್ ರೆ| ಡಾ| ಪೀಟರ್ ಪಾವ್ಲ್ ಸಲ್ಡಾನ್ಹಾ ಅವರು ಕೊಡಿಯಾಲ್ಬೈಲ್ನ ಬಿಷಪ್ಸ್ ಹೌಸ್ ಚಾಪೆಲ್ನಲ್ಲಿ ಮಧ್ಯಾಹ್ನ ನಡೆದ ಶಿಲುಬೆಯ ಹಾದಿ ಮತ್ತು ಸಂಜೆ ನಡೆದ ಪ್ರಾರ್ಥನ ಕಾರ್ಯಕ್ರಮಗಳ ನೇತೃತ್ವ ವಹಿಸಿದ್ದರು. ಶಿಲುಬೆಯ ಹಾದಿ ಕಾರ್ಯಕ್ರಮದಲ್ಲಿ ಧರ್ಮ ಪ್ರಾಂತದ ಪ್ರಧಾನ ಗುರು ಮೊ| ಮ್ಯಾಕ್ಸಿಂ ಎಲ್. ನೊರೋನ್ಹಾ, ಸಾರ್ವಜನಿಕ ಸಂಪರ್ಕ ಅಧಿಕಾರಿ ಫಾ| ವಿಕ್ಟರ್ ವಿಜಯ್ ಲೋಬೊ ಮತ್ತು ಇತರ ಗುರುಗಳು ಉಪಸ್ಥಿತರಿದ್ದರು.
ಶಿಲುಬೆಯ ಹಾದಿ ಮನನ ಮಾಡುವ ಸಂದರ್ಭದಲ್ಲಿ ಸಂಕಷ್ಟಗಳಲ್ಲಿರುವ ಜನರಿಗಾಗಿ ಮತ್ತು ಲೋಕ ಕಲ್ಯಾಣಕ್ಕಾಗಿ ವಿಶೇಷ ಪ್ರಾರ್ಥಿಸಲಾಯಿತು.
Advertisement
ಯೇಸು ಕ್ರಿಸ್ತರಿಗೆ ಶಿಲುಬೆಯ ಮರಣ ಶಿಕ್ಷೆ ವಿಧಿಸಿದಲ್ಲಿಂದ ಮೊದಲ್ಗೊಂಡು ಅವರು ಶಿಲುಬೆಯಲ್ಲಿ ಮರಣವನ್ನಪ್ಪಿ ಅವರ ಶರೀರವನ್ನು ಸಮಾಧಿ ಮಾಡುವಲ್ಲಿ ವರೆಗಿನ 14 ಪ್ರಮುಖ ಘಟನಾವಳಿಗಳಿಗೆ ಸಂಬಂಧಿಸಿದ ‘ಶಿಲುಬೆಯ ಹಾದಿ ‘ (ವೇ ಆಫ್ ದಿ ಕ್ರಾಸ್) ಆಚರಣೆಯನ್ನು ಚರ್ಚ್ ಮತ್ತು ಚರ್ಚ್ ಆವರಣದಲ್ಲಿ ನಡೆಸುವ ಮೂಲಕ ಯೇಸು ಕ್ರಿಸ್ತರು ಅನುಭವಿಸಿದ ಯಾತನೆಯನ್ನು ಸ್ಮರಿಸಿದರು. ಶುಭ ಶುಕ್ರವಾರದ ದಿನ ಚರ್ಚ್‌ಗಳಲ್ಲಿ ಘಂಟೆಗಳ ದನಿ ಇರುವುದಿಲ್ಲ; ಬಲಿ ಪೂಜೆಯ ಸಂಭ್ರಮವೂ ಇಲ್ಲ. ಮೌನ ವಾತಾವರಣದಲ್ಲಿ ಪ್ರಾರ್ಥನೆ ಸಲ್ಲಿಸುವುದು ದಿನದ ವೈಶಿಷ್ಟ.
ಮಂಗಳೂರಿನ ಬಿಷಪ್ ರೆ| ಡಾ| ಪೀಟರ್ ಪಾವ್ಲ್ ಸಲ್ಡಾನ್ಹಾ ಅವರು ಕೊಡಿಯಾಲ್ಬೈಲ್ನ ಬಿಷಪ್ಸ್ ಹೌಸ್ ಚಾಪೆಲ್ನಲ್ಲಿ ಮಧ್ಯಾಹ್ನ ನಡೆದ ಶಿಲುಬೆಯ ಹಾದಿ ಮತ್ತು ಸಂಜೆ ನಡೆದ ಪ್ರಾರ್ಥನ ಕಾರ್ಯಕ್ರಮಗಳ ನೇತೃತ್ವ ವಹಿಸಿದ್ದರು. ಶಿಲುಬೆಯ ಹಾದಿ ಕಾರ್ಯಕ್ರಮದಲ್ಲಿ ಧರ್ಮ ಪ್ರಾಂತದ ಪ್ರಧಾನ ಗುರು ಮೊ| ಮ್ಯಾಕ್ಸಿಂ ಎಲ್. ನೊರೋನ್ಹಾ, ಸಾರ್ವಜನಿಕ ಸಂಪರ್ಕ ಅಧಿಕಾರಿ ಫಾ| ವಿಕ್ಟರ್ ವಿಜಯ್ ಲೋಬೊ ಮತ್ತು ಇತರ ಗುರುಗಳು ಉಪಸ್ಥಿತರಿದ್ದರು.
Related Articles
ಉಡುಪಿ ಜಿಲ್ಲೆಯಲ್ಲಿ ಶುಭ ಶುಕ್ರವಾರ ಆಚರಣೆ
ಉಡುಪಿ: ಜಿಲ್ಲೆಯಾದ್ಯಂತ ಉಪವಾಸ ಧ್ಯಾನ ಮತ್ತು ಪ್ರಾರ್ಥನೆಯೊಂದಿಗೆ ಶುಭ ಶುಕ್ರವಾರವನ್ನು ಆಚರಿಸಲಾಯಿತು. ಜಿಲ್ಲೆಯ ಎಲ್ಲ ಚರ್ಚುಗಳಲ್ಲೂ ಬೆಳಗ್ಗಿನಿಂದ ಪ್ರಾರ್ಥನೆ, ಧ್ಯಾನ, ಯೇಸುವಿನ ಶಿಲುಬೆಯ ಹಾದಿಯ ವಾಚನ ಜರುಗಿತು. ಮಿಲಾಗ್ರಿಸ್ ಕ್ಯಾಥೆಡ್ರಲ್ನಲ್ಲಿ ಬಿಷಪ್ ರೈ| ರೆ| ಡಾ| ಜೆರಾಲ್ಡ್ ಐಸಾಕ್ ಲೋಬೊ ಪ್ರಾರ್ಥನ ವಿಧಿಯನ್ನು ನೆರವೇರಿಸಿದರು. ಉಡುಪಿ ಜಿಲ್ಲೆಯ ಹಲವು ಚರ್ಚುಗಳಲ್ಲಿ ಯೇಸು ಕ್ರಿಸ್ತರ ಬಂಧನ, ಶಿಲುಬೆಯ ಮೇಲೆ ಮರಣವನ್ನಪ್ಪುವ ತನಕದ ಘಟನೆಗಳನ್ನು ನಟನೆಯ ಮೂಲಕ ಪ್ರಸ್ತುತಪಡಿಸಲಾಯಿತು. ಎಲ್ಲ ಚರ್ಚುಗಳಲ್ಲಿ ಧರ್ಮಗುರುಗಳು ರಕ್ತವರ್ಣದ ಪೂಜಾ ಬಟ್ಟೆಯನ್ನು ಧರಿಸಿ ಯೇಸು ಕ್ರಿಸ್ತನ ಕೊನೆಯ ಗಳಿಗೆಗಳ ವತ್ತಾಂತ ಓದಿದರು. ಬಳಿಕ ಶಿಲುಬೆಯನ್ನು ಮೆರವಣಿಗೆಯಲ್ಲಿ ತಂದು ಭಕ್ತರು ಮುತ್ತಿಟ್ಟು ತಮ್ಮ 40 ದಿನಗಳ ತ್ಯಾಗದ ಉಳಿಕೆಯ ಹಣವನ್ನು ಬಡ ಬಗ್ಗರಿಗಾಗಿ ನೀಡಿದರು.
ಈಸ್ಟರ್ ಹಬ್ಬದ ಸಂದೇಶ
ಮಂಗಳೂರು: ಯೇಸುಕ್ರಿಸ್ತರು ದೇವ ಪುತ್ರರು. ಅವರು ನಮ್ಮಂತೆಯೇ ಇದ್ದುಕೊಂಡು, ಸಂಕಟಗಳನ್ನು ಅನುಭವಿಸಿದರು. ಆದರೆ ಪಾಪವನ್ನು ಮಾತ್ರ ಮಾಡಲಿಲ್ಲ ಎಂದು ಮಂಗಳೂರು ಧರ್ಮಪ್ರಾಂತ್ಯದ ಬಿಷಪ್ ರೈ| ಡಾ| ಪೀಟರ್ ಪಾವ್ಲ್ ಸಲ್ದಾನ್ಹಾ ಈಸ್ಟರ್ ಹಬ್ಬದ ಸಂದೇಶದಲ್ಲಿ ತಿಳಿಸಿದ್ದಾರೆ. ದೇವರು ನೀಡಿದ ಪುನರುಜ್ಜೀವನದ ಆಶ್ವಾಸನೆ ಹೇಗೆ ಪವಿತ್ರ ಗ್ರಂಥದಲ್ಲಿ ಲಿಖೀತವಾಗಿದೆಯೋ ಅದೇರೀತಿ ವಸಂತ ಋತುವಿನಲ್ಲಿ ಉದುರುವ ಪ್ರತಿಯೊಂದು ಎಲೆಯಲ್ಲೂ ಸಾಕ್ಷಾತ್ಕರಿಸಲ್ಪಟ್ಟಂತೆ ತೋರುತ್ತದೆ. ಉದುರುವ ಎಲೆ ಮುಂದಿನ ಚಿಗುರಿನ ಸೂಚನೆ. ಪುನರುಜ್ಜೀವನದ ದ್ಯೋತಕವಾದ ಈಸ್ಟರ್ ಹಬ್ಬ ಪ್ರತಿಯೊಬ್ಬರ ಪುನರುಜ್ಜೀವನಕ್ಕೂ ನಾಂದಿಯಾಗಿದೆ ಎಂದಿದ್ದಾರೆ. ಆತ್ಮಸಾಕ್ಷಿ ವಂಚಿಸುವ ತಪ್ಪಿಗಿಂತ, ಮನಸ್ಸನ್ನು ನಿರಾಳಗೊಳಿಸುವ ನೈಜತೆಯ ಸತ್ಯವು ಮಿಗಿಲಾದ್ದು ಎಂಬುದನ್ನು ದೃಢಪಡಿಸಲು ಯೇಸು ನಮಗೆ ನೀಡಿದ ನಂಬುಗೆ ಮತ್ತು ಭರವಸೆಯ ವಿಜಯೋತ್ಸವವೇ ಈಸ್ಟರ್ ಎಂದಿದ್ದಾರೆ.
Advertisement