Advertisement

Malpe ಕೆಂಡಕ್ಕೆ ಬಿದ್ದ ಅಯ್ಯಪ್ಪ ಭಕ್ತ

12:23 AM Jan 04, 2024 | Team Udayavani |

ಮಲ್ಪೆ: ಮಲ್ಪೆ ಅಯ್ಯಪ್ಪ ಮಂದಿರದ ವಾರ್ಷಿಕ ಉತ್ಸವದ ಅಂಗವಾಗಿ ಮಂಗಳವಾರ ಬೆಳಗಿನ ಜಾವ ನಡೆಯುವ ಕೆಂಡಸೇವೆ ವೇಳೆ ಅಯ್ಯಪ್ಪ ಮಾಲಾಧಾರಿಯೊಬ್ಬರು ಆಯತಪ್ಪಿ ಬೆಂಕಿಗೆ ಬಿದ್ದು ತೀವ್ರ ಗಾಯಗೊಂಡಿದ್ದಾರೆ.

Advertisement

ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಕರಾವಳಿಯಲ್ಲಿ ಸಾಂಪ್ರದಾಯಿಕವಾಗಿ ಅಯ್ಯಪ್ಪ ಮಾಲಾಧಾರಿಗಳ ಕೆಂಡಸೇವೆ ಪ್ರತೀ ವರ್ಷ ನಡೆಯುತ್ತದೆ. ಅದರಂತೆ ಕೆಂಡ ಹಾಯುವ ವೇಳೆ ಅಯ್ಯಪ್ಪ ಮಾಲಾಧಾರಿ ಆಯತಪ್ಪಿ ಬೆಂಕಿಗೆ ಬಿದ್ದರು.

ತತ್‌ಕ್ಷಣ ಇತರ ಮಾಲಾಧಾರಿಗಳು ಅವರ ನೆರವಿಗೆ ಬಂದು ಉಪಚರಿಸಿದರು. ಈ ದೃಶ್ಯ ಸ್ಥಳೀಯರ ಮೊಬೈಲ್‌ನಲ್ಲಿ ಸೆರೆಯಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next