Advertisement

5 ದಿನ ಬೀದಿ ಮಡಸ್ನಾನ ನಡೆಸುವ ಭಕ್ತ

08:48 AM Nov 22, 2017 | Team Udayavani |

ಸುಬ್ರಹ್ಮಣ್ಯ: ಚರ್ಮ ರೋಗ ನಿವಾರಣೆಗೆ ಚಂಪಾಷಷ್ಠಿ ವೇಳೆ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ನಡೆಯುವ ಸೇವೆಗಳಲ್ಲಿ ಬೀದಿ ಮಡ ಸ್ನಾನವೂ ಒಂದು. ಈ ಸೇವೆ ಯನ್ನು ಕಳೆದ 14 ವರ್ಷಗಳಿಂದ ಭಕ್ತ ರೊಬ್ಬರು ಪ್ರತಿ ವರ್ಷ 5 ದಿನವೂ ನಡೆಸುತ್ತಿದ್ದಾರೆ. ಧರ್ಮ ಸ್ಥಳದ ಹರೀಶ್‌ ಕೊಠಾರಿ ಅವರೇ ಹೀಗೆ ವಿಶಿಷ್ಟ ಸೇವೆ ಸಲ್ಲಿಸುವ ಭಕ್ತ.

Advertisement

2 ಕಿ.ಮೀ. ಬೀದಿ ಮಡಸ್ನಾನ
ಕುಮಾರಧಾರೆಯಿಂದ ದೇಗುಲ ತನಕ 2 ಕಿ.ಮೀ. ರಸ್ತೆ ಯಲ್ಲೇ ಬೀದಿಮಡಸ್ನಾನ ಮಾಡು ವುದು ಸುಲಭ ದ್ದಲ್ಲ. ಈ ಸೇವೆ ಯನ್ನು ಕಳೆದ 14 ವರ್ಷದಿಂದ ಷಷ್ಠಿ ಸಂದರ್ಭ 5 ದಿನ ನಡೆಸುತ್ತಾರೆ ಎಂಬುದೇ ಅಚ್ಚರಿ ಯದ್ದು. ಉರುಳು ಸೇವೆ ಸಂದರ್ಭ ಸಾಮಾನ್ಯ ಭಕ್ತರು ಅಲ್ಲಲ್ಲಿ ಬೀದಿ ಮಡಸ್ನಾನವನ್ನು ಅಲ್ಪಕಾಲ ದಣಿ ವಾರಿಸಲು ಸ್ಥಗಿತ ಮಾಡು ತ್ತಾರೆ. ಆದರೆ ಹರೀಶ್‌ ಹಾಗಲ್ಲ. ಎಲ್ಲೂ ನಿಲ್ಲದೇ ಕೇವಲ 45 ನಿಮಿಷ ದಲ್ಲಿ ಈ ಸೇವೆ ಪೂರೈಸುತ್ತಾರೆ.

ಧರ್ಮಸ್ಥಳದಲ್ಲೂ  ಸೇವೆ 
ಸುಬ್ರಹ್ಮಣ್ಯದಲ್ಲಿ ವಹಿವಾಟು ನಡೆಸು ತ್ತಿರುವ ಹರೀಶ್‌ ಅವರು 22 ವರ್ಷ ಗಳಿಂದ ಧರ್ಮಸ್ಥಳ ದಲ್ಲೂ ಸೇವೆ ಸಲ್ಲಿಸುತ್ತಾರೆ. ಕಳೆದ 20 ವರ್ಷ ಗಳಿಂದ ಸುಬ್ರಹ್ಮಣ್ಯದ ಬೀದಿ ಯಲ್ಲಿ ಮಡಸ್ನಾನ ನಡೆಸುವ ಕೆಲವು ಭಕ್ತರೂ ಇಲ್ಲಿದ್ದಾರೆ. ಲಕ್ಷದೀಪೋತ್ಸವದಂದು ಶ್ರೀ ದೇವರ ಚಂದ್ರಮಂಡಲ ರಥೋ ತ್ಸವ ನೆರವೇರಿದ ಬಳಿಕ ಸುಬ್ರಹ್ಮಣ್ಯ ದೇವರಿಗೆ ಅತ್ಯಂತ ಪ್ರಿಯ ವಾದ ಬೀದಿಮಡಸ್ನಾನ ಸೇವೆ ನಡೆಯುತ್ತದೆ. ಚೌತಿ, ಪಂಚಮಿ ದಿನ ಅಧಿಕ ಸಂಖ್ಯೆಯ ಭಕ್ತರು ಇಲ್ಲಿ ಬೀದಿ ಮಡಸ್ನಾನ ನಡೆಸುತ್ತಾರೆ. ಬೆಳಗ್ಗೆ ಸಂಜೆ, ರಾತ್ರಿ ಈ ಸೇವೆ ಸಾಮಾನ್ಯ ವಾಗಿದ್ದು, ರಸ್ತೆಯಲ್ಲಿ ಈ ಬಗ್ಗೆ ವಾಹನ ಚಾಲಕರಿಗೆ ತಿಳಿಯಲು ಫ‌ಲಕಗಳನ್ನೂ ಅಳವಡಿಸಲಾಗಿದೆ.

ನಂಬಿಕೆಯ ಸೇವೆ
ಇದು ಹರಕೆ ಹೊತ್ತು ಸಲ್ಲಿಸುವುದಲ್ಲ. ಬದಲಾಗಿ ಭಕ್ತಿಯಿಂದ ನಡೆಸುವ ಸೇವೆ. ಇದರಿಂದ ನನಗೆ ಒಳಿತಾಗಿದ್ದು, ದೇವರ ಆಶೀರ್ವಾದ ದೊರೆತಿದೆ. ಮುಂದೆಯೂ ಸೇವೆ ಮುಂದುವರಿಸುತ್ತೇನೆ 
 ಹರೀಶ್‌ ಕೊಠಾರಿ, ಧರ್ಮಸ್ಥಳ

ಬಾಲಕೃಷ್ಣ  ಭೀಮಗುಳಿ

Advertisement
Advertisement

Udayavani is now on Telegram. Click here to join our channel and stay updated with the latest news.

Next