Advertisement
ಯಾರು ಅರ್ಹರು?ಅಪ್ರಾಪ್ತ ವಯಸ್ಕರು ಸಹಿತ ಯಾವು ದೇ ವ್ಯಕ್ತಿ ಎಸ್‌ಬಿಐ ವರ್ಷಾಶನ ಠೇವಣಿ ಯೋಜನೆಯನ್ನು ತೆರೆಯಬ ಹುದು. ಆದರೆ ಎನ್‌ಆರ್‌ಐ ಅಥವಾ ಎನ್‌ಜಿಒ ವಿಭಾಗಗಳಲ್ಲಿ ಖಾತೆ ಹೊಂದಿದ ಯಾವುದೇ ಗ್ರಾಹಕರು ಎಸ್‌ಬಿಐ ವರ್ಷಾಶನ ಠೇವಣಿ ಯೋಜನೆಗೆ ಅನರ್ಹರಾಗಿರುತ್ತಾರೆ.
ಎಸ್‌ಬಿಐ ವರ್ಷಾಶನ ಠೇವಣಿ ಯೋಜನೆಯ ಹೂಡಿಕೆದಾರರು 36 ತಿಂಗಳು (3 ವರ್ಷ), 60 ತಿಂಗಳು (5 ವರ್ಷ), 84 ತಿಂಗಳು (7 ವರ್ಷ), ಅಥವಾ 120 ತಿಂಗಳು (10 ವರ್ಷ) ಗಳಿಂದ ಠೇವಣಿ ಅವಧಿಯನ್ನು ಆರಿಸಬೇಕಾಗುತ್ತದೆ. ಹೂಡಿಕೆಯ ಮೇಲಿನ ಬಡ್ಡಿದರವು ಎಫ್ಡಿ ದರದಂತೆ ಅನ್ವಯಿಸುತ್ತದೆ. ಉದಾಹರಣೆಗೆ ನೀವು 5 ವರ್ಷಗಳ ವರೆಗೆ ಠೇವಣಿ ಮಾಡಿದರೆ, 5 ವರ್ಷಗಳ ಸ್ಥಿರ ಠೇವಣಿ(ಎಫ್ಡಿ)ಗೆ ಅನ್ವಯವಾಗುವ ಬಡ್ಡಿದರಕ್ಕೆ ಅನುಗುಣವಾಗಿ ನೀವು ಬಡ್ಡಿಯನ್ನು ಪಡೆಯುತ್ತೀರಿ. ಇದರಲ್ಲಿ ಸಿಂಗಲ್ ಅಥವಾ ಜಾಯಿಂಟ್ ಖಾತೆಯನ್ನು ಹೊಂದಬಹುದಾಗಿದೆ. ಬಡ್ಡಿ ದರ ಎಷ್ಟು?
ಎಸ್‌ಬಿಐ ವರ್ಷಾಶನ ಯೋಜನೆಗೆ ಅನ್ವಯವಾಗುವ ಬಡ್ಡಿದರ ಎಸ್‌ಬಿಐ ಸ್ಥಿರ ಠೇವಣಿ (ಎಫ್ಡಿ)ಯಂತೆಯೇ ಇರುತ್ತದೆ. ನೀವು 5 ವರ್ಷಗಳ ಕಾಲ ಹಣವನ್ನು ಠೇವಣಿ ಮಾಡಿದ್ದರೆ, ಅನಂತರ 5 ವರ್ಷಗಳ ಸ್ಥಿರ ಠೇವಣಿಗೆ ಅನ್ವಯವಾಗುವ ಬಡ್ಡಿದರಕ್ಕೆ ಅನುಗುಣವಾಗಿ ಬಡ್ಡಿಯನ್ನು ಮಾತ್ರ ಪಡೆಯುತ್ತೀರಿ. ಪ್ರಸ್ತುತ ಎಸ್‌ಬಿಐ 5 ರಿಂದ 10 ವರ್ಷಗಳ ಅವಧಿಯ ಠೇವಣಿಗಳ ಮೇಲೆ ಶೇ. 5.40ರಷ್ಟು ಬಡ್ಡಿ ದರವನ್ನು ನೀಡುತ್ತದೆ. 3ರಿಂದ 5 ವರ್ಷದೊಳಗಿನ ಅವಧಿಯ ಎಫ್ಡಿಗಳಿಗೆ ಎಸ್‌ಬಿಐ ಶೇ. 5.30ರಷ್ಟು ಬಡ್ಡಿದರವನ್ನು ನೀಡುತ್ತದೆ.
Related Articles
ಎಸ್‌ಬಿಐ ವರ್ಷಾಶನ ಠೇವಣಿ ಯೋಜನೆಯಲ್ಲಿ 60 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಹಿರಿಯ ನಾಗರಿಕರು ನಿಗದಿತ ಬಡ್ಡಿದರಕ್ಕಿಂತ ಶೇ. 0.50ರಷ್ಟು ಹೆಚ್ಚು ಪಡೆಯಲಿದ್ದಾರೆ. ಆದರೆ ಎಸ್‌ಬಿಐ ಸಿಬಂದಿ ಮತ್ತು ಎಸ್‌ಬಿಐ ಪಿಂಚಣಿದಾರರಿಗೆ ಬಡ್ಡಿದರವು ಶೇ. 1ರಷ್ಟು ಹೆಚ್ಚಿರಲಿದೆ.
Advertisement
ಪಾವತಿ ಸಮಯವರ್ಷಾಶನ ಪಾವತಿ ಠೇವಣಿ ತಿಂಗಳ ಕಡೆಯ ದಿನದಂದು ಪಾವತಿ ಮಾಡಲಾಗುತ್ತದೆ. ಒಂದು ವೇಳೆ ತಿಂಗಳಿನ 29, 30 ಮತ್ತು 31ನೇ ತಾರೀಕಿನಂದು ಆಗದೇ ಇದ್ದರೆ ಮುಂದಿನ ತಿಂಗಳ 1ರಂದು ಪಾವತಿಸಲಾಗುತ್ತದೆ. ಬಡ್ಡಿ ಮೊತ್ತದ ಮೇಲೆ ವರ್ಷಾಶನ ಪಾವತಿಗಳು ಟಿಡಿಎಸ್‌ಗೆ ಒಳಪಟ್ಟಿರುತ್ತವೆ ಎಂಬುದನ್ನು ಹೂಡಿಕೆದಾರರು ಗಮನಿಸಬೇಕು. ಇದನ್ನು ಲಿಂಕ್ಡ್ ಸೇವಿಂಗ್ಸ್ ಬ್ಯಾಂಕ್ (ಎಸ್‌ಬಿ) ಅಥವಾ ಕರೆಂಟ್ ಅಕೌಂಟ್ (ಸಿಎ) ಖಾತೆಗೆ ಜಮೆ ಮಾಡಲಾಗುತ್ತದೆ. ಇತರ ಸೌಲಭ್ಯಗಳು
ಎಸ್‌ಬಿಐ ವರ್ಷಾಶನ ಠೇವಣಿ ಯೋಜನೆಯೊಂದಿಗೆ ನಾಮನಿ ರ್ದೇಶನ ಸೌಲಭ್ಯವನ್ನು ನೀಡುತ್ತದೆ. ಇದಲ್ಲದೆ ವಿಶೇಷ ಪ್ರಕರಣಗಳಲ್ಲಿ ವರ್ಷಾಶನದ ಬಾಕಿ ಮೊತ್ತದ ಶೇ. 75 ರಷ್ಟು ಓವರ್‌ಡ್ರಾಫ್ಟ್ ಅಥವಾ ಸಾಲವನ್ನು ನೀಡಬಹುದು. ಈ ಯೋಜನೆಯ ಅವಧಿ, ಮೊತ್ತ ಹಾಗೂ ಬಡ್ಡಿ ದರಗಳ ಕುರಿತ ಪೂರ್ಣ ಮಾಹಿತಿಗೆ ನಿಮ್ಮ ಸಮೀಪದ ಎಸ್‌ಬಿಐ ಬ್ರ್ಯಾಂಚ್ ಅನ್ನು ಸಂಪರ್ಕಿಸಿ.