Advertisement
ದ.ಕ. ಮೊಗವೀರ ಮಹಾಜನ ಸಂಘ, ಮಲ್ಪೆ ಮೀನುಗಾರರ ಸಂಘ, ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್ ಸೇರಿದಂತೆ ವಿವಿಧ ಮೀನುಗಾರರ ಸಂಘಟನೆಗಳು ಕರಾವಳಿ ಕರ್ನಾಟಕ ಮೀನುಗಾರರ ಮುಖಂಡ ಡಾ| ಜಿ. ಶಂಕರ್ ನೇತೃತ್ವದಲ್ಲಿ ಮುಖ್ಯಮಂತ್ರಿಗಳಿಗೆ ಬುಧವಾರ ನಗರದ ರೇಸ್‌ಕೋರ್ಸ್ ರಸ್ತೆಯ ಶಕ್ತಿಭವನದಲ್ಲಿ ಮನವಿ ಸಲ್ಲಿಸಿದವು.
Related Articles
Advertisement
ಮುಖ್ಯಾಂಶಗಳು– ಮೀನುಗಾರರ ಸಹಕಾರಿ ಸಂಘಗಳ ಪುನಶ್ಚೇತನಕ್ಕೆ ವಿಶೇಷ ಅನುದಾನ ಘೋಷಣೆ ಮಾಡಬೇಕು.
– ಒಣಮೀನು ವ್ಯಾಪಾರಸ್ಥರಿಗೆ ಕೇಂದ್ರ ಪುರಸ್ಕೃತ ಯೋಜನೆಗಳಂತೆ ಸೋಲಾರ್ ಡ್ರೈಯರ್ ಖರೀದಿಸಲು ವಿಶೇಷ ಸಹಾಯಧನ ನೀಡಬೇಕು.
– ಡೀಸೆಲ್‌ನ ರಸ್ತೆ ಕರ ಮನ್ನಾ ಮಾಡಬೇಕು, ನಾಡದೋಣಿ ಮೀಗಾರರಿಗೆ ಎಂಜಿನ್ ಸಬ್ಸಿಡಿ ನೀಡಿ, ಪ್ರತಿ ಪರ್ಮಿಟ್‌ಗೆ 400 ಲೀ. ಸೀಮೆಣ್ಣೆ ನೀಡಬೇಕು.
– ಯಾಂತ್ರಿಕೃತ ಮೀನುಗಾರಿಕೆ ದೋಣಿಗೆ ಉಪಯೋಗಿಸುವ ಕರ ರಹಿತ ಡೀಸೆಲ್ ಮಿತಿಯಿಂದ ದಿನಕ್ಕೆ 300 ಲೀ.ನಿಂದ 500 ಲೀ.ಗೆ ಹೆಚ್ಚಿಸಬೇಕು. ತಲಾ 25 ಲಕ್ಷ ರೂ. ಪರಿಹಾರಕ್ಕೆ ಮನವಿ
ಮಲ್ಪೆಯ ಸುವರ್ಣ ತ್ರಿಭುಜ ಬೋಟು ಆಳಸಮುದ್ರದಲ್ಲಿ ಕಣ್ಮರೆಯಾಗಿರುವ ಪ್ರಕರಣದಲ್ಲಿ ಅದರಲ್ಲಿ ಮೀನುಗಾರರ ಕುಟುಂಬಕ್ಕೆ ಸರಕಾರದಿಂದ ತಲಾ 25 ಲಕ್ಷ ರೂ. ಪರಿಹಾರವನ್ನು ಬಜೆಟ್‌ನಲ್ಲಿ ಘೋಷಿಸಬೇಕು. ಬೋಟಿನ ವಿಮಾ ಮೊತ್ತಕ್ಕೆ ಸಂಬಂಧಿಸಿದಂತೆ ಸೂಕ್ತ ನಿರ್ದೇಶನ ನೀಡಬೇಕು ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಮೀನುಗಾರರ ಮುಖಂಡರ ನಿಯೋಗ ಮನವಿ ಮಾಡಿತು. ಕೃಷಿ, ವೈದ್ಯ ಕಾಲೇಜು ಮಂಜೂರಾತಿಗೆ ಮನವಿ
ಉಡುಪಿ: ಬಜೆಟ್‌ನಲ್ಲಿ ಉಡುಪಿಯಲ್ಲಿ ಸರಕಾರಿ ವೈದ್ಯಕೀಯ ಕಾಲೇಜು, ಬ್ರಹ್ಮಾವರದಲ್ಲಿ ಸರಕಾರಿ ಕೃಷಿ ಕಾಲೇಜು ಮಂಜೂರು ಮಾಡುವ ಜತೆಗೆ ಮೀನುಗಾರಿಕೆಗೆ ವಿಶೇಷ ಅನುದಾನ ಘೋಷಣೆ ಮಾಡ ಬೇಕು ಎಂದು ಮುಖ್ಯಮಂತ್ರಿಗಳಿಗೆ ಉಡುಪಿ ಹಾಗೂ ಚಿಕ್ಕಮಗಳೂರು ಸಂಸದ ಶೋಭಾ ಕರಂದ್ಲಾಜೆ ನೇತೃ ತ್ವದ ನಿಯೋಗ ಮನವಿ ಮಾಡಿದೆ. ಬ್ರಹ್ಮಾವರ ಪುರಸಭೆಗೆ ಪ್ರಸ್ತಾವನೆ
ಬ್ರಹ್ಮಾವರ ವ್ಯಾಪ್ತಿಯ ಚಾಂತಾರು, ವಾರಂಬಳ್ಳಿ, ಹಂದಾಡಿ, ಹಾರಾಡಿ ಗ್ರಾ.ಪಂ. ವ್ಯಾಪ್ತಿಯಲ್ಲಿ 8 ಗ್ರಾಮಗಳಿದ್ದು, 27,713 ಹೆಕ್ಟೇರ್ ಭೂಪ್ರದೇಶ ವಿದೆ. 2010ರ ಜನಗಣತಿ ಪ್ರಕಾರ 30 ಸಾವಿರಕ್ಕೂ ಅಧಿಕ ಜನಸಂಖ್ಯೆಯಿದೆ. ಹೀಗಾಗಿ ಈ 4 ಗ್ರಾ.ಪಂ.ಗಳನ್ನು ಸೇರಿಸಿ ಬ್ರಹ್ಮಾವರ ಪುರಸಭೆ ಮಾಡ ಬೇಕು ಎಂದು ಮನವಿ ಮಾಡಿತು.