Advertisement

ಎ. 27: “ಎ ಡೇ ವಿತ್‌ ದ ಸೈಂಟ್‌ ದೆನ್‌ ಆ್ಯಂಡ್‌ ನೌ’ಕಾಫೀ ಟೇಬಲ್‌ ಬುಕ್‌ ಲೋಕಾರ್ಪಣೆ

02:13 AM Apr 25, 2019 | Sriram |

ಉಡುಪಿ: ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಶ್ರೀಪಾದರ 4 ಮತ್ತು 5ನೇ ಪರ್ಯಾಯದ ಒಂದು ದಿನದ ಚಟುವಟಿಕೆಗಳನ್ನು ಆಧರಿಸಿದ ಚಿತ್ರ ಸಂಪುಟ “ಎ ಡೇ ವಿತ್‌ ದ ಸೈಂಟ್‌ ದೆನ್‌ ಆ್ಯಂಡ್‌ ನೌ’ ಕಾಫಿಟೇಬಲ್‌ ಬುಕ್‌ ಎ. 27ರಂದು ಸಂಜೆ 4 ಗಂಟೆಗೆ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಅನಾವರಣಗೊಳ್ಳಲಿದೆ.

Advertisement

ಕರ್ನಾಟಕ ಸಂಸ್ಕೃತ ವಿ.ವಿ. ವಿಶ್ರಾಂತ ಕುಲಪತಿ ಪ್ರೊ| ಮಲ್ಲೇಪುರಂ ಜಿ. ವೆಂಕಟೇಶ್‌ ಚಿತ್ರ ಸಂಪುಟ ಅನಾವರಣ ಮಾಡುವರು. ಪರ್ಯಾಯ ಶ್ರೀ ಪಲಿಮಾರು ಮಠಾಧೀಶ‌ ಶ್ರೀ ವಿದ್ಯಾಧೀಶತೀರ್ಥರು, ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ಅನುಗ್ರಹ ಸಂದೇಶ ನೀಡುವರು. ತರಂಗ ವಾರಪತ್ರಿಕೆ ವ್ಯವಸ್ಥಾಪಕ ಸಂಪಾದಕಿ ಡಾ| ಸಂಧ್ಯಾ ಎಸ್‌. ಪೈ, ಮಣಿಪಾಲ ಮಾಹೆ ವಿ.ವಿ. ಸಹಕುಲಾಧಿಪತಿ ಡಾ| ಎಚ್‌.ಎಸ್‌. ಬಲ್ಲಾಳ್‌, ಮೂಡುಬಿದಿರೆ ಆಳ್ವಾಸ್‌ ಎಜುಕೇಶನ್‌ ಟ್ರಸ್ಟ್‌ ಅಧ್ಯಕ್ಷ ಡಾ| ಎಂ. ಮೋಹನ ಆಳ್ವ, ಮಣಿಪಾಲ ಮೀಡಿಯಾ ನೆಟ್‌ವರ್ಕ್‌ ಲಿ.ನ ಸಿಇಒ ವಿನೋದ್‌ ಕುಮಾರ್‌ ಭಾಗವಹಿಸುವರು ಎಂದು ಈ ಚಿತ್ರ ಸಂಪುಟವನ್ನು ರೂಪಿಸಿ ರುವ ಉದಯವಾಣಿ ಪತ್ರಿಕೆಯ ಹಿರಿಯ ಛಾಯಾಚಿತ್ರ ಪತ್ರಕರ್ತ ಆಸ್ಟ್ರೋ ಮೋಹನ್‌ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಸಂಪುಟ ವಿಶೇಷ
ಈ ಸಂಪುಟಕ್ಕೆ ತರಂಗ ವಾರಪತ್ರಿಕೆಯ ವ್ಯವಸ್ಥಾಪಕ ಸಂಪಾದಕಿ ಡಾ| ಸಂಧ್ಯಾ ಎಸ್‌. ಪೈ ಮುನ್ನುಡಿ ಬರೆದಿದ್ದಾರೆ. ರಾಜ್ಯಪಾಲ ವಜೂಭಾç ವಾಲಾ, ನಾಗಾಲ್ಯಾಂಡ್‌ ರಾಜ್ಯಪಾಲ ಪಿ.ಬಿ. ಆಚಾರ್ಯ, ಸಂಸದ ಲಾಲ್‌ಕೃಷ್ಣ ಆಡ್ವಾಣಿ, ಕೇಂದ್ರ ಸಚಿವೆ ಉಮಾಭಾರತಿ, ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ, ಧ‌ರ್ಮಸ್ಥಳ ಧ‌ರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ, ವಿದ್ಯಾವಾಚಸ್ಪತಿ ಡಾ| ಬನ್ನಂಜೆ ಗೋವಿಂದಾಚಾರ್ಯರು ಸಂದೇಶವನ್ನು ನೀಡಿದ್ದಾರೆ. ಒಟ್ಟು 108 ಪುಟಗಳ ಸಂಪುಟ ದಲ್ಲಿ ನಾಲ್ಕು ಅಧ್ಯಾಯಗಳಿದ್ದು, 118 ಚಿತ್ರಗಳಿವೆ. ಓರ್ವ ಸಂತನ ಚಟುವಟಿಕೆಗಳನ್ನು 16 ವರ್ಷ ಅಂತರದಲ್ಲಿ ಕಲಾತ್ಮಕವಾಗಿ ಸೆರೆಹಿಡಿಯಲಾಗಿದೆ ಎಂದರು. ಭೂತರಾಜ ಪ್ರಕಾಶನದ ಪ್ರಕಾಶಕಿ ಪ್ರವೀಣಾ ಮೋಹನ್‌ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next