Advertisement

1983 World Cup ಗೆಲುವಿನ ಸಂಭ್ರಮಾಚರಣೆಯಲ್ಲಿ ರವಿಶಾಸ್ತ್ರಿ

09:50 AM Jun 26, 2024 | Team Udayavani |

ಹೊಸದಿಲ್ಲಿ: 1983 ಜೂನ್ 25 ಭಾರತ ಕ್ರಿಕೆಟ್ ಪ್ರಪಂಚ ಎಂದೂ ಮರೆಯಲಾರದ ದಿನ. ಭಾರತವು ಕ್ರಿಕೆಟ್ ಪ್ರಪಂಚದಾದ್ಯಂತ ಹೊಸ ಮೆಟ್ಟಿಲನ್ನು ಏರಿತ್ತು. ಎರಡು ಬಾರಿಯ ಚಾಂಪಿಯನ್ ವೆಸ್ಟ್ ಇಂಡೀಸ್ ಅನ್ನು ಆಘಾತಕಾರಿಯಾಗಿ ಸೋಲಿಸಿ ಚೊಚ್ಚಲ ಕ್ರಿಕೆಟ್ ವಿಶ್ವಕಪ್ ಪ್ರಶಸ್ತಿಯನ್ನು ಲಂಡನ್‌ನ ಐಕಾನಿಕ್ ಲಾರ್ಡ್ಸ್ ಸ್ಟೇಡಿಯಂನಲ್ಲಿ ತನ್ನದಾಗಿಸಿಕೊಂಡಿತ್ತು.

Advertisement

ಕಪಿಲ್ ದೇವ್ ನಾಯಕತ್ವದಲ್ಲಿ ಐತಿಹಾಸಿಕ ವಿಜಯ ಕ್ರಿಕೆಟ್ ಆಟದ ಶಕ್ತಿಯನ್ನು ಬದಲಾಯಿಸಿ ಹೊಸ ದಿಕ್ಕಿನತ್ತ ಕರೆದೊಯ್ದಿತ್ತು. ಭಾರತವು ಕ್ರಿಕೆಟ್ ಗೀಳಿನ ಸೂಪರ್ ಪವರ್ ಆಗಿ ಹೊರಹೊಮ್ಮಲು ದಾರಿ ಮಾಡಿಕೊಟ್ಟಿತ್ತು.

ಭಾರತ ತಂಡದ ಮಾಜಿ ಆಲ್‌ರೌಂಡರ್ ಮತ್ತು ಮುಖ್ಯ ಕೋಚ್ ರವಿಶಾಸ್ತ್ರಿ ಅವರು ಕೆಲವು ಹಳೆಯ, ಯುವ ಕ್ರಿಕೆಟ್ ತಾರೆಯರೊಂದಿಗೆ ಐತಿಹಾಸಿಕ 1983 ಕ್ರಿಕೆಟ್ ವಿಶ್ವಕಪ್ ವಿಜಯೋತ್ಸವದ ಕೆಲವು ಕ್ಷಣಗಳನ್ನು ಬುಧವಾರ ಇನ್ ಸ್ಟಾಗ್ರಾಮ್ ಹಂಚಿಕೊಂಡಿದ್ದಾರೆ.

ಮಾಜಿ ಕ್ರಿಕೆಟಿಗ ಮತ್ತು ಬಿಸಿಸಿಐ ಅಧ್ಯಕ್ಷ ರೋಜರ್ ಬಿನ್ನಿ, ಸುನಿಲ್ ಗವಾಸ್ಕರ್ ಮತ್ತು ವಿಕೆಟ್ ಕೀಪರ್-ಬ್ಯಾಟ್ಸ್ ಮ್ಯಾನ್ ರಿಷಭ್ ಪಂತ್, ಭಾರತದ ಮಾಜಿ ಆಲ್‌ರೌಂಡರ್ ಮತ್ತು ಈಗಿನ ಮುಖ್ಯ ಆಯ್ಕೆಗಾರ ಅಜಿತ್ ಅಗರ್ಕರ್, ವೇಗಿ ಮೊಹಮ್ಮದ್ ಸಿರಾಜ್ ಮತ್ತು ಇತರ ಕೆಲವು ಕ್ರಿಕೆಟಿಗರು ಈ ಸಂಭ್ರಮಾಚರಣೆ ಭಾಗವಾಗಿದ್ದಾರೆ.

“Time flies. A Day that changed the FACE of Indian Cricket forever. Old is Gold. 41 years – #TDTY #WorldChampions,” ಎಂದು ಶಾಸ್ತ್ರಿ ಪೋಸ್ಟ್ ಮಾಡಿದ್ದಾರೆ.

Advertisement

ಮೊದಲು ಬ್ಯಾಟಿಂಗ್ ಮಾಡಿದ್ದ ಭಾರತ ತಂಡ 54.4(ಅಂದು ಏಕದಿನ ಪಂದ್ಯ 60 ಓವರ್) 183 ರನ್ ಗಳಿಸಿತ್ತು. ಗುರಿ ಬೆನ್ನತ್ತಿದ್ದ ವೆಸ್ಟ್ ಇಂಡೀಸ್ ಅನ್ನು 140ಕ್ಕೆ ನಿಯಂತ್ರಿಸಿ 43 ರನ್ ಗಳ ಅಮೋಘ ಜಯ ತನ್ನದಾಗಿಸಿಕೊಂಡಿತ್ತು.

Advertisement

Udayavani is now on Telegram. Click here to join our channel and stay updated with the latest news.

Next