Advertisement
ಈ ಮಾರ್ಗವಾಗಿ ಸಾಗಲು ಅನೇಕ ರಿಕ್ಷಾ ಚಾಲಕ-ಮಾಲಕರು ನಿರಾಕರಿಸುತ್ತಾರೆ.
ಬೀಜಾಡಿ ಗ್ರಾ.ಪಂ.ನಲ್ಲಿ, ರಸ್ತೆ ಡಾಮರಿಗೆ ಅಷ್ಟೊಂದು ಹಣ ಹೊಂದಾಣಿಸಲು ಕಷ್ಟ ಸಾಧ್ಯವಾಗಿದೆ. ಇರುವ ಆರ್ಥಿಕ ವ್ಯವಸ್ಥೆ ಇನ್ನಿತರ ಸೌಕರ್ಯಗಳಿಗೆ ಮೀಸಲಿಡ ಲಾಗಿದೆ. ಹಾಗಾಗಿ ಲೋಕೋಪಯೋಗಿ, ಮೀನುಗಾರಿಕೆ ಇಲಾಖೆಯನ್ನು ಅವಲಂಬಿಸ ಬೇಕಾಗಿದೆ. ಸರಕಾರದಿಂದ ಈ ರಸ್ತೆ ಡಾಮರಿಗೆ ಅನುದಾನ ಬಿಡುಗಡೆಯಾಗ ದಿರುವುದು ಇಲಾಖೆಗಳಿಗೆ ನುಂಗಲಾರದ ತುತ್ತಾಗಿದೆ. ಎರಡು ಇಲಾಖೆ ಅನುದಾನದ ಕೊರತೆಯಿಂದ ಕೈಚೆಲ್ಲಿ ಕುಳಿತಿವೆ.ಜನಪ್ರತಿನಿಧಿ ಗಳ ಸಹಿತ ಇಲಾಖೆಗಳಿಗೆ ಮನವಿ ಸಲ್ಲಿಸಿದ್ದರೂ ಈವರೆಗೆ ಯಾವುದೇ ಕ್ರಮ ಕೈಗೊಳ್ಳದಿರುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ. ಕ್ರಮದ ಭರವಸೆ
ಅಮಾವಾಸ್ಯೆ ಕಡು ರಸ್ತೆ ದುಃಸ್ಥಿತಿ ಬಗ್ಗೆ ಕುಂದಾಪುರ ಶಾಸಕರ ಗಮನಕ್ಕೆ ತರಲಾಗಿದೆ. ಡಾಮರು ಕಾಮಗಾರಿ ಬಗ್ಗೆ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.
-ಪ್ರಕಾಶ ಪೂಜಾರಿ,
ಗ್ರಾ.ಪಂ. ಸದಸ್ಯ, ಬೀಜಾಡಿ
Related Articles
ಬಂದರು ಹಾಗೂ ಮೀನುಗಾರಿಕೆ ಇಲಾಖೆಯಲ್ಲಿ ಇರುವ ಅನುದಾನ ವನ್ನು ಇನ್ನಿತರ ರಸ್ತೆ ನಿರ್ಮಾಣ ಕಾಮಗಾರಿಗೆ ಬಳಸಲಾಗಿದೆ. ಹೊದ್ರಾಳಿ ರಸ್ತೆ ಡಾಮರಿನ ಬಗ್ಗೆ ಸರಕಾರದಿಂದ ಯಾವುದೇ ಸುತ್ತೋಲೆ ಬಂದಿಲ್ಲ.
-ಡಯಾಸ್, ಇಂಜಿನಿಯರ್, ಮೀನುಗಾರಿಕೆ ಇಲಾಖೆ
Advertisement