Advertisement
ತೊಕ್ಕೊಟ್ಟು ಫ್ಲೆ$çಓವರ್‌ನಂತೆಯೇ ಪಂಪ್‌ವೆಲ್ ಫ್ಲೆ$çಓವರ್ ಬಳಿಯೂ ವಾಹನ ಸವಾರರ ಪ್ರಾಣಕ್ಕೆ ಕುತ್ತು ತರುವ ರೀತಿಯ ಅಪಾಯಕಾರಿ ತಿರುವು ಇದೆ. ತೊಕ್ಕೊಟ್ಟು ಕಡೆಯಿಂದ ಮಂಗಳೂರು ನಗರ ಪ್ರವೇಶ ಪಡೆಯುವ ಫ್ಲೈಓವರ್‌ನಲ್ಲಿ ಒಂದು ರಸ್ತೆ ಫ್ಲೈಓವರ್ ಮೇಲ್ಗಡೆಗೆ ಹೋಗುತ್ತಿದ್ದರೆ, ಮತ್ತೂಂದು ನಗರ ಪ್ರವೇಶಿಸುವ ಸರ್ವೀಸ್ ರಸ್ತೆಯಾಗಿದೆ. ಸಾಮಾನ್ಯವಾಗಿ ಹೆದ್ದಾರಿಯಲ್ಲಿ ಈ ರೀತಿಯ ತಿರುವು ನೀಡಿರಬೇಕಾದರೆ ಅಲ್ಲಿ ವಾಹನ ಸವಾರರಿಗೆ ಮುನ್ಸೂಚನೆ ನೀಡುವ ರಸ್ತೆ ಚಿಹ್ನೆಗಳನ್ನು ಹಾಕಿರಬೇಕು. ಜತೆಗೆ, ವಾಹನಗಳು ವೇಗ ಮಿತಿಯನ್ನು ನಿಯಂತ್ರಿಸುವುದಕ್ಕೂ ಸೂಕ್ತ ಸುರಕ್ಷ ಕ್ರಮಗಳನ್ನು ಅಳವಡಿಸಿರಬೇಕು. ಆದರೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಅದರಲ್ಲಿಯೂ ಫ್ಲೈಓವರ್ ಪ್ರವೇಶದ ಪ್ರಾರಂಭದಲ್ಲಿ ಯಾವುದೇ ರಸ್ತೆ ಸುರಕ್ಷ ಕ್ರಮಗಳನ್ನು ಅಳವ ಡಿಸದೆ ಅವೈಜ್ಞಾನಿಕ ತಿರುವು ನೀಡಲಾಗಿದೆ. ಇನ್ನೊಂದೆಡೆ, ಫ್ಲೈಓವರ್‌ನಿಂದ ಸರ್ವೀಸ್ ರಸ್ತೆಗೆ ತಿರುವು ಪಡೆಯುವ ಜಾಗವೂ ತುಂಬಾ ಕಿರಿದಾಗಿದೆ. ಜತೆಗೆ, ತೊಕ್ಕೊಟ್ಟು ಕಡೆಯಿಂದ ಮಂಗಳೂರು ನಗರಕ್ಕೆ ಪ್ರವೇಶಿಸುವಲ್ಲಿನ ಸರ್ವೀಸ್ ರಸ್ತೆ ಕೂಡ ಕಿರಿದಾಗಿದ್ದು, ಸವಾರರು ಸಂಕಷ್ಟ ಎದುರಿ ಸುತ್ತಿದ್ದಾರೆ. ತೊಕ್ಕೊಟ್ಟು ಕಡೆಯಿಂದ ಬರುವ ವಾಹನದವರು ಇಲ್ಲಿ ಸರ್ವೀಸ್ ರಸ್ತೆಗೆ ತಿರುಗುವ ಸೂಚನೆ ನೀಡದಿದ್ದರೆ ಅಪಘಾತ ಉಂಟಾಗುವ ಸಾಧ್ಯತೆ ಹೆಚ್ಚಿದೆ.
ಸರ್ವೀಸ್ ರಸ್ತೆಯ ಯಾವುದೇ ಮೂಲೆಯಲ್ಲೂ ಮುನ್ಸೂಚನೆಯಿಲ್ಲದೆ ಯಮರೂಪಿ ತಿರುವುಗಳಿವೆ. ಇದು ರಾ.ಹೆ. 66ರ ಕುಂಟಿಕಾನ ಬಳಿಯ ಖಾಸಗಿ ಹೊಟೇಲ್‌ವೊಂದರ ಬಳಿಯ ವಾಸ್ತವ ಸ್ಥಿತಿ. ಈ ಪ್ರದೇಶ ಈಗಾಗಲೇ ಅಪಘಾತ ವಲಯವಾಗಿ ಮಾರ್ಪಾಡಾಗಿದೆ. ಕುಂಟಿಕಾನ ಫ್ಲೆ çಓವರ್ ಕಡೆ ಯಿಂದ ಹೆದ್ದಾರಿ ಸಂಪರ್ಕಕ್ಕೆ ಎರಡೂ ಬದಿಯಲ್ಲಿ ಸರ್ವೀಸ್ ರಸ್ತೆಗಳಿವೆ. ದೇರೆಬೈಲ್, ಕುಂಟಿಕಾನ, ಕಾಪಿಕಾಡ್ ಸುತ್ತಮುತ್ತಲಿನ ಮಂದಿ ಹೆದ್ದಾರಿ ಸಂಪರ್ಕಕ್ಕೆ ಇದೇ ಸರ್ವೀಸ್ ರಸ್ತೆ ಉಪಯೋಗಿಸುತ್ತಾರೆ. ದಡ್ಡಲಕಾಡು ಬಳಿ ಯಿಂದಲೂ ಸರ್ವೀಸ್ ರಸ್ತೆಯೊಂದು ಇದೇ ಹೆ. ಸಂಪರ್ಕ ಪಡೆದಿದೆ. ಇದು ಅವೈಜ್ಞಾನಿಕವಾಗಿದ್ದು, ಕುಂಟಿಕಾನ ಕಡೆಯಿಂದ ಬರುವ ವಾಹನ, ದಡ್ಡಲಕಾಡು ಕಡೆಯಿಂದ ಬರುವ ವಾಹನಗಳು ಒಂದೇ ಕಡೆ ರಾ.ಹೆ.ಗೆ ಸಂಪರ್ಕ ಪಡೆಯುತ್ತವೆ. ಇಲ್ಲಿ ಯಾವುದೇ ರೀತಿಯ ಮುನ್ನೆಚ್ಚರಿಕೆ ಕ್ರಮ ವಹಿಸಿಲ್ಲ.
Related Articles
ಸದಾ ವಾಹನಗಳ ದಟ್ಟಣೆಯಿಂದ ಕೂಡಿದ ನಂತೂರು ವೃತ್ತ ಪ್ರದೇಶವು ಸಂಚಾರಕ್ಕೆ ಸಮಸ್ಯೆಯಾಗಿ ಮಾರ್ಪಾಡಾಗುತ್ತಿದೆ. ಅವೈಜ್ಞಾನಿಕ ವೃತ್ತ ಮತ್ತು ರಸ್ತೆಯಿಂದಾಗಿ ಇಲ್ಲಿ ಸದಾ ಟ್ರಾಫಿಕ್ ಜಾಮ್ ಉಂಟಾಗುತ್ತದೆ. ಪಂಪ್‌ವೆಲ್, ಪಡೀಲ್, ಕೊಟ್ಟಾರ, ಕದ್ರಿ ನಾಲ್ಕೂ ಕಡೆಗಳಿಂದ ವಾಹನಗಳು ಬರುತ್ತಿವೆ. ಈ ನಡುವೆ ಸಾಮಾನ್ಯವಾಗಿ ನಂತೂರು ವೃತ್ತದಲ್ಲಿ ಇಬ್ಬರು ಪೊಲೀಸರು ಮಾತ್ರ ಕರ್ತವ್ಯ ನಿರ್ವಹಿಸುತ್ತಾರೆ. ಹೀಗಿದ್ದಾಗ ನಾಲ್ಕೂ ಕಡೆಗಳಲ್ಲಿ ವಾಹನ ನಿಯಂತ್ರಣ ಕಷ್ಟ ಸಾಧ್ಯ. ಅದೇ ರೀತಿ ಕೊಟ್ಟಾರ ಮೇಲ್ಸೇತುವೆ ಇಳಿಯುತ್ತಿದ್ದಂತೆ ಕೋಡಿಕಲ್ ಕ್ರಾಸ್ ಬಳಿ ಅವೈಜ್ಞಾನಿಕವಾದ ಅಪಾಯಕಾರಿ ರಸ್ತೆ ತಿರುವು ಇದೆ. ಈ ಭಾಗದಲ್ಲಿ ಯೂಟರ್ನ್ ಅಥವಾ ಸರ್ವೀಸ್ ರಸ್ತೆಯಿಂದ ಹೆದ್ದಾರಿಗೆ ವಾಹನಗಳ ಪ್ರವೇಶಕ್ಕೆ ಯಾವುದೇ ರೀತಿಯ ಸೂಚನ ಫಲಕವಿಲ್ಲ.
Advertisement
ಕಾನ್ವೆಕ್ಸ್ ಮಿರರ್ ಅಳವಡಿಕೆನಗರದ ಕೆಲವೊಂದು ಕಡೆಗಳಲ್ಲಿ ಅಪಾಯಕಾರಿ ರಸ್ತೆಗಳಿವೆ. ಅದರಲ್ಲಿಯೂ ರಾಷ್ಟ್ರೀಯ ಹೆದ್ದಾರಿಯಿಂದ ಸರ್ವೀಸ್ ರಸ್ತೆ ಸಂಪರ್ಕ ತಿರುವಿನಲ್ಲಿ ಮುನ್ನೆಚ್ಚರಿಕೆ ಕ್ರಮ ಅಳವಡಿಸಲಾಗುವುದು. ಈ ರೀತಿಯ ಜಾಗಗಳಲ್ಲಿ ಸದ್ಯದಲ್ಲಿಯೇ ಕಾನ್ವೆಕ್ಸ್ ಮಿರರ್, ಬ್ಯಾರಿಕೇಡ್ ಅಳವಡಿಸಿ ಮುಂಜಾಗ್ರತೆ ವಹಿಸಲಾಗುವುದು.
-ನಟರಾಜ್, ಮಂಗಳೂರು ಟ್ರಾಫಿಕ್ ಎಸಿಪಿ