Advertisement

ಬಜಪೆಯಲ್ಲಿ ಪೊಲೀಸ್‌ ಠಾಣೆ ಎದುರೇ ಅಪಾಯಕಾರಿ ರಸ್ತೆ ಉಬ್ಬು

05:29 PM May 13, 2019 | Team Udayavani |

ಬಜಪೆ, ಮೇ 12: ರಾಜ್ಯ ಹೆದ್ದಾರಿ 101ರ ಬಜಪೆ ಪೊಲೀಸ್‌ ಠಾಣೆ ಬಳಿ ಹಾಕಲಾದ ರಸ್ತೆ ಉಬ್ಬು ಅವೈಜ್ಞಾನಿಕವಾಗಿದ್ದು, ಅಪಾಯಕ್ಕೆ ಆಹ್ವಾನ ನೀಡುವಂತಿದೆ.

Advertisement

ಎರಡು ವರ್ಷಗಳ ಹಿಂದೆ ಬಜಪೆ – ಕೈಕಂಬ ರಾಜ್ಯ ಹೆದ್ದಾರಿಗೆ ಡಾಮರೀಕರಣ ಕಾಮಗಾರಿ ನಡೆದಿತ್ತು. ಆ ವೇಳೆ ಬಜಪೆ ಪೊಲೀಸ್‌ ಠಾಣೆ ಬಳಿ ಹಳೆ ವಿಮಾನ ನಿಲ್ದಾಣದ ರಸ್ತೆಯೂ ಕೂಡುವುದರಿಂದ ರಸ್ತೆ ಉಬ್ಬು ಹಾಕಲಾಗಿತ್ತು.

ಬಜಪೆ- ಕೈಕಂಬದ ರಾಜ್ಯ ಹೆದ್ದಾರಿಯ ಅಗಲೀಕರಣ ಹಾಗೂ ಡಾಮರೀಕರಣವಾದ ಅನಂತರ ಹೆಚ್ಚಿನ ವೇಗದಲ್ಲಿ ಇಲ್ಲಿ ವಾಹನಗಳ ಸಂಚಾರ ನಡೆಯುತ್ತಿದೆ. ಹಳೆ ವಿಮಾನ ನಿಲ್ದಾಣ ರಸ್ತೆಯೂ ಕೂಡ ಕಾಂಕ್ರೀಟಿಕರಣಗೊಂಡ ಬಳಿಕ ಇಲ್ಲಿ ವಾಹನ ಸಂಚಾರ ಹೆಚ್ಚಾಗ ತೊಡಗಿದೆ. ಪೊಲೀಸ್‌ ಠಾಣೆ ವತಿಯಿಂದ ಈ ರಸ್ತೆ ಉಬ್ಬಿಗೆ ಝೀಬ್ರಾ ಬಿಳಿ ಬಣ್ಣ ಬಳಿಸಿ, ರಾತ್ರಿ ಕಾಣುವಂತೆ ರಸ್ತೆಗೆ ಬ್ಲಿಂಕರ್‌ ಅನ್ನು ಅಳವಡಿಸಿದ್ದರು. ಕ್ರಮೇಣ ಬಿಳಿ ಬಣ್ಣ ಮಾಯಾವಾಗತೊಡಗಿದ್ದು, ಬ್ಲಿಂಕರ್‌ ಪುಡಿಯಾಗಿ ಹೋಗಿದೆ.

ರಸ್ತೆ ಉಬ್ಬು ಸಮರ್ಪಕವಾಗಿಲ್ಲ. ಶೀಘ್ರದಲ್ಲಿ ಇಲ್ಲಿ ಸಿಗ್ನಲ್ ಲೈಟ್ ಅಳವಡಿಸಲಾಗುತ್ತದೆ. ಬಜಪೆ ಠಾಣೆ ವ್ಯಾಪ್ತಿಯ ಹೆಚ್ಚು ಅಪಘಾತವಾಗುವ ಮಳಲಿ ಕ್ರಾಸ್‌, ಸೂರಲ್ಪಾಡಿ, ಬಜಪೆ ಪೇಟೆಯಲ್ಲಿ ಬ್ಲಿಂಕರ್‌ ಅಳವಡಿಸಲು ಮೇಲಾಧಿಕಾರಿಯವರಿಗೆ ಮನವಿ ಮಾಡಲಾಗುವುದು.– ಪರಶಿವ ಮೂರ್ತಿ, ಇನ್‌ಸ್ಪೆಕ್ಟರ್‌, ಬಜಪೆ ಪೊಲೀಸ್‌ ಠಾಣೆ

ಈಗ ಈ ರಸ್ತೆಯಲ್ಲಿರುವ ಉಬ್ಬು ವಾಹನ ಸವಾರರಿಗೆ ಸರಿಯಾಗಿ ಗೊತ್ತಾಗುವುದಿಲ್ಲ. ಹೀಗಾಗಿ ಹೆಚ್ಚು ವೇಗವಾಗಿ ಬಂದು ಉಬ್ಬು ಕಂಡಾಗ ಒಮ್ಮೆಲೆ ಬ್ರೇಕ್‌ ಹಾಕುವ ಪರಿಣಾಮ ದ್ವಿಚಕ್ರ ವಾಹನ ಸವಾರರು ಬಿದ್ದು ಗಾಯಗೊಳ್ಳುವಂತಾಗಿದೆ. ಕೆಲವೊಂದು ಬಾರಿ ವಾಹನಗಳು ಹಿಂದಿನಿಂದ ಬಂದು ಢಿಕ್ಕಿ ಹೊಡೆದದ್ದೂ ಇದೆ.

ಎಚ್ಚರಿಕೆ ಫ‌ಲಕ, ಸಿಗ್ನಲ್ ಲೈಟ್ ಅಳವಡಿಸಬೇಕು:

Advertisement

ರಸ್ತೆ ಉಬ್ಬು ಗೋಚರಿಸುವಂತೆ ಇಲ್ಲಿ ಎಚ್ಚರಿಕೆ ಫ‌ಲಕವನ್ನು ಅಳವಡಿಸಬೇಕಿದೆ. ರಾತ್ರಿ ವೇಳೆ ಸಿಗ್ನಲ್ ಲೈಟ್ ಅನ್ನು ಅಳವಡಿಸಬೇಕಿದೆ.

•ವಿಶೇಷ ವರದಿ

Advertisement

Udayavani is now on Telegram. Click here to join our channel and stay updated with the latest news.

Next