Advertisement
ದಿನನಿತ್ಯ ನೂರಾರು ವಿದ್ಯಾರ್ಥಿಗಳು, ಸಾರ್ವಜನಿಕರು ಇದೇ ದಾರಿಯಲ್ಲಿ ಸಂಚರಿಸುತ್ತಾರೆ. ಸುತ್ತಮುತ್ತ ಅಂಗಡಿ ಮುಂಗಟ್ಟುಗಳು, ರಿಕ್ಷಾ ತಂಗುದಾಣಗಳಿವೆ. ಜನರ ಓಡಾಟ ಪ್ರದೇಶವಾದ್ದರಿಂದ ಗಾಳಿ ಮಳೆ ಸಂದರ್ಭದಲ್ಲಿ ಕಂಬ ಮುರಿದು ಬಿದ್ದಲ್ಲಿ ದೊಡ್ಡ ಅವಘಡ ಸಂಭವಿಸುವ ಸಾಧ್ಯತೆ ಇದೆ ಎಂಬುದು ಸ್ಥಳೀಯ ನಿವಾಸಿಗಳ ಆತಂಕವಾಗಿದೆ.
Related Articles
Advertisement
ಕಂಬದಲ್ಲಿ ಎಚ್ಟಿ ಲೈನ್ ಹಾದುಹೋಗಿದ್ದು, ಸುತ್ತ ಮುತ್ತಲಿನ ನಿವಾಸಿಗಳು, ವಾಹನ ಸವಾರರು ಭೀತಿ ಯಿಂದಲೇ ದಿನ ಕಳೆಯುವಂತಾಗಿದ್ದು, ಅಪಾಯದ ಮುನ್ನ ಇಲಾಖೆ ಎಚ್ಚೆತ್ತುಕೊಳ್ಳಬೇಕೆಂದು ಆಗ್ರಹಿಸಿದ್ದಾರೆ.
ಮೆಸ್ಕಾಂ ನಿರ್ಲಕ್ಷ್ಯ
ವರ್ಷದ ಹಿಂದೆಯೇ ಅಪಾಯಕಾರಿ ವಿದ್ಯುತ್ ಕಂಬದ ಬಗ್ಗೆ ಮೆಸ್ಕಾಂ ಅಧಿಕಾರಿಗಳಿಗೆ ಕರೆ ಮಾಡಿ ತಿಳಿಸಿದರೂ ನಿರ್ಲಕ್ಷ್ಯವಹಿಸಿದ್ದಾರೆ. -ಪ್ರಸಾದ್, ಸ್ಥಳೀಯರು.