ಮಂಗಳೂರಿನಿಂದ ಉಡುಪಿಗೆ ತೆರಳುವ ಹೆದ್ದಾರಿಯ ರಸ್ತೆಯಲ್ಲೇ ಬ್ಯಾರಿಕೇಡ್‌ಗಳನ್ನು ಅಳವಡಿಸಲಾಗಿದ್ದು, ಇದು ವಾಹನ ಸವಾರರಿಗೆ ಅಪಾಯಕಾರಿಯಾಗಿದೆ. ಅಲ್ಲದೆ, ಹೆದ್ದಾರಿಯುದ್ದಕ್ಕೂ ಬೀದಿ ದೀಪಗಳಿರುವುದರಿಂದ ಈ ಬ್ಯಾರಿಕೇಡ್‌ಗಳು ತತ್‌ಕ್ಷಣಕ್ಕೆ ಕಾಣಿಸದಿರುವುದರಿಂದ ವಾಹನ ಚಾಲ ಕರಿಗೆ ಸಮಸ್ಯೆಯಾಗುತ್ತಿದೆ. ಇದು ಹೆದ್ದಾರಿ ಯಾಗಿರುವುದರಿಂದ ವಾಹನಗಳು ಅತಿ ವೇಗದಲ್ಲಿ ಸಂಚರಿಸುತ್ತಿರುತ್ತವೆ. ಹೀಗೆ ಅತಿವೇಗದಲ್ಲಿರುವ ವಾಹನಗಳಿಗೆ ಬ್ಯಾರಿಕೇಡ್ ಸನಿಹಕ್ಕೆ ಬರುವಾಗ ತತ್‌ಕ್ಷಣಕ್ಕೆ ನಿಧಾನಕ್ಕೆ ತೆರಳಲು ಸಾಧ್ಯವಾಗದೆ ಅಪಘಾತಗಳು ಸಂಭವಿಸುವ ಸಾಧ್ಯತೆಗಳಿವೆ. ಅಲ್ಲದೆ, ರಾತ್ರಿ ವೇಳೆಯಲ್ಲಿ ಈ ಹೆದ್ದಾರಿಯಲ್ಲಿ ಸಂಚರಿಸುವುದೇ ಸವಾಲಾಗಿದೆ. ರಸ್ತೆ ಪರಿಚಯವಿದ್ದವರಿಗೆ ಬ್ಯಾರಿಕೇಡ್ ಹಾಕಿರುವ ಸ್ಥಳಗಳ ಬಗ್ಗೆ ಮಾಹಿತಿ ಇರುತ್ತದೆಯಾದರೂ, ಅಪರಿಚಿತರು, ದೂರದೂರಿನವರು ಆಗಮಿಸಿದ ವೇಳೆ ಬ್ಯಾರಿಕೇಡ್ ಹಾಕಿರುವುದು ತಿಳಿಯದೇ ಢಿಕ್ಕಿಯಾಗುವ ಸಂಭವವೂ ಇದೆ. ಹೆದ್ದಾರಿಯುದ್ದಕ್ಕೂ ಬೀದಿ ದೀಪಗಳು ಇಲ್ಲದಿರುವುದರಿಂದ ವಾಹನಗಳ ಬೆಳಕಿನಲ್ಲೇ ಸಂಚರಿಸ ಬೇಕಾಗುತ್ತದೆ. ಆದರೆ, ಎದುರಿನಿಂದ ಬರುವ ವಾಹನಗಳ ಬೆಳಕು ಕಣ್ಣಿಗೆ ಬೀಳುವುದರಿಂದ ರಸ್ತೆ ಅಸ್ಪಷ್ಟವಾಗಿ ಕಾಣಿಸಿ ಬ್ಯಾರಿಕೇಡ್‌ಗಳಿಗೆ ತಾಗುವ ಸಂಭವವೂ ಇರುತ್ತದೆ. ನಿಯಮ ಪ್ರಕಾರ ಹೆದ್ದಾರಿಗಳಲ್ಲಿ ಬೀದಿ ದೀಪ ಅಳವಡಿಸಬೇಕೆಂದಿದ್ದರೂ, ಹೆಚ್ಚಿನ ಹೆದ್ದಾರಿಗಳಲ್ಲಿ ಬೀದಿ ದೀಪಗಳನ್ನೇ ಹಾಕಿಲ್ಲ. ಹೆದ್ದಾರಿನಲ್ಲಿ ಕತ್ತಲಿನ
ಸಂಚಾರ ವಾಹನ ಸವಾರರಿಗೆ ಎದುರಾಗಿದೆ.
– ಧನ್ಯಾ ಬಾಳೆಕಜೆ