Advertisement

Crocodile!; ಹಳೆದಾಂಡೇಲಿಯಲ್ಲಿ ಸುರಕ್ಷತಾ ತಡೆಗೋಡೆ ದಾಟಿ ಬಂದ ಮೊಸಳೆ!

08:09 PM Aug 12, 2023 | Team Udayavani |

ದಾಂಡೇಲಿ : ಈಗೀಗ ದಾಂಡೇಲಿ ಅಂದ್ರೆ ಥಟ್ಟನೆ ನೆನಪಿಗೆ ಬರುವುದೆ ಮೊಸಳೆ. ಅಂದ ಹಾಗೆ ಈಗಾಗಲೆ ಕಳೆದ ಎರಡು-ಎರಡುವರೆ ವರ್ಷಗಳಲ್ಲಿ ಇಲ್ಲಿ ಡೆಡ್ಲಿ ಮೊಸಳೆಗಳು ಐವರನ್ನು ಬಲಿ ಪಡೆದಿವೆ. ಈ ಹಿನ್ನಲೆಯಲ್ಲಿ ಅರಣ್ಯ ಇಲಾಖೆಯವರು ನಗರದ ಕಾಳಿ ನದಿ ತಟದ ಅಲ್ಲಲ್ಲಿ ಸುರಕ್ಷತಾ ತಡೆಗೋಡೆಯನ್ನು ನಿರ್ಮಿಸಿದ್ದಾರೆ. ಇದರ ಹೊರತಾಗಿಯೂ ಹಳೆದಾಂಡೇಲಿ ಮತ್ತು ಬೈಲುಪಾರು ಸೇತುವೆಯ ಹತ್ತಿರ ಧ್ವನಿವರ್ಧಕದ ಮೂಲಕ ಮೊಸಳೆಗಳಿವೆ, ನದಿಗಿಳಿಯದಂತೆ ಎಚ್ಚರಿಕೆಯ ಜಾಗೃತಿಯನ್ನು ಮೂಡಿಸುವ ಕಾರ್ಯವನ್ನು ಮಾಡುತ್ತಿದೆ.

Advertisement

ಕಾಳಿ ನದಿ ತಟಕ್ಕೆ ಹಾಕಲಾದ ಸುರಕ್ಷತಾ ತಡೆಗೋಡೆಯನ್ನು ದಾಟಿ ಮೊಸಳೆಯೊಂದು ಬಂದ ಘಟನೆ ಇಂದು ಶನಿವಾರ ನಗರದ ಹಳೆದಾಂಡೇಲಿಯಲ್ಲಿ ನಡೆದಿದೆ. ಸುರಕ್ಷತಾ ತಡೆಗೋಡೆಯನ್ನು ದಾಟಿ ಬರಲು ಮೊಸಳೆಗಳು ಶುರುವಚ್ಚಿಕೊಂಡಿರುವುದರಿಂದ ನದಿ ತೀರದ ಜನರು ಹಾಗೂ ನದಿ ಹತ್ತಿರಕ್ಕೆ ಹೋಗುವ ಜನರು ಬಹಳ ಎಚ್ಚರಿಕೆಯನ್ನು ವಹಿಸಬೇಕಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next