Advertisement
ಕಾಂಗ್ರೆಸ್ ನಾಯಕಿ ಅಲ್ಕಾ ಲಂಬಾ ಅವರು ನೀಡಿದ ಹೇಳಿಕೆ ರಾಜಕೀಯ ಗದ್ದಲಕ್ಕೆ ಕಾರಣವಾಗಿದ್ದು, ದೆಹಲಿಯಲ್ಲಿ ಲೋಕಸಭೆ ಚುನಾವಣೆಗೆ ಸಿದ್ಧತೆ ಕುರಿತು ಚರ್ಚಿಸಲು ಕಾಂಗ್ರೆಸ್ ಬುಧವಾರ ಸಭೆ ನಡೆಸಿತ್ತು, ಸಭೆಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ ಉಪಸ್ಥಿತರಿದ್ದರು. ಸಭೆಯ ಬಳಿಕ ಅಲ್ಕಾ “ಮೈತ್ರಿಯ ಬಗ್ಗೆ ಯಾವುದೇ ಮಾತುಕತೆ ನಡೆದಿಲ್ಲ. ಹಾಗಾಗಿ ನಾವು ಎಲ್ಲಾ ಸ್ಥಾನಗಳಲ್ಲಿ ಸ್ಪರ್ಧಿಸುತ್ತೇವೆಯೇ ಅಥವಾ ಎರಡರಿಂದ ನಾಲ್ಕು ಸ್ಥಾನಗಳಿಂದ ಸ್ಪರ್ಧಿಸುತ್ತೇವೆಯೇ ಎಂದು ನಾನು ಹೇಳಲಾರೆ. ಚುನಾವಣೆಗೆ ಏಳು ತಿಂಗಳು ಬಾಕಿ ಇರುವ ಕಾರಣ ಎಲ್ಲ ಏಳು ಸೀಟುಗಳಲ್ಲೂ ಸಿದ್ಧರಾಗಿರಲು ತಿಳಿಸಲಾಗಿದೆ. ನಾವು ಇಂದಿನಿಂದ ಕೆಲಸ ಮಾಡಲು ಪ್ರಾರಂಭಿಸುತ್ತೇವೆ ಏಕೆಂದರೆ ದೆಹಲಿಯನ್ನು ಹೊಂದಿರುವವರ ಕೈಯಲ್ಲಿ ದೇಶವಿರುತ್ತದೆ.” ಎಂದು ಹೇಳಿದ್ದರು.
Related Articles
Advertisement
ಕಾಂಗ್ರೆಸ್‌ನಲ್ಲಿದ್ದ ಅಲ್ಕಾ ಲಂಬಾ ಅವರು ಆಪ್‌ಗೆ ತೆರಳಿ ಮತ್ತೆ ಕಾಂಗ್ರೆಸ್‌ಗೆ ಮರಳಿದ್ದರು.ಈ ವಿಚಾರವನ್ನು ಮುಂದಿಟ್ಟುಕೊಂಡು ಹಲವರು ಟೀಕಾ ಪ್ರಹಾರ ನಡೆಸಿದ್ದಾರೆ. ಇನ್ನೊಂದೆಡೆ ಬಿಜೆಪಿ ಕೂಡ ಇಂಡಿಯಾ ಮೈತ್ರಿಕೂಟದ ಒಗ್ಗಟ್ಟಿನ ಬಗ್ಗೆ ವ್ಯಂಗ್ಯವಾಡಿದೆ. ವಿಶೇಷವೆಂದರೆ 2019 ರಲ್ಲಿ ಆಮ್ ಆದ್ಮಿ ಪಕ್ಷದ ಪ್ರಬಲ ಹೋರಾಟದ ನಡುವೆಯೂ ದೆಹಲಿಯ ಎಲ್ಲಾ 7 ಸ್ಥಾನಗಳಲ್ಲಿ ಬಿಜೆಪಿ ಗೆಲುವು ಸಾಧಿಸಿತ್ತು.