ಬೀದರ್: ಮಹಾರಾಷ್ಟ್ರದ ಕಂಟಕದಿಂದಾಗಿ ನಲುಗಿ ಹೋಗಿರುವ ಬೀದರ್ ಜಿಲ್ಲೆಯಲ್ಲಿ ಕೋವಿಡ್-19 ಆರ್ಭಟ ಕೊಂಚ ತಗ್ಗಿದ್ದು, ಶನಿವಾರ ಒಂದು ಪಾಸಿಟಿವ್ ಪ್ರಕರಣ ವರದಿಯಾಗಿದೆ. ಒಂದೇ ದಿನ 33 ಜನ ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿರುವುದು ಆಶಾದಾಯಕ ಬೆಳವಣಿಗೆಯಾಗಿದೆ.
ಮಹಾರಾಷ್ಟ್ರದ ಮುಂಬೈ ಮತ್ತು ಪುಣೆ ನಗರಗಳಿಂದ ವಲಸೆ ಕಾರ್ಮಿಕರು ಜಿಲ್ಲೆಗೆ ಆಗಮನದಿಂದ ಸೋಂಕಿತರ ಸಂಖ್ಯೆ ಈಗ ದ್ವಿಶತಕ ಬಾರಿಸಿದೆ. ಹಳ್ಳಿ ಹಳ್ಳಿಗೂ ವ್ಯಾಪಿಸುತ್ತಿರುವ ಕೊರೊನಾ ಶುಕ್ರವಾರದಂದು ಅತಿ ಹೆಚ್ಚು 39 ಜನರಿಗೆ ಒಕ್ಕರಿಸುವ ಮೂಲಕ ಆತಂಕವನ್ನು ಹೆಚ್ಚಿಸಿತ್ತು. ಆದರೆ, ಶನಿವಾರ 28 ವರ್ಷದ ಯುವಕನಲ್ಲಿ (ಪಿ 4864) ವೈರಾಣು ಪತ್ತೆಯಾಗಿದ್ದು, ಈತ ದೆಹಲಿಯಿಂದ ವಾಪಸ್ಸಾಗಿದ್ದ ಎಂದು ಆರೋಗ್ಯ ಇಲಾಖೆ ಹೇಲ್ತ್ ಬುಲೇಟಿನ್ ದೃಢಪಡಿಸಿದೆ.
ಜಿಲ್ಲೆಯಲ್ಲಿ ಶನಿವಾರ 33 ಜನ ಡಿಸ್ಚಾರ್ಜ್ ಆಗಿದ್ದು, ಅದರಲ್ಲಿ ಪಿ 858, ಪಿ 941, ಪಿ 981, ಪಿ 985, ಪಿ 1665, ಪಿ 2059, ಪಿ 2060, ಪಿ 2061, ಪಿ 2062, ಪಿ 2063, ಪಿ 2064, ಪಿ 2209, ಪಿ 2211, ಪಿ 2212, ಪಿ 2213, ಪಿ 2214, ಪಿ 2215, ಪಿ 2217, ಪಿ 2310, ಪಿ 2314, ಪಿ 2315, ಪಿ 2317, ಪಿ 2318, ಪಿ 2320, ಪಿ 2523, ಪಿ 2524, ಪಿ 2525, ಪಿ 2526, ಪಿ 2527, ಪಿ 2530, ಪಿ 2531, ಪಿ 2532 ಮತ್ತು ಪಿ 2533 ರೋಗಿಗಳು ಸೇರಿದ್ದಾರೆ.
ಜಿಲ್ಲೆಯಲ್ಲಿ ಈಗ ಸೋಂಕಿತರ ಸಂಖ್ಯೆ ಈಗ 215 ಆದಂತಾಗಿದೆ. ಒಟ್ಟು 6 ಜನ ಸಾವನ್ನಪ್ಪಿದ್ದರೆ ಒಟ್ಟು 74 ಮಂದಿ ಡಿಸ್ಚಾರ್ಜ್ ಆಗಿದ್ದು, ಇನ್ನೂ 135 ಪ್ರಕರಣಗಳು ಸಕ್ರೀಯವಾಗಿವೆ ಎಂದು ಆರೋಗ್ಯ ಇಲಾಖೆ ದೃಢಪಡಿಸಿದೆ.