Advertisement

ದುಶ್ಚಟ ಮುಕ್ತರಾದವರನ್ನು ಸ್ವಾವಲಂಬಿಯಾಗಿಸಲು ಸರಕಾರದ ನೆರವಿಗೆ ಚಿಂತನೆ:ಸಭಾಪತಿ ಯು.ಟಿ.ಖಾದರ್

01:30 PM Jul 29, 2023 | Team Udayavani |

ಬೆಳ್ತಂಗಡಿ: ನನ್ನ ಸಾಮಾಜಿಕ ವ್ಯಕ್ತಿತ್ವ ಬೆಳೆಸಿಕೊಳ್ಳಲು ಧರ್ಮಸ್ಥಳದ ಜನಜಾಗೃತಿ ಯೋಜನೆಯೂ ಒಂದು ಕಾರಣ. ಈ ಮೂಲಕ ಸಾಮಾಜಿಕ ಚಿಂತನೆಯ ಅನುಭವ ಜನರ ಸೇವೆ ಮಾಡಲು ಒಂದು ಶಕ್ತಿ ನೀಡಿದೆ. ದುಶ್ಚಟ ಮುಕ್ತರಾದವರಿಗೆ ಸ್ವಾಲಂಬಿ ಜೀವನ ನಡೆಸಲು ಅಗತ್ಯ ನೆರವು ಒದಗಿಸಲು ಸರಕಾರದೊಂದಿಗೆ ಮಾತುಕತೆ ನಡೆಸುತ್ತೇನೆ ಎಂದು ಕರ್ನಾಟಕ ಸರಕಾರದ ಸಭಾಪತಿ ಯು.ಟಿ.ಖಾದರ್ ತಿಳಿಸಿದರು.

Advertisement

ಧರ್ಮಸ್ಥಳ ಅಮೃತವರ್ಷಿಣಿ ಸಭಾಭವನದಲ್ಲಿ ಜು.29 ರಂದು ನಡೆದ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಧರ್ಮಸ್ಥಳದಿಂದ ರಾಜ್ಯಾದ್ಯಂತ ನಡೆಸಲಾದ ಮದ್ಯವರ್ಜನ ಶಿಬಿರಗಳಲ್ಲಿ ಭಾಗವಹಿಸಿ ಸಂತೃಪ್ತ ಜೀವನ ನಡೆಸುತ್ತಿರುವ ವ್ಯಸನಮುಕ್ತ ಸಾಧಕರ ಸಮಾವೇಶ ಉದ್ಘಾಟಿಸಿ ಮಾತನಾಡಿದರು.

ಶ್ರೀ ಕ್ಷೇತ್ರ ಧರ್ಮಸ್ಥಳದ ಸಾಮಾಜಿಕ, ಶೈಕ್ಷಣಿಕ ಸೇರಿದಂತೆ ಅನೇಕ ಚಿಂತನೆಗಳು ಇಂದು ಸಮಾಜಕ್ಕೆ ಮತ್ತು ದೇಶಕ್ಕೆ ದೊಡ್ಡ ಮಟ್ಟದ ಕೊಡುಗೆಯಾಗಿ ಪರಿವರ್ತನೆಯಾಗಿದೆ. ಹಿಂದೆ ಜಿಲ್ಲೆಯವರಾದ ವೈಕುಂಟ ಬಾಳಿಗರು ಮೊದಲ ಸ್ಪೀಕರ್ ಆಗಿದ್ದರು, ಇಂದು ನನಗೆ ಆ ಆವಕಾಶ ಲಭಿಸಿದೆ. ವಿರೋಧ ಪಕ್ಷದವರ ಟೀಕೆ ಮಧ್ಯೆಯೂ ಸಿಕ್ಕ ಅವಕಾಶವನ್ನು ಜವಾಬ್ದಾರಿಯುತವಾಗಿ ಮುನ್ನಡೆಸುವೆ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಶುಭಹಾರೈಸಿದರು. ಧರ್ಮಸ್ಥಳ ಶೌರ್ಯ ವಿಪತ್ತ ತಂಡವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯರವರಿಂದಲೇ ಉದ್ಘಾಟಿಸಬೇಕೆಂದು ಸಭಾಪತಿಯಲ್ಲಿ ನಿವೇಧಿಸಿಕೊಂಡರು.

ಸಭಾಪತಿಯಾದ ಬಳಿಕ ಮೊದಲ ಬಾರಿಗೆ ಧರ್ಮಸ್ಥಳ ಕ್ಷೇತ್ರಕ್ಕೆ ಆಗಮಿಸಿದ ಯು.ಟಿ.ಖಾದರ್ ಅವರನ್ನು ಡಾ.ಹೆಗ್ಗಡೆ ಗೌರವಿಸಿದರು. ಎಸ್.ಕೆ.ಡಿ.ಆರ್.ಡಿ.ಪಿ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಎಲ್.ಎಚ್. ಮಂಜುನಾಥ್ ಸಂದೇಶ ನೀಡಿದರು.

Advertisement

ಮಂಗಳೂರಿನ ಮನೋವೈದ್ಯ ಡಾ.ಶ್ರೀನಿವಾಸ ಭಟ್ ಯು., ಎಸ್.ಕೆ.ಡಿ.ಆರ್.ಡಿ.ಪಿ. ಮುಖ್ಯ ನಿರ್ವಹಣಾಧಿಕಾರಿ ಅನಿಲ್ ಕುಮಾರ್ ಎಸ್.ಎಸ್., ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ರಾಜ್ಯಾಧ್ಯಕ್ಷ ರಾಜಣ್ಣ ಮೂ. ಕೊರವಿ, ಸ್ಥಾಪಕಾಧ್ಯಕ್ಷ ಕೆ.ವಸಂತ್ ಸಾಲ್ಯಾನ್, ಟ್ರಸ್ಟಿ ಎ.ರಾಮಸ್ವಾಮಿ, ಸಂಪತ್ ಸಾಮ್ರಾಜ್ಯ, ಜನಜಾಗೃತಿ ವೇದಿಕೆ ರಾಜ್ಯ ಸ್ಥಾಪಕಾಧ್ಯಕ್ಷ ಸತೀಶ್ ಹೊನ್ನವಳ್ಳಿ, ಪ್ರಾದೇಶಿಕ ನಿರ್ದೇಶಕ ವಿವೇಕ್ ವಿ.ಪಾಯಸ್, ಹಣಕಾಸು ನಿರ್ದೇಶಕ ಶಾಂತರಾಮ ಪೈ ಉಪಸ್ಥಿರಿದ್ದರು.

ವ್ಯಸನಮುಕ್ತರು ಮನೆಮಂದಿ ಸೇರಿ ಸುಮಾರು 2700 ಮಂದಿ ಕಾರ್ಯಕ್ರಮದಲ್ಲಿ ಭಾಗವಹಿಸಿದರು.

ಸಭಾಪತಿಯವರನ್ನು ಇದಕ್ಕೂ ಮುನ್ನ ಬೆಳ್ತಂಗಡಿಯಲ್ಲಿ ಕಾಂಗ್ರೆಸ್ ವತಿಯಿಂದ ಸ್ವಾಗತಿಸಲಾಯಿತು. ಕಾರ್ಯಕ್ರಮದ ಬಳಿಕ ಉಜಿರೆ ರುಡ್ ಸೆಟ್ ಸಂಸ್ಥೆ, ನ್ಯಾಚುರೋಪತಿಗೆ ಭೇಟಿ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next