Advertisement

ಅಭಿವ್ಯಕ್ತಿಗೆ ಸೂಕ್ತ ವಾತಾವರಣ ಅಗತ್ಯ

07:24 AM Jun 16, 2019 | Team Udayavani |

ಬೆಂಗಳೂರು: ಸೃಜನಶೀಲತೆ ಪ್ರತಿಯೊಬ್ಬರಲ್ಲೂ ಇರುತ್ತದೆ. ಆದರೆ, ಅದರ ಅಭಿವ್ಯಕ್ತಿಗೆ ಸೂಕ್ತ ವಾತಾವರಣ ಕಲ್ಪಿಸಬೇಕಾಗುತ್ತದೆ ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷೆ ಡಾ.ವಸುಂಧರ ಭೂಪತಿ ತಿಳಿಸಿದರು.

Advertisement

ನಗರದ ಮಲ್ಲೇಶ್ವರಂ ಅಸೋಸಿಯೇಷನ್‌ನಲ್ಲಿ ಶನಿವಾರ ಸಪ್ನ ಬುಕ್‌ ಹೌಸ್‌ ಹಮ್ಮಿಕೊಂಡಿದ್ದ ಪಿ.ಎನ್‌. ಅನನ್ಯ ಅವರ “ಇಟ್ಸ್‌ ಮೈ ಟೈಂ ವಿತ್‌ ರೈಮ್‌’ ಇಂಗ್ಲಿಷ್‌ ಕವನ ಸಂಕಲನ ಲೋಕಾರ್ಪಣೆಗೊಳಿಸಿ ಮಾತನಾಡಿದರು.

ಪಿಯುಸಿ ವ್ಯಾಸಂಗ ಮಾಡುತ್ತಿರುವ ಅನನ್ಯ ಉತ್ತಮ ಓದಿನ ಜತೆಗೆ ಸೃಜನಶೀಲ ಕವನ ಬರೆದು ಪ್ರಕಟಿಸುತ್ತಿರುವುದು ಶ್ಲಾಘನೀಯ. ಪ್ರತಿಯೊಬ್ಬರಲ್ಲೂ ಇಂತಹ ಸುಪ್ತ ಪ್ರತಿಭೆ ಅಡಗಿರುತ್ತದೆ. ಆದರೆ, ಅದರ ಅನಾವರಣಕ್ಕೆ ಸೂಕ್ತ ವಾತಾವರಣದ ಅವಶ್ಯಕತೆ ಇರುತ್ತದೆ ಎಂದು ಹೇಳಿದರು.

“ಇಟ್ಸ್‌ ಮೈ ಟೈಂ ವಿತ್‌ ರೈಮ್‌’ ಕವನ ಸಂಕಲನದ ಪ್ರತಿ ಕವನ ಉತ್ತಮವಾಗಿ ಮೂಡಿ ಬಂದಿದೆ. ತಂದೆ-ತಾಯಿ, ಗುರು, ಸ್ನೇಹಿತರು, ಪರಿಸರ ಕವನಗಳ ಆಯ್ಕೆ ವಿಷಯಗಳಾಗಿವೆ. 16ರ ಹರೆಯದ ಅನನ್ಯ ಅನುಭವಿಗಳ ಹಾಗೆ ಪದ ಬಳಕೆ ಮಾಡಿದ್ದಾರೆ.

ಪ್ರತಿ ಕವನವೂ ಪ್ರಾಸಬದ್ಧವಾಗಿದ್ದು, ಸಂದೇಶ ರೂಪದಲ್ಲಿವೆ. ಕನ್ನಡಕ್ಕೆ ಮಹಾಕಾವ್ಯ ನೀಡಿದ ಕುವೆಂಪು ಅವರು ಆರಂಭದಲ್ಲಿ ಇಂಗ್ಲಿಷ್‌ನಲ್ಲೇ ಕವನ ಬರೆಯುತ್ತಿದ್ದರು. ಗುರು ಟಿ.ಎಸ್‌.ವೆಂಕಣ್ಣಯ್ಯ ಅವರ ಸಲಹೆ ಮೇರೆಗೆ ಮಾತೃಭಾಷೆ ಕನ್ನಡದಲ್ಲಿ ಬರೆಯಲು ಆರಂಭಿಸಿದರು ಎಂದರು.

Advertisement

ಲೇಖಕ ರಾ.ನಂ. ಚಂದ್ರಶೇಖರ್‌ ಮಾತನಾಡಿದರು. ಲೇಖಕ ಎಂ.ಎಸ್‌. ರಘುನಾಥ್‌, ಐಎಫ್ಎಸ್‌ ಅಧಿಕಾರಿ ಮನೋಜ್‌ ಕುಮಾರ್‌ ಶುಕ್ಲಾ, ಶಿಕ್ಷಕಿ ಎಸ್‌. ಕಾರ್ತಿಕಾ ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next