Advertisement
ಸಮಗ್ರ ಪೀಡೆ ನಿರ್ವಹಣೆಯಲ್ಲಿ ಕಳೆ ನಿರ್ವಹಣೆ ಒಂದು ಪ್ರಮುಖ ಅಂಶ. ಎಲ್ಲ ಪೀಡೆಗಳಿಂದ ಬೆಳೆಗಳ ಉತ್ಪಾದನೆಯಲ್ಲಿ ಆಗುತ್ತಿರುವ ನಷ್ಟದಲ್ಲಿ ಸುಮಾರು ಮೂರನೇ ಒಂದು ಭಾಗದಷ್ಟು ಕಳೆಯೇ ಕಾರಣ. ಕಳೆಗಳು ಬೆಳೆಗಳ ಬೆಳವಣಿಗೆಗೆ ಬೇಕಾಗುವ ಬೆಳಕು, ತೇವಾಂಶ, ಪೋಷಕಾಂಶ ಮತ್ತು ಜಾಗಕ್ಕೆ ಪೈಪೋಟಿ ನೀಡುವ ಮೂಲಕ ಬೆಳೆಗಳ ಇಳುವರಿ ಮತ್ತು ಗುಣಮಟ್ಟ ಕಡಿಮೆಯಾಗಲು ಕಾರಣವಾಗುತ್ತದೆ.Related Articles
Advertisement
2. ಬೇಸಗೆ ಕಾಲದಲ್ಲಿ ಅದನ್ನು ಬಿಸಿಲಿಗೆ ಬಿಟ್ಟು ಅವುಗಳ ಗಡ್ಡೆಗಳನ್ನು ಒಣಗಿಸುವುದು.
3. ಕೈಯಿಂದ ಕಳೆಗಳನ್ನು ಕಿತ್ತು ಹಾಕುವುದು.
4. ಉಳುಮೆ ಮಾಡುವುದು.
5. ಹುಲ್ಲು, ಮಣ್ಣು, ಎಲೆ, ಕಪ್ಪು ಪಾಲಿಥೀನ್ ಶೀಟ್‌ಗಳಿಂದ ಕಳೆ ಅಥವಾ ಭೂಮಿಯ ಮೇಲ್ಮೈಯನ್ನು ಮುಚ್ಚುವುದು, ಹೊದಿಸುವುದು.
6. ನೀರನ್ನು ಬಸಿಯುವುದು.
7. ಕಳೆಗಳನ್ನು ಕೊಯ್ದು ಹಾಕುವುದು.
ಉತ್ತಮ ಬೇಸಾಯ, ಯಾಂತ್ರಿಕ ಪದ್ಧತಿಗಳು ಸಾಮಾನ್ಯವಾಗಿ ರಾಸಾಯನಿಕ ಪದ್ಧತಿಗೆ ಪರ್ಯಾಯ ಅಥವಾ ಬದಲಿ ಮಾರ್ಗವಾಗಿದೆ. ಅಲ್ಲದೆ ಈ ಪದ್ಧತಿ ಅನುಸರಿಸಿ ಕಳೆ ಹತೋಟಿಯಿಂದ ಪರಿಸರ ಮಾಲಿನ್ಯ ಉಂಟಾಗುವುದಿಲ್ಲ.
ಜೈವಿಕ ವಿಧಾನದಲ್ಲಿ ಕೀಟ ಮತ್ತು ಸೂಕ್ಷ್ಮಾಣುಜೀವಿಗಳ ಬಳಕೆಯಾಗುತ್ತದೆ. ಕೀಟ ಮತ್ತು ಸೂಕ್ಷ್ಮಾಣುಜೀವಿಗಳು ಕಳೆಗಳನ್ನು ಭಕ್ಷಿಸುವುದರಿಂದ ಅವುಗಳ ಸಂಖ್ಯೆ ಮತ್ತು ಬೆಳವಣಿಗೆ ಕಡಿಮೆಯಾಗುತ್ತದೆ. ಭಾರತದಲ್ಲಿ ಜೈವಿಕ ನಿಯಂತ್ರಣ ಅಷ್ಟೇನೂ ಉಪಯೋಗದಲ್ಲಿ ಇಲ್ಲ.
ಕಳೆನಾಶಕಗಳನ್ನು ಬೆಳೆಗಳಲ್ಲಿ ಉಪಯೋಗಿಸುವಾಗ ಬೆಳೆಗಳಿಗೆ ಹಾನಿ ಮಾಡದೆ ಕಳೆಗಳನ್ನು ಮಾತ್ರ ಕೊಲ್ಲುವಂತಾಗಬೇಕು. ಕಳೆನಾಶಕಗಳು ಕೆಲಸ ಮಾಡ ಬೇಕಾದರೆ ಆಯ್ಕೆ, ನಿಯಮ ಮತ್ತು ಇನ್ನಿತರ ಮಾರ್ಪಾಡು ಮಾಡುವುದರಿಂದ ಸಾಧ್ಯ. ಒಂದು ಕಳೆನಾಶಕವನ್ನು ಎಲ್ಲಾ ಬೆಳೆಗಳಲ್ಲಿಯೂ ಉಪಯೋಗಿಸು ವುದಕ್ಕೆ ಆಗುವುದಿಲ್ಲ. ಉದಯ ಪೂರ್ವ ಬೆಳೆನಾಶಕಗಳನ್ನು ಬೆಳೆ ಬಿತ್ತಿದ ಅಥವಾ ನಾಟಿ ಮಾಡಿದ 3-5 ದಿನದೊಳಗೆ ನೆಲದ ಮೇಲೆ ಎಲ್ಲ ಭಾಗಕ್ಕೂ ಬೀಳುವ ಹಾಗೆ ಸಿಂಪಡಣೆ ಮಾಡಬೇಕು. ಉದಯೋತ್ತರ ಕಳೆನಾಶಕಗಳನ್ನು ಬೆಳೆ ಬಿತ್ತಿದ ಅಥವಾ ನಾಟಿ ಮಾಡಿದ 15-20 ದಿನಗಳಲ್ಲಿ ಕಳೆಗಳು 2-4 ಎಲೆ ಬಿಟ್ಟಿರುವ ಸಮಯದಲ್ಲಿ ಬೆಳೆಗಳು ಸೇರಿ ನೆಲದ ಮೇಲೆಯೂ ಎಲ್ಲ ಭಾಗಕ್ಕೂ ಬೀಳುವ ಹಾಗೆ ಸಿಂಪಡಣೆ ಮಾಡಬೇಕು.
ಸಮಗ್ರ ಕಳೆ ನಿರ್ವಹಣೆ ಪದ್ಧತಿ ಎಂದರೇನು?
ಒಂದು ಬೆಳೆ ಪದ್ಧತಿಯಲ್ಲಿ ಆರ್ಥಿಕ ಹಾನಿ ಮಟ್ಟಕ್ಕಿಂತ ಇಳುವರಿ ಕಡಿಮೆಯಾಗದಂತೆ ಕಳೆಗಳ ಪೈಪೋಟಿಯನ್ನು ಕಡಿಮೆ ಖರ್ಚಿನ ಎರಡು ಅಥವಾ ಎರಡಕ್ಕಿಂತ ಹೆಚ್ಚು ಕಳೆ ನಿರ್ವಹಣಾ ಪದ್ಧತಿಯನ್ನು ಸಂಯೋಜಿಸಿ ಕಳೆ ನಿಯಂತ್ರಿಸುವುದಕ್ಕೆ ಕಳೆ ನಿರ್ವಹಣಾ ಪದ್ಧತಿ ಎಂದು ಕರೆಯುತ್ತಾರೆ.
ಕಳೆ ನಿರ್ವಹಣೆ ವಿಧಾನ
1. ಬೇಸಾಯ ಪದ್ಧತಿ
1. ಬೇಸಾಯ ಪದ್ಧತಿ
2. ಯಾಂತ್ರಿಕ ಪದ್ಧತಿ
3. ಕಳೆನಾಶಕಗಳ ಬಳಕೆ
4. ಜೈವಿಕ ಪದ್ಧತಿಗಳು
ಈ ಕೆಳಕಂಡ ಪರಿಸ್ಥಿತಿಯಲ್ಲಿ ಅಥವಾ ಅನ್ಯ ಮಾರ್ಗವಿಲ್ಲದೆ ರಾಸಾಯನಿಕ ಕೀಟನಾಶಕಗಳನ್ನು ಎಚ್ಚರಿಕೆಯಿಂದ ಬಳಸಬೇಕು.
1. ಕೈಯಲ್ಲಿ ಕಳೆ ಕೀಳದಿರುವುದಕ್ಕೆ ಆಗದಿದ್ದಾಗ.
2. ಕಳೆ ಮತ್ತು ಸಸಿಗಳು ಒಂದೇ ರೀತಿ ಕಾಣುವಾಗ (ಭತ್ತ, ಗೋಧಿ) .
3. ಕೃಷಿ ಕಾರ್ಮಿಕರಿಗೆ ಕೊಡುವ ಕೂಲಿ, ರಾಸಾಯನಿಕ ಕಳೆನಾಶಕ ಬಳಕೆಗಿಂತ ಹೆಚ್ಚಿದ್ದರೆ.
4. ಕೃಷಿ ಕಾರ್ಮಿಕರು ಸಿಗದೆ ಇದ್ದಾಗ.
ಪಾರ್ಥೇನಿಯಂ ಕಳೆ ನಿಯಂತ್ರಣ
ಪಾರ್ಥೇನಿಯಂ ಕಳೆ ಕೆಲವು ಪ್ರದೇಶಗಳಲ್ಲಿ ಬಹು ಬೇಗ ಹರಡುವುದರಿಂದ ಅವುಗಳನ್ನು ಕಂಡ ತತ್‌ಕ್ಷಣವೇ ನಾಶಮಾಡಲು ಈ ಕ್ರಮ ಅನುಸರಿಸಬೇಕು.
1. ಹೂ ಬಿಡುವುದಕ್ಕೆ ಮೊದಲು ಗಿಡ ಕೀಳಬೇಕು.
2. ಪಾರ್ಥೇನಿಯಂ ನಾಶಕ್ಕೆ ಕೆಲವು ಬೀಜಗಳನ್ನು ಬಿತ್ತನೆ ಮಾಡಬೇಕು.
3. ಕೆಲವು ಕೀಟಗಳನ್ನು ಪಾರ್ಥೇನಿಯಂ ಕಳೆ ತಿನ್ನಲು ಬಿಡುವುದು.
ಜಯಾನಂದ ಅಮೀನ್ ಬನ್ನಂಜೆ