Advertisement
ಕನ್ನಡ ಭಾಷೆ ಅನುಷ್ಠಾನ ಸಮುದಾಯದ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಇಲಾಖೆಗಳಲ್ಲಿ ಸಮನ್ವಯ ಸಾಧಿಸಿದರೆ ಅಭಿವೃದ್ಧಿ ಪ್ರಾಧಿಕಾರಿಗಳು ಏಳಿಗೆಯಾಗಲು ಸಾಧ್ಯ. ಈ ನಿಟ್ಟಿನಲ್ಲಿ ಉಡುಪಿ ಜಿಲ್ಲೆ ಮಾದರಿ ಯಾಗಬೇಕು. ಸಮುದಾಯ ಹಾಗೂ ಸಾರ್ವಜನಿಕರ ಸಹಭಾಗಿತ್ವದಲ್ಲಿ ಕನ್ನಡ ಭಾಷೆ ಅನುಷ್ಠಾನವಾಗಬೇಕು. ಆದಿಉಡುಪಿಯಲ್ಲಿ ರಂಗಮಂದಿರ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಕೆ ಮಾಡಲಾಗಿದೆ ಎಂದರು.
ಕನ್ನಡ ಭಾಷೆ, ಶಾಲೆಗಳ ಬಗ್ಗೆ ಉತ್ತಮ ನಿಲುವು ತೋರುವಂತೆ ಸರಕಾರಕ್ಕೆ ಹಲವು ದಿನಗಳ ಹಿಂದೆಯೇ ತಿಳಿಸಲಾಗಿದೆ. ಕನ್ನಡ ಕಲಿಕಾ ಅಧಿನಿಯಮದ ಅನುಷ್ಠಾನ ಯಾವ ಜಿಲ್ಲೆಗಳಲ್ಲಿ ಎಷ್ಟು ಆಗಿದೆ ಎಂಬ ಬಗ್ಗೆ ವರದಿ ನೀಡುವಂತೆ ಆಯಾಯ ಜಿಲ್ಲೆಗಳ ಡಿಡಿಪಿಐಗಳಿಗೆ ಸೂಚನೆ ನೀಡಲಾಗಿದೆ ಎಂದರು. ಜಿಲ್ಲಾಧಿಕಾರಿ ಕೂರ್ಮಾರಾವ್, ಜಿ.ಪಂ. ಸಿಇಒ ಪ್ರಸನ್ನ ಎಚ್., ಎಡಿಸಿ ವೀಣಾ, ಪ್ರಾಧಿಕಾರದ ಸದಸ್ಯರಾದ ಡಾ| ರಮೇಶ್, ಮಹೇಶ್ ಎನ್., ಡಾ| ಸಂತೋಷ್ ಹಾನಗಲ್ ಪತ್ರಿಕಾಗೋಷ್ಠಿಯಲ್ಲಿದ್ದರು.
Related Articles
ನಾಗರಿಕ ಸೇವಾ ಅಧಿಕಾರಿಗಳು ಕನ್ನಡ ಭಾಷೆಯಲ್ಲಿ ವ್ಯವಹರಿಸುವಂತಾಗಬೇಕು. ಈ ನಿಟ್ಟಿನಲ್ಲಿ ಅಧಿಕಾರಿಗಳಿಗೆ ತರಬೇತಿ ನೀಡುವ ಚಿಂತನೆಯಿದೆ. ಈಗಾಗಲೇ ಕನ್ನಡ ಭಾಷೆ ಬಳಕೆ ಮಾಡದ 105 ಮಂದಿ ಐಎಎಸ್ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮಕ್ಕೆ ಬರೆಯಲಾಗಿದೆ ಎಂದು ನಾಗಾಭರಣ ಅವರು ತಿಳಿಸಿದರು.
Advertisement