Advertisement

ಕೇರಳದ ಲೇಬರ್‌ ಪಬ್ಲಿಕ್‌ ಶಾಲೆಗೆ ಸಮಗ್ರ ಪ್ರಶಸ್ತಿ ಗರಿ

05:13 PM Nov 17, 2018 | |

ದಾವಣಗೆರೆ: ತೋಳಹುಣಸೆ (ದಾವಣಗೆರೆ ತಾಲೂಕು) ಶ್ರೀಮತಿ ಪಾರ್ವತಮ್ಮ ಶಾಮನೂರು ಶಿವಶಂಕರಪ್ಪ ಆಂಗ್ಲ ಮಾಧ್ಯಮ ವಸತಿಯುತ ಶಾಲಾ ಮೈದಾನದಲ್ಲಿ ಶುಕ್ರವಾರ ಮುಕ್ತಾಯ ಗೊಂಡ 23ನೇ ರಾಷ್ಟ್ರ ಮಟ್ಟದ ಸಿಬಿಎಸ್‌ಇ ಅಥ್ಲೆಟಿಕ್ಸ್‌ ಕ್ರೀಡಾಕೂಟದಲ್ಲಿ ಕೇರಳದ ಮುರುಗನಾಥಪಲ್ಲಿಯ ಲೇಬರ್‌ ಪಬ್ಲಿಕ್‌ ಶಾಲೆ ಒಟ್ಟಾರೆ 51 ಅಂಕಗಳೊಂದಿಗೆ ಸಮಗ್ರ ಪ್ರಶಸ್ತಿ ಗಳಿಸಿದೆ. 

Advertisement

ಮೈಸೂರಿನ ಜೆ.ಎಸ್‌.ಎಸ್‌. ಪಬ್ಲಿಕ್‌ ಶಾಲೆಯ ಎಚ್‌.ಎಸ್‌. ಹರ್ಷಿತಾ 14 ವರ್ಷದೊಳಗಿನ ಬಾಲಕಿಯರ 200 ಮೀಟರ್‌ ಓಟದ ಸ್ಪರ್ಧೆಯಲ್ಲಿ ಚಿನ್ನದ ಪದಕ ಹಾಗೂ 100 ಮೀಟರ್‌ ವಿಭಾಗದಲ್ಲಿ ಹರ್ಷಿತಾ ತೃತೀಯ ಸ್ಥಾನ ಪಡೆದರು.
 
19 ವರ್ಷದ ಬಾಲಕಿಯರ ವಿಭಾಗದ ಶಾಟ್‌ ಪುಟ್‌ನಲ್ಲಿ ಜೆಮ್‌ಷೆಡ್‌ಪುರದ ಪಬ್ಲಿಕ್‌ ಶಾಲೆಯ ವಿ .ರಾವಲ್‌, 14 ವರ್ಷದ ಬಾಲಕರ ವಿಭಾಗ ಶಾಟ್‌ಪುಟ್‌ನಲ್ಲಿ ಸೋನಾಪತ್‌ನ ಪ್ರತಾಪ್‌ ಮೆಮೋರಿಯಲ್‌ ಶಾಲೆಯ ನಿಖೀಲೇಶ್‌, 17 ವರ್ಷದ ಬಾಲಕರ ವಿಭಾಗದಲ್ಲಿ ಯಮುನಾ ನಗರದ ಡಿ.ಎ.ವಿ. ಸಧುರಾ ಯಮುನಾ ನಗರ ಶಾಲೆಯ ಅರ್ಜುನ್‌ ಪ್ರಥಮ ಸ್ಥಾನ ಪಡೆದಿದ್ದಾರೆ.

19 ವರ್ಷದ ಬಾಲಕರ ವಿಭಾಗದ ಡಿಸ್ಕಸ್‌ ಥ್ರೋನಲ್ಲಿ ಶ್ರೀ ಗುರುಹರಿಕೃಷ್ಣನ್‌ ಪಬ್ಲಿಕ್‌ ಶಾಲೆಯ ಜೇಸ್‌ಕರಣ್‌ ಸುರತ್‌ಸಿಂಗ್‌ ಅತ್ಯುತ್ತಮ ಆಟಗಾರ ಪ್ರಶಸ್ತಿ ಪಡೆದರು. 14 ವರ್ಷದ ಬಾಲಕಿಯರ ವಿಭಾಗದಲ್ಲಿ ಚೈನ್ನೈನ ಪಿಎಸ್‌ಬಿಬಿ ಸೀನಿಯರ್‌ ಸೆಕೆಂಡರಿ ಸ್ಕೂಲ್‌ 24 ಅಂಕಗಳೊಂದಿಗೆ ಸಮಗ್ರ ಪ್ರಶಸ್ತಿ ಪಡೆದಿದೆ. 17 ವರ್ಷದ ಬಾಲಕಿಯರ ವಿಭಾಗದಲ್ಲಿ ಕೇರಳದ ಭವಾನಸ್‌ ವಿದ್ಯಾಮಂದಿರ್‌(20 ಅಂಕ), 19 ವರ್ಷದ ಬಾಲಕಿಯರ ವಿಭಾಗದಲ್ಲಿ ರಾಜಸ್ಥಾನದ ಭಿವಾಂಡಿಯ ಮಾರ್ಡನ್‌ ಪಬ್ಲಿಕ್‌ ಶಾಲೆ (38 ಅಂಕ), 14 ವರ್ಷದ ಬಾಲಕರ ವಿಭಾಗದಲ್ಲಿ ಜಾರ್ಖಂಡ್‌ನ‌ ರಾಂಚಿಯ ಡಿ.ಎ.ವಿ. ನಂದರಾಜ ಪಬ್ಲಿಕ್‌ ಶಾಲೆ (21 ಅಂಕ), 17 ವರ್ಷದ ಬಾಲಕರ ವಿಭಾಗದಲ್ಲಿ ಉತ್ತರಖಾಂಡ್‌ನ‌ ಮೇರಿಪಿರಿ ಖಾಲ್ಸಾ ಎಸಿಎ ಸ್ಕೂಲ್‌ (16 ಅಂಕ), 19 ವರ್ಷದ ಬಾಲಕರ
ವಿಭಾಗದಲ್ಲಿ ಕೇರಳದ ಮುರುಗನಾಥಪಲ್ಲಿಯ ಲೇಬರ್‌ ಪಬ್ಲಿಕ್‌ ಶಾಲೆ (20 ಅಂಕ), 19 ವರ್ಷದ ಬಾಲಕಿಯರ ವಿಭಾಗದಲ್ಲಿ
ಪಂಜಾಬ್‌ನ ಖೈಲಾದ ಬಾಬಾಸಿಂಗ್‌ ಸ್ಕೂಲ್‌ 20 ಅಂಕಗಳೊಂದಿಗೆ ಸಮಗ್ರ ಪ್ರಶಸ್ತಿ ಪಡೆದಿವೆ. 

ಸಮಾರೋಪದಲ್ಲಿ ಮಾತನಾಡಿದ ಶಾಲೆಯ ನಿರ್ದೇಶಕ ಕೆ. ಇಮಾಂ, ವಿದ್ಯಾರ್ಥಿಗಳು ಕ್ರೀಡೆಯಲ್ಲಿ ಉನ್ನತ ಸಾಧನೆ ಮಾಡಿ ಭವ್ಯ ಭವಿಷ್ಯ ರೂಪಿಸಿಕೊಳ್ಳಬೇಕು ಎಂದರು. ಕೈಗಾರಿಕೋದ್ಯಮಿ ಅಭಿಜಿತ್‌ ಗಣೇಶ್‌. ಸ್ವಾತಿ ಅಭಿಜಿತ್‌, ಕ್ರೀಡಾಕೂಟದ ವೀಕ್ಷಕ ಸಂಜಯ್‌ ಚೌವ್ಹಾಣ್‌, ಅಂತಾರಾಷ್ಟ್ರೀಯ ವೀಕ್ಷಕರಾದ ವಿಶ್ವನಾಥ್‌, ರುದ್ರಪ್ಪ ಇತರರು ಇದ್ದರು. ಮಂಜುನಾಥ ರಂಗರಾಜು ಸ್ವಾಗತಿಸಿದರು. ಶಾಲೆಯ ಪ್ರಾಚಾರ್ಯೆ ಜೆ. ಎಸ್‌. ವನಿತಾ ವಂದಿಸಿದರು. 

ಸಿಬಿಎಸ್‌ಇ ಶಾಲೆಗಳ ರಾಷ್ಟ್ರ ಮಟ್ಟದ ಅಥ್ಲೆಟಿಕ್ಸ್‌ ಕ್ರೀಡಾಕೂಟ ಕರ್ನಾಟಕದಲ್ಲಿ ಮೊದಲ ಬಾರಿಗೆ, ದಕ್ಷಿಣ ಭಾರತದಲ್ಲಿ ಎರಡನೇ ಬಾರಿಗೆ ನಡೆದಿದೆ. ಕ್ರೀಡಾಕೂಟದಲ್ಲಿ ಭಾರತ ಸೇರಿದಂತೆ ಸಿ.ಬಿ.ಎಸ್‌.ಇ ಒಳಪಡುವ 7 ದೇಶಗಳ 4 ಸಾವಿರ ಕ್ರೀಡಾಪಟುಗಳು ಭಾಗವಹಿಸಿದ್ದರು. 

Advertisement
Advertisement

Udayavani is now on Telegram. Click here to join our channel and stay updated with the latest news.

Next