Advertisement
ರಾಜಕೀಯದ ಗಂಧಗಾಳಿಯೂ ಇಲ್ಲದ ನಟ ವೊಲೊಡಿಮಿರ್ ಝೆಲೆನ್ಸಿ$R (41) ಉಕ್ರೇನ್‌ನಲ್ಲಿ ಎಷ್ಟೊಂದು ಜನಪ್ರಿಯತೆ ಗಳಿಸಿದ್ದರೆಂದರೆ, ಚುನಾವಣೆಯಲ್ಲಿ ಇವರು ಅಧ್ಯಕ್ಷರಾಗಿ ಆಯ್ಕೆಯಾದರು! ಇತ್ತೀಚೆಗೆ ನಡೆದಿದ್ದ ಅಧ್ಯಕ್ಷೀಯ ಚುನಾವಣೆಯಲ್ಲಿ ಅವರು, ಹಾಲಿ ಅಧ್ಯಕ್ಷ ಪೆಟ್ರೊ ಪೊರೊಶೆಂಕೊ ವಿರುದ್ಧ ಶೇ. 73.2 ಮತಗಳನ್ನು ಗಳಿಸಿ ಜಯಶಾಲಿಯಾಗಿದ್ದಾರೆ. ಅಧ್ಯಕ್ಷರ ಆಡಳಿತ ವೈಖರಿಯನ್ನು ಅಣಕಿಸುವ “ಸರ್ವೆಂಟ್ ಆಫ್ ದ ಪೀಪಲ್’ ಎಂಬ ವಿಡಂಬ ನಾತ್ಮಕ ಟಿವಿ ಕಾರ್ಯಕ್ರಮವನ್ನು ಝೆಲೆನ್ಸಿ ನಡೆಸುತ್ತಿದ್ದರು.
Related Articles
Advertisement
ಯಾರೀ ಝೆಲೆನ್ಸಿ$R? ಝೆಲೆನ್ಸಿ$R ಹುಟ್ಟಿದ್ದು, ಸೋವಿಯತ್ ರಷ್ಯಾದ ಭಾಗವಾಗಿದ್ದ ಉಕ್ರೇನಿಯನ್ ಎಸ್‌ಎಸ್‌ಆರ್‌ನ ಕ್ರಿವ್ವಿ ರಿಹ್ ಎಂಬಲ್ಲಿ. ಕ್ರಿವ್ಹಿ ರಿಹ್‌ನಲ್ಲೇ ತಮ್ಮ ಪ್ರಾಥಮಿಕ ವಿದ್ಯಾಭ್ಯಾಸ ಮುಗಿಸಿದ ಅವರು, ಅನಂತರ ಕಿÂವ್ ನ್ಯಾಶನಲ್ ಎಕನಾಮಿಕ್ ಯೂನಿವರ್ಸಿಟಿಯಲ್ಲಿ ಕಾನೂನು ಪದವಿ ಪಡೆದಿದ್ದಾರೆ. ತನ್ನ 17ನೇ ವರ್ಷದಲ್ಲಿ ಕೆ.ವಿ.ಎನ್. ತಂಡವನ್ನು ಸೇರಿಕೊಂಡ ಅವರು, ಲಿವ್ ಇನ್ ದ ಬಿಗ್ ಸಿಟಿ, ಆಫೀಸ್ ರೊಮಾನ್ಸ್, ಅವರ್ ಟೈಂ, ರೆವಿಸ್ಕಿ ವರ್ಸಸ್ ನೆಪೋಲಿಯನ್ ಮುಂತಾದ ಸಿನೆಮಾಗಳಲ್ಲಿ ಅಭಿನಯಿಸಿದರು. ತಿರುವು ತಂದ ಆ ಪ್ರಕರಣ
2014ರಲ್ಲಿ ಅಂದಿನ ಉಕ್ರೇನ್‌ನ ಸಂಸ್ಕೃತಿ ಸಚಿವಾಲಯವು ರಷ್ಯಾದ ಕಲಾವಿದರು ಉಕ್ರೇನ್‌ನ ಕಲಾ ಕ್ಷೇತ್ರಗಳಲ್ಲಿ ಕೆಲಸ ಮಾಡಬಾರದೆಂಬ ನಿಯಮ ಜಾರಿಗೊಳಿಸಲು ಮುಂದಾಗಿತ್ತು. ಇದನ್ನು ಝೆಲೆನ್ಸಿ$R ಬಹಿರಂಗವಾಗಿ ವಿರೋಧಿಸಿದ್ದರು. ಇಂಥ ರಾಜಕೀಯ ವಾಕ್ಸಮರದ ಪರಿಣಾಮ ಇವರ ಲವ್ ಇನ್ ಬಿಗ್ ಸಿಟಿ – 2 ಚಿತ್ರವನ್ನು ನಿಷೇಧಿಸಲಾಯಿತು. ಅಷ್ಟರಲ್ಲಿ ಉಕ್ರೇನ್‌ನಲ್ಲಿನ ಹಿಂಸಾಚಾರ, ತಾರತಮ್ಯ ಧೋರಣೆಗಳು ಜನರನ್ನು ಹಿಂಡಿ ಹಿಪ್ಪೆ ಮಾಡಿತ್ತು. ಇದೆಲ್ಲದನ್ನೂ ವಿರೋಧಿಸುವ ಆದರೆ, ವಿಡಂಬ ನಾತ್ಮಕವಾಗಿ ಸರಕಾರದ ರೀತಿ ನೀತಿಗಳನ್ನು ಹಳಿಯುವ ಹೊಸ ಪ್ರಯತ್ನಕ್ಕೆ ಝೆಲೆನ್ಸಿ$R ಮುಂದಾಗಿದ್ದು, ಇದರ ಫಲ “ಸರ್ವೆಂಟ್ ಆಫ್ ದ ಪೀಪಲ್’.