Advertisement

21 ಗ್ರಾಪಂನಲ್ಲಿ ಬಿಜೆಪಿಗೆ ಸ್ಪಷ್ಟ ಬಹುಮತ

02:32 PM Jan 02, 2021 | Team Udayavani |

ರಾಣಿಬೆನ್ನೂರ: ತಾಲೂಕಿನಲ್ಲಿ ಇತ್ತೀಚೆಗೆ ಜರುಗಿದ 33 ಗ್ರಾಪಂ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ 367 ಅಭ್ಯರ್ಥಿಗಳ ಪೈಕಿ 245ಕ್ಕೂ ಅಧಿಕ ಸದಸ್ಯರು ಚುನಾಯಿತರಾಗುವ ಮೂಲಕ ಒಟ್ಟಾರೆ21 ಗ್ರಾಪಂಗಳಲ್ಲಿ ಬಿಜೆಪಿ ಬೆಂಬಲಿತರಿಗೆ ಸ್ಪಷ್ಟ ಬಹುಮತ ದೊರಕಿದೆ ಎಂದು ಶಾಸಕ ಅರುಣಕುಮಾರ ಪೂಜಾರ ಹೇಳಿದರು.

Advertisement

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಾರಿ ನಿರೀಕ್ಷೆಗೂಮೀರಿ ಗ್ರಾಮೀಣ ಮಟ್ಟದಲ್ಲಿ ಬಿಜೆಪಿಗೆ ಬೆಂಬಲದೊರಕಿದೆ. ಕಾಂಗ್ರೆಸ್‌ ಭದ್ರಕೋಟೆಯಾಗಿದ್ದ ತಾಲೂಕಿನ ಮೆಡ್ಲೇರಿ, ಅಂಕಸಾಪೂರ, ಬೇಲೂರ, ಉದಗಟ್ಟಿ, ರಾಹುತನಕಟ್ಟಿ ಮತ್ತಿತರ ಗ್ರಾಮಗಳಲ್ಲಿ ಬಿಜೆಪಿಬೆಂಬಲಿತ ಅಭ್ಯರ್ಥಿಗಳು ಭರ್ಜರಿ ಜಯ ಗಳಿಸಿದ್ದಾರೆ ಎಂದರು.

ಪ್ರಧಾನಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ನೇತೃತ್ವದ ಸರಕಾರಗಳುಕೈಗೊಂಡಿರುವ ಜನಪರ ಯೋಜನೆಗಳೇ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಗೆಲ್ಲಲು ಬಹಳಷ್ಟುಸಹಕಾರಿಯಾಗಿದೆ. ಜೊತೆಗೆ ಕಳೆದ ಬಾರಿಯ ಈಕ್ಷೇತ್ರದ ವಿಧಾನಸಭಾ ಚುನಾವಣೆಯಲ್ಲಿನ ಸ್ಫೂರ್ತಿ ಈಗಲೂ ಎಲ್ಲಡೆ ಇದೆ ಎಂದರು.

ಗ್ರಾಪಂಗಳಲ್ಲಿ ಯುವಕರು ಹಾಗೂ ಪಕ್ಷದ ಹಿರಿಯರು ತೋರಿರುವ ಸಂಘಟನೆಯನ್ನುಮುನ್ನಡೆಸಿಕೊಂಡು ಇದೇ ಸ್ಫೂರ್ತಿಯೊಂದಿಗೆಹಳ್ಳಿಗಳಲ್ಲಿ ಬಿಜೆಪಿಯು ಮತ್ತಷ್ಟು ಬಲಿಷ್ಠವಾಗುತ್ತಿದೆ. ಮುಂಬರುವ ತಾಪಂ ಮತ್ತು ಜಿಪಂ ಚುನಾವಣೆಗಳಲ್ಲೂ ಗೆಲುವು ಸಾಧಿ ಸುವ ಸಂಬಂಧ ಈಗಿನಿಂದಲೇ ಹೆಚ್ಚಿನ ತಯಾರಿ ಮಾಡಿಕೊಳ್ಳಲಾಗುತ್ತಿದೆ ಎಂದರು.

ಗ್ರಾಪಂಗಳಲ್ಲಿನ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುವುದರ ಜೊತೆಗೆ ಗ್ರಾಪಂಗಳ ಸರ್ವತೋಮುಖ ಅಭಿವೃದ್ಧಿಗಾಗಿ ರಾಣೆಬೆನ್ನೂರ ವಿಧಾನಸಭಾ ಕ್ಷೇತ್ರದಲ್ಲಿನಪ್ರತಿ ಗ್ರಾಪಂಗೂ ಸರಕಾರದಿಂದ 1 ಕೋಟಿ ರೂ. ವಿಶೇಷಅನುದಾನ ನೀಡಬೇಕೆಂದು ಮುಖ್ಯಮಂತ್ರಿಗಳಿಗೆಹಾಗೂ ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ಮಾಡಿಕೊಳ್ಳಲಾಗುವುದು ಎಂದರು.

Advertisement

ಈ ತಿಂಗಳಿನಲ್ಲಿ ಕ್ಷೇತ್ರದಲ್ಲಿನ ವಿವಿಧ ಅಭಿವೃದ್ಧಿಕಾಮಗಾರಿಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆಗಾಗಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪನವರುನಗರಕ್ಕೆ ಆಗಮಿಸಲಿದ್ದಾರೆ. ಇಂದಿನಿಂದ ತಾಲೂಕಿನಲ್ಲಿಶಾಲಾ, ಕಾಲೇಜುಗಳು ತೆರೆದಿದ್ದು, ಕೋವಿಡ್‌ನಿಯಮಗಳನ್ನು ಅನುಸರಿಸಿ ವಿದ್ಯಾರ್ಥಿಗಳಿಗೆ ಬೋಧನೆ ಮಾಡಲಾಗುತ್ತಿದೆ ಎಂದರು.

ಈ ಸಂದರ್ಭದಲ್ಲಿ ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ಚೋಳಪ್ಪ ಕಸವಾಳ, ಎಸ್‌.ಎಸ್‌. ರಾಮಲಿಂಗಣ್ಣನವರ, ಮಂಜುನಾಥ ಓಲೇಕಾರ,ಸಂತೋಷ ಪಾಟೀಲ, ಪ್ರಕಾಶ ಪೂಜಾರ, ಸಿದ್ದಣ್ಣ ಚಿಕ್ಕಬಿದರಿ, ದೀಪಕ್‌ ಹರಪನಹಳ್ಳಿ, ಬಸವರಾಜ ಹುಲ್ಲತ್ತಿ, ಬಸವರಾಜ ಚಳಗೇರಿ ಸೇರಿದಂತೆ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next