ಉತ್ತರ ಕೊರಿಯ ಮತ್ತು ದಕ್ಷಿಣ ಕೊರಿಯ ನಡುವಿನ ಯುದ್ಧದಲ್ಲಿ “ಚೋಶಿನ್ ರಿಸರ್‌ವಾಯರ್ ಸಮರ’ ಪ್ರಮುಖವಾದುದು. 1950ರಲ್ಲಿ ನಡೆದ ಈ ಯುದ್ಧದಲ್ಲಿ ಚೀನಾ ಮತ್ತು ಅಮೆರಿಕ ಕೂಡಾ ಧುಮುಕಿತ್ತು. ಸುಮಾರು 17 ದಿನಗಳ ಕಾಲ ಶೀತಲ ವಾತಾವರಣದಲ್ಲಿ ಭೀಕರ ಕಾಳಗ ನಡೆದಿದ್ದನ್ನು ಅನೇಕ ಹಿರಿಯ ಸೈನಿಕರು ನೆನಪಿಸಿಕೊಳ್ಳುತ್ತಾರೆ. ಈ ಸಂದರ್ಭದಲ್ಲಿ ಅಮೆರಿಕ ಸೈನ್ಯದ ತುಕಡಿಯೊಂದು ಶತ್ರುಗಳ ಮೇಲೆ ಶೆಲ್ ಬಾಂಬ್ ಧಾಳಿಯಲ್ಲಿ ತೊಡಗಿತ್ತು. ನಿರ್ಣಾಯಕ ಹಂತದಲ್ಲಿ ಅವರ ಬಳಿ ಇದ್ದ ಶೆಲ್‌ಗಳ ದಾಸ್ತಾನು ಖಾಲಿಯಾಗತೊಡಗಿತ್ತು. ಕಮಾಂಡರ್ ರೇಡಿಯೊ ಆಪರೇಟರ್‌ನನ್ನು ಕರೆದು ಸೇನಾ ನೆಲೆಯನ್ನು ಸಂಪರ್ಕಿಸಿ ಆದಷ್ಟು ಬೇಗ ಶೆಲ್‌ಗಳನ್ನು ಸರಬರಾಜು ಮಾಡಲು ತಿಳಿಸೆಂದು ಆಜ್ಞಾಪಿಸಿದ. ಆಪರೇಟರ್ ಸೈನಿಕ ಅದರಂತೆಯೇ ಸೇನಾ ನೆಲೆಯನ್ನು ಸಂಪರ್ಕಿಸಿ “ಚಾಕಲೇಟ್ ಖಾಲಿಯಾಗಿದೆ. ಆದಷ್ಟು ಬೇಗನೆ ಸಪ್ಲೆ„ ಮಾಡಿ. ಗಿರಾಕಿಗಳು ಕಾದಿದ್ದಾರೆ’ ಎಂದ. ಅಸಲಿಗೆ ಯುದ್ಧಕಾಲದಲ್ಲಿ ಫೋನ್ ಕರೆಗಳನ್ನು ಕದ್ದಾಲಿಸುವುದು ಸಾಮಾನ್ಯವಾಗಿರುವುದರಿಂದ ಸಂಕೇತ ಭಾಷೆಗಳನ್ನು ಬಳಸುತ್ತಾರೆ. ಇದರಿಂದ ಶತ್ರುಗಳು ಕದ್ದಾಲಿಸಿದರೂ ಅವರಿಗೆ ಅದು ಅರ್ಥವಾಗುವುದಿಲ್ಲ. ಅಮೆರಿಕ ಸೇನೆಯಲ್ಲಿ ಬಾಂಬ್ ಶೆಲ್‌ಗಳಿಗೆ ಕೋಡ್ ವರ್ಡ್ “ಚಾಕಲೇಟ್’ ಎಂಬುದಾಗಿತ್ತು. ಇತ್ತ ಶೆಲ್‌ಗಳು ಯಾವಾಗ ಬಂದಾವೆಂದು ಸೈನಿಕರು ಕಾದರು. ಅಷ್ಟರಲ್ಲಿ ವಿಮಾನವೊಂದು ಬಂದಿತು. ದೊಡ್ಡ ಡಬ್ಬವನ್ನು ಪ್ಯಾರಾಚೂಟ್ ಮುಖಾಂತರ ಸುರಕ್ಷಿತವಾಗಿ ಇಳಿಸಿ ಅದು ಹಾರಿ ಹೋಯಿತು. ಸೈನಿಕರು ಡಬ್ಬ ತೆರೆದು ನೋಡಿದರೆ ಅದರಲ್ಲಿ ಶೆಲ್‌ಗಳಿಗೆ ಬದಲಾಗಿ ನಿಜಕ್ಕೂ ಚಾಕಲೇಟ್‌ಗಳಿದ್ದುವಂತೆ. ತಲೆ ಕೆಡಿಸಿಕೊಳ್ಳುವ ಸರದಿ ಅಮೆರಿಕನ್ ಸೈನಿಕರದಾಯಿತು. “ಚಾಕಲೇಟ್’ ಕೋಡ್ ವರ್ಡನ್ನು ಬೇಧಿಸಲು ಸಾಧ್ಯವಾಗದೆ ಹತಾಶರಾದ ಶತ್ರು ಸೈನ್ಯದವರೇ ಈ ಕೃತ್ಯದ ಹಿಂದಿರುವರೆಂದು ಅಮೆರಿಕನ್ನರು ತಿಳಿದರು.
ಹವನ