Advertisement

“ಮಕ್ಕಳ ಪ್ರತಿಭೆ ಅರಳಿಸುವ ಕೆಲಸವಾಗಲಿ’

12:32 PM Mar 28, 2017 | Team Udayavani |

ಮುಡಿಪು: ಮಕ್ಕಳಲ್ಲಿ ಪ್ರತಿಭೆಗಳಿದ್ದರೂ ಅದನ್ನು ಪ್ರಕಟ ಪಡಿಸುವ ಗುಣವನ್ನು ಕಳೆದು ಕೊಂಡಿದ್ದಾರೆ. ಈ ನಿಟ್ಟಿನಲ್ಲಿ ಅವ ರಲ್ಲಿರುವ ಪ್ರತಿಭೆಯನ್ನು ಕೆರಳಿಸಿ ಸಹಜವಾಗಿ ಅರಳಿಸುವ ಕಾರ್ಯಗಳು ಆರಂಭವಾಗಬೇಕಿದೆ ಎಂದು ಮಂಗಳೂರು ಸ್ವರೂಪ ಅಧ್ಯಯನ ಸಂಸ್ಥೆಯ ನಿರ್ದೇಶಕ  ಗೋಪಾಡ್ಕರ್‌  ಹೇಳಿದರು.

Advertisement

ಅವರು ನ್ಯೂಸ್‌ ಪಾಯಿಂಟ್‌ ಮುಡಿಪು, ಜನ ಶಿಕ್ಷಣ ಟ್ರಸ್ಟ್‌ ಮುಡಿಪು ಮತ್ತು ಚಿತ್ತಾರ ಬಳಗ ಮಂಗಳೂರು ಇವುಗಳ ಸಹಭಾಗಿತ್ವದೊಂದಿಗೆ  ಮುಡಿಪು ಜನಶಿಕ್ಷಣ  ಕೇಂದ್ರದಲ್ಲಿ ಆಯೋಜಿಸಲಾಗಿದ್ದ  “ಮಂಚಿ ಮಕ್ಕಳ ಕೊಲಾಜ್‌  ಚಿತ್ರ ಪಯಣ’ದ  ಸಮಾರೋಪ ಸಮಾರಂಭದಲ್ಲಿ  ಮಾತನಾಡಿದರು.

ಮಕ್ಕಳ ಸಾಮರ್ಥ್ಯದ ಲೂಟಿ ಆಗುತ್ತಿದ್ದು, ಎಲ್ಲರೂ ಮಿತಿಯ ಒಳಗೆ ಬಂಧಿಯಾಗಿದ್ದಾರೆ  ಮಕ್ಕಳು ಶಿಕ್ಷಣದ ಸಾಧ್ಯತೆಯ ಮಿತಿಯೊಳಗೆ ಉಳಿದುಕೊಂಡಿದ್ದಾರೆ. ಅವರನ್ನು ಕೆರಳಿಸಿ ಸಹಜವಾಗಿ ಅರಳಿಸುವ ರೀತಿಯಲ್ಲಿ ಕಾರ್ಯಗಳು ಆರಂಭ ವಾಗಬೇಕಿವೆ. ಸದ್ಯದ ಸ್ಥಿತಿಯಲ್ಲಿ ಮಕ್ಕಳ ಕಲಿಯುವ ಹಕ್ಕನ್ನು  ಬೇರೆಯವರು ಇಟ್ಟುಕೊಂಡಿದ್ದಾರೆ. ಶಿಕ್ಷಣ ವ್ಯವಸ್ಥೆಯಲ್ಲಿ ಮಕ್ಕಳ  ದೇಹಕ್ಕೆ ಮತ್ತು ಮನಸ್ಸಿಗೆ ಶಿಕ್ಷೆಯಾಗುತ್ತಿದೆ ಎಂದರು. ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿ  ಲೋಕೇಶ್‌ ಸಿ.,  ನ್ಯೂಸ್‌ ಪಾಯಿಂಟ್‌ನ ವೆಂಕಟೇಶ್‌ ಎಚ್‌., ಕೊಳ್ನಾಡು ಮಂಚಿ ಸರಕಾರಿ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯ ರಾಮಮೂರ್ತಿ,  ಆಕೃತಿ ಪ್ರಿಂಟರ್ಸ್‌ ನ  ಕಲ್ಲೂರು ನಾಗೇಶ್‌, ಚಿತ್ತಾರ ಬಳಗದ ಸಂಚಾಲಕ ಸತೀಶ್‌ ಮುಖ್ಯ ಅತಿಥಿಗಳಾಗಿದ್ದರು.

ಕೊಲಾಜ್‌  ಚಿತ್ರ ಪಯಣದ ಪರಿಕಲ್ಪನೆಯ ತಾರಾನಾಥ್‌ ಕೈರಂಗಳ ಸ್ವಾಗತಿಸಿದರು. ಚಂದ್ರಶೇಖರ್‌ ಪಾತೂರು ಕಾರ್ಯಕ್ರಮ ನಿರ್ವಹಿಸಿದರು. ಚಿತ್ತಾರ ಬಳಗದ ಸಂತೋಷ್‌ ಶೆಟ್ಟಿ  ವಂದಿಸಿದರು. ಜನಶಿಕ್ಷಣ ಕೇಂದ್ರದಲ್ಲಿ ವಿದ್ಯಾರ್ಥಿಗಳು ರಚಿಸಿದ ಕೊಲಾಜ್‌ ಪ್ರದರ್ಶನಕ್ಕೆ ಸಾರ್ವಜನಿಕರಿಗೆ ಮುಕ್ತ ಅವಕಾಶವಿದೆ. ಒಂದು ವಾರಗಳ ಕಾಲ ನಡೆಯಲಿರುವ ಕೊಲಾಜ್‌ ಚಿತ್ರಕಲಾ ಕಾರ್ಯಾಗಾರದಲ್ಲಿ  ಬಂಟ್ವಾಳ ತಾಲೂಕಿನ 18 ಶಾಲೆಗಳ ಸುಮಾರು 200ರಷ್ಟು ವಿದ್ಯಾರ್ಥಿಗಳು  ಭಾಗವಹಿಸಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next