Advertisement
ಅಗತ್ಯ ಬಿದ್ದಲ್ಲಿ ವೈದ್ಯರು ನೀಡುವ ಪ್ರಿಸ್ಕ್ರಿಪ್ಶನ್ ಅನುಸಾರವಾಗಿಯೇ ಆ್ಯಂಟಿ ಬಯಾಟಿಕ್‌ಗಳನ್ನು ನೀಡಬೇಕು ಎಂದು ಡಿಜಿಎಚ್‌ಎಸ್ ಸ್ಪಷ್ಟಪಡಿಸಿದೆ. ಇದರ ಜತೆಗೆ ವೈದ್ಯರು ಆ್ಯಂಟಿ ಬಯಾಟಿಕ್‌ಗಳನ್ನು ನೀಡುವ ಸಂದರ್ಭದಲ್ಲಿ ಯಾವ ಕಾರಣಕ್ಕಾಗಿ ಅವುಗಳನ್ನು ನೀಡಲಾಗುತ್ತದೆ ಎಂಬುದನ್ನು ಪ್ರಿಸ್ಕ್ರಿಪ್ಶನ್ (ವೈದ್ಯರ ಚೀಟಿ)ನಲ್ಲಿ ನಮೂದಿಸಬೇಕು. ಜತೆಗೆ ಔಷಧ ಮಾರಾಟ ಮಾಡುವ ಮಳಿಗೆಗಳು ಕೂಡ ವೈದ್ಯರು ನೀಡುವ ಚೀಟಿಯ ಹೊರತಾಗಿ ಅಂಥ ಔಷಧಗಳನ್ನು ನೇರವಾಗಿ ಮಾರಾಟ ಮಾಡಲೇಬಾರದು ಎಂದು ದೇಶದ ಎಲ್ಲಾ ವೈದ್ಯಕೀಯ ಕಾಲೇಜುಗಳಿಗೆ, ವೈದ್ಯರ ಸಂಘಟನೆಗಳು, ಔಷಧ ಮಾರಾಟ ಮಾಡುವ ಮಳಿಗೆಗಳ ಒಕ್ಕೂಟಗಳಿಗೆ ಬರೆದಿರುವ ಪತ್ರದಲ್ಲಿ ಆರೋಗ್ಯ ಸೇವೆಗಳ ಮಹಾ ನಿರ್ದೇಶನಾಲಯ ಗುರುವಾರ ತಿಳಿಸಿದೆ.
ಹೆಚ್ಚಿನ ಪ್ರಮಾಣದಲ್ಲಿ ಆ್ಯಂಟಿಬಯಾಟಿಕ್‌ಗಳನ್ನು ಬಳಕೆ ಮಾಡುವುದರಿಂದ ನಿಗದಿತ ರೋಗಗಳು ಔಷಧಗಳ ವಿರುದ್ಧವೇ ಪ್ರತಿರೋಧವನ್ನು ಬೆಳೆಸಿಕೊಳ್ಳುತ್ತವೆ. ಇತ್ತೀಚಿನ ವರ್ಷಗಳಲ್ಲಿ ಜಗತ್ತಿನ ಹಲವು ರಾಷ್ಟ್ರಗಳಲ್ಲಿ ಇದೊಂದು ಆರೋಗ್ಯ ಸಮಸ್ಯೆಯಾಗಿ ಬಾಧಿಸುತ್ತಿದೆ. ಹೀಗಾಗಿ, ಆ್ಯಂಟಿ ಬಯಾಟಿಕ್‌ಗಳನ್ನು ನೀಡುವುದರ ಮೇಲೆ ನಿಯಂತಣ ಹೇರಬೇಕು ಎಂದು ವಿಶ್ವ ಆರೋಗ್ಯ ಸಂಸ್ಥೆ ಸದಸ್ಯ ರಾಷ್ಟ್ರಗಳಿಗೆ ಸೂಚನೆ ನೀಡಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಈ ಕ್ರಮ ಕೈಗೊಂಡಿದೆ. ಆ್ಯಂಟಿ ಬಯಾಟಿಕ್‌ಗಳ ದುಷ್ಪರಿಣಾಮ
– 2019ರಲ್ಲಿ 4.95 ಮಿಲಿಯ ಮಂದಿ ಔಷಧ ಪರಿಣಾಮಕಾರಿಯಾಗದೆ ಸಾವು
– ವೈರಸ್, ಬ್ಯಾಕ್ಟೀರಿಯಾಗಳು ಔಷಧಗಳ ವಿರುದ್ಧ ಪ್ರತಿಕಾಯ ಬೆಳೆಸಿಕೊಳ್ಳುವುದರಿಂದ ಅಪಾಯ
Related Articles
Advertisement