Advertisement
ಬಂಟ್ವಾಳ ತಾಲೂಕು ಮಂಚಿ ಗ್ರಾಮದ ವಿಜೇತ್ ಕುಮಾರ್ (31), ಅಭಿ ಯಾನೆ ಅಭಿಜಿತ್ (33) ಮಂಗಳೂರು ತಾಲೂಕು ಬಡಗ ಉಳಿಪ್ಪಾಡಿ ಗ್ರಾಮದ ಮಳಲಿ ಮಟ್ಟಿಮನೆ ಕಿರಣ್ ಪೂಜಾರಿ (33), ತಿರುವೈಲು ಗ್ರಾಮದ ಅನೀಶ್ ಯಾನೆ ಧನು (32) ಶಿಕ್ಷೆಗೊಳಗಾದವರು.
Related Articles
Advertisement
ಸರಕಾರದ ಪರ ಶೇಖರ ಶೆಟ್ಟಿ ಸಾಕ್ಷಿ ವಿಚಾರಣೆ ಮಾಡಿದ್ದು, ಜುಡಿತ್ ಓಲ್ಗಾ ಮಾರ್ಗರೇಟ್ ಕ್ರಾಸ್ತ ಅವರು ವಾದ ಮಂಡಿಸಿದ್ದರು.
ಪ್ರಕರಣದ ವಿವರ
2015ರ ಆಗಸ್ಟ್ 6ರಂದು ಮೊಹಮ್ಮದ್ ಮುಸ್ತಫಾ ಅವರು ಮಾವನ ಪತ್ನಿಯನ್ನು ಆಟೋ ರಿಕ್ಷಾದಲ್ಲಿ ಬಿಟ್ಟು ಹಿಂದೆ ಬರುತ್ತಿರುವಾಗ ಮೆಲ್ಕಾರ್ ಬಳಿ ನಾಸೀರ್ ಯಾನೆ ಮಹಮ್ಮದ್ ನಾಸೀರ್ ಅವರು ಪತ್ನಿ ಮನೆಗೆ ಹೋಗುವ ಉದ್ದೇಶದಿಂದ ಆಟೋ ಹತ್ತಿದ್ದರು. ಮೆಲ್ಕಾರ್ ಕಡೆಯಿಂದ ಮುಡಿಪು ಕಡೆಗೆ ಆಟೋ ಹೋಗುತ್ತಿದ್ದಾಗ ಶಿಕ್ಷೆಗೊಳಗಾದ ನಾಲ್ವರು ಆಟೋದಲ್ಲಿರುವವರು ಮುಸ್ಲಿಂ ಸಮುದಾಯದವರು ಎಂಬುದನ್ನು ಖಚಿತಪಡಿಸಿಕೊಳ್ಳಲು ಬೊಳ್ಳಾಯಿಗೆ ಹೋಗುವ ರಸ್ತೆ ಕುರಿತು ವಿಚಾರಿಸಿದ್ದಾರೆ.
ಆಟೋ ಚಾಲಕ ರಸ್ತೆಯನ್ನು ತೋರಿಸಿ, ಮುಂದಕ್ಕೆ ಚಲಾಯಿಸಿದ್ದಾರೆ. ಮತ್ತೆ ಬೈಕ್‌ನಲ್ಲಿ ಹಿಂಬಾಲಿಸಿದ ಅವರು ರಾತ್ರಿ 10.45ಕ್ಕೆ ಬಂಟ್ವಾಳ ತಾಲೂಕು ಸಜಿಪ ಮೂಡ ಗ್ರಾಮದ ಕೊಳಕೆ ಕಂದೂರು ಎಂಬಲ್ಲಿಗೆ ತಲುಪುತ್ತಿದ್ದಂತೆ ಓವರ್‌ಟೇಕ್ ಮಾಡಿ ರಿಕ್ಷಾವನ್ನು ತಡೆದು ನಿಲ್ಲಿಸಿ ತಲವಾರಿನಿಂದ ಕಡಿದು ಕೊಲೆಗೆ ಯತ್ನಿಸಿದ್ದರು. ತೀವ್ರ ಗಾಯಗೊಂಡ ಇಬ್ಬರನ್ನೂ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ನಾಸೀರ್ ಅಹಮ್ಮದ್ ಅವರು ಆ. 7ರಂದು ಮೃತಪಟ್ಟಿದ್ದರು.
ಹಲ್ಲೆಗೆ ಪ್ರತೀಕಾರ
ವಿಜೇತ್ ಕುಮಾರ್ ಮತ್ತು ಅಭಿ ಯಾನೆ ಅಭಿಜಿತ್ ಮೇಲೆ ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯ ಕೊಳ್ನಾಡ್ ಗ್ರಾಮದ ಆಲಬೆ ಎಂಬಲ್ಲಿ ಆ. 5ರಂದು ರಾತ್ರಿ 10.45ರ ವೇಳೆಗೆ ಮುಸ್ಲಿಂ ಸಮುದಾಯದ ನಾಲ್ಕೈದು ಮಂದಿ ಹಲ್ಲೆ ನಡೆಸಿದ್ದರು. ಇದರಿಂದ ಮನಸ್ತಾಪಗೊಂಡ ಅವರು ಮರುದಿನವೇ ಮುಸ್ಲಿಂ ಸಮುದಾಯದ ಯುವಕರನ್ನು ಕೊಲೆ ಮಾಡಬೇಕು ಎನ್ನುವ ಸಂಚು ರೂಪಿಸಿದ್ದರು. ಅದರಂತೆ ಗೆಳೆಯರಾದ ಕಿರಣ್ ಮತ್ತು ಅನೀಶ್ ಅವರನ್ನು ಆ. 6ರ ರಾತ್ರಿ ಪಾಣೆಮಂಗಳೂರಿನ ನರಹರಿಬೆಟ್ಟಕ್ಕೆ ಹೋಗುವ ರಸ್ತೆಯ ಬಳಿ ಕರೆಸಿಯಿಕೊಂಡಿದ್ದರು.