Advertisement

ದೌರ್ಜನ್ಯ ಪ್ರಕರಣ: 1.54 ಕೋಟಿ ರೂ. ಪರಿಹಾರ

12:38 PM Mar 22, 2022 | Team Udayavani |

ಬಾಗಲಕೋಟೆ: ಸಮಾಜ ಕಲ್ಯಾಣ ಇಲಾಖೆಯಿಂದ ಪ್ರಸಕ್ತ ಸಾಲಿನಲ್ಲಿ ಫೆಬ್ರವರಿ ಅಂತ್ಯದವರೆಗೆ ದೌರ್ಜನ್ಯ ಪ್ರಕರಣದಡಿ ನೋಂದವರಿಗೆ ಒಟ್ಟು 1.54 ಕೋಟಿ ರೂ.ಗಳ ಪರಿಹಾರಧನ ನೀಡಿರುವುದಾಗಿ ಜಿಲ್ಲಾಧಿಕಾರಿ ಕ್ಯಾಪ್ಟನ್‌ ಡಾ|ಕೆ. ರಾಜೇಂದ್ರ ತಿಳಿಸಿದರು.

Advertisement

ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಸೋಮವಾರ ಜಿಲ್ಲಾ ಮಟ್ಟದ ಜಾಗೃತಿ ನಿಯಂತ್ರಣ ಹಾಗೂ ಉಸ್ತುವಾರಿ ಸಮಿತಿ ಸಭೆಯಲ್ಲಿ ಮಾತನಾಡಿದರು.

ಪ್ರಸಕ್ತ ಸಾಲಿನ ಏಪ್ರಿಲ್‌ 1, 2021ರಿಂದ ಈವರೆಗೆ 64 ದೌರ್ಜನ್ಯ ಪ್ರಕರಣಗಳ ಪೈಕಿ 53 ಪ್ರಕರಣಗಳಿಗೆ ಟಿಎ, ಡಿಎ ಸೇರಿ ಒಟ್ಟು 1.54 ಕೋಟಿ ರೂ.ಗಳ ಪರಿಹಾರಧನ ವಿತರಿಸಲಾಗಿದೆ. ಪರಿಹಾರಧನಕ್ಕಾಗಿ ಬಾಕಿ ಉಳಿದ ಪ್ರಕರಣಗಳಲ್ಲಿ 6 ಸಾರ್ವಜನಿಕ ಹಿತಾಸಕ್ತಿಗೆ ಸಂಬಂಧಿಸಿದ್ದರೆ, ಉಳಿದ 5 ಪ್ರಕರಣಗಳು ಇತರೆ ಪ್ರಕರಣಗಳಾಗಿವೆ ಎಂದು ತಿಳಿಸಿದರು.

ಪುನರ್ವಸತಿ ಕೇಂದ್ರದವರು ಹಸ್ತಾಂತರಿಸಿದ ಆಸ್ತಿ ರಜಿಸ್ಟರ್‌ಗಳಂತೆ ನಗರಸಭೆಯ ಸ್ವತ್ತು ತೆರಿಗೆ ರಜಿಸ್ಟರನಲ್ಲಿ ಕೆಲವು ಆಸ್ತಿಗಳ ಮೂಲಕ ಮಾಲೀಕರ ಅಡ್ಡ ಹೆಸರು ತಪ್ಪಾಗಿ ನಮೂದಾಗಿದ್ದು, ತಿದ್ದುಪಡಿ ಮಾಡಿ ಉತಾರ ನೀಡಲು ಸಮಿತಿ ಸದಸ್ಯರು ಸಭೆಗೆ ತಿಳಿಸಿದಾಗ ಅಂತಹ ಪ್ರಕರಣಗಳಲ್ಲಿದ್ದಲ್ಲಿ ಪುನರ್ವಸತಿ ಕಚೇರಿ, ನ್ಯಾಯಾಲಯದಿಂದ ಅಡ್ಡ ಹೆಸರು ಸರಿಪಡಿಸಿಕೊಂಡು ಬಂದಲ್ಲಿ ತಿದ್ದುಪಡಿ ಮಾಡಿ ನೀಡುವಂತೆ ಸಂಬಂಧಿಸಿದ ಎಲ್ಲ ಸ್ಥಳೀಯ ಸಂಸ್ಥೆಗಳಿಗೆ ನಿರ್ದೇಶನ ನೀಡುವುದಾಗಿ ಹೇಳಿದರು.

ಜಿಲ್ಲೆಯಲ್ಲಿ ದೌರ್ಜನ್ಯ ಪ್ರಕರಣಗಳನ್ನು ತಡೆಯುವ ನಿಟ್ಟಿನಲ್ಲಿ ಸಮಾಜ ಕಲ್ಯಾಣ ಇಲಾಖೆಯಿಂದ ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಜಾಗೃತಿ ಸಮಿತಿಯ ಎಲ್ಲ ಸದಸ್ಯರು ಪಾಲ್ಗೊಳ್ಳುವಂತೆ ಮಾಡಬೇಕು. ಹೆಚ್ಚು ದೌರ್ಜನ್ಯ ಪ್ರಕರಣಗಳು ಜರುಗಿದ ಗ್ರಾಮಗಳಲ್ಲಿ ಅರಿವು ಕಾರ್ಯಕ್ರಮಗಳನ್ನು ಹಾಕಿಕೊಳ್ಳುವಂತೆ ಜಿಲ್ಲಾಧಿಕಾರಿಗಳು ತಿಳಿಸಿದರಲ್ಲದೇ ವಿವಿಧ ನಿಗಮದಡಿ ವಿವಿಧ ಯೋಜನೆಗಳಿಗೆ ಬಿಡುಗಡೆಯಾದ ಅನುದಾನ ಮಾರ್ಚ್‌ ಅಂತ್ಯಕ್ಕೆ ಎಲ್ಲ ಹಣ ವಿನಿಯೋಗವಾಗಿರಬೇಕು. ಯಾವುದೇ ಹಣ ಲ್ಯಾಪ್ಸ್‌ ಆಗದಂತೆ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿರು.

Advertisement

ಗಂಗಾ ಕಲ್ಯಾಣ ಯೋಜನೆಯಡಿ ಬಾಕಿ ಉಳಿದಿರುವ ವಿದ್ಯುದ್ದೀಕರಣ ಪೂರ್ಣಗೊಳಿಸಲು ಹೆಸ್ಕಾಂದವರಿಗೆ ಸೂಚಿಸಿದರು. ದೇವದಾಸಿ ಮಕ್ಕಳ ವಿವಾಹ ಪ್ರೋತ್ಸಾಹಧನ ಯೋಜನೆಯಡಿ ಈಗಾಗಲೇ 236 ಪೈಕಿ 75 ಫಲಾನುಭವಿಗಳಿಗೆ ಪ್ರೋತ್ಸಾಹಧನ ಮಂಜೂರಿಸಿದ್ದು, ಬಾಕಿ ಉಳಿದ ಅರ್ಜಿಗಳಿಗೆ ಅನುದಾನ ಬಿಡುಗಡೆಗೆ ಸಮಾಜ ಕಲ್ಯಾಣ ಇಲಾಖೆ ಆಯುಕ್ತರಿಗೆ ಪತ್ರ ಬರೆಯಲಾಗಿದೆ. 2019-20ನೇ ಸಾಲಿಗೆ ಸಾಂಸ್ಥಿಕ ಕೋಟಾದಡಿ ವಸತಿ ಯೋಜನೆಯಡಿ 86 ಅರ್ಜಿ, 2020-21ನೇ ಸಾಲಿನ 20 ಅರ್ಜಿಗಳನ್ನು ವಸತಿ ಯೋಜನೆಯಡಿ ಆಯ್ಕೆ ಮಾಡಿ ಮಂಜೂರಾತಿಗಾಗಿ ಜಗಜೀವನರಾಂ ಚರ್ಮ ಕೈಗಾರಿಕೆ ಅಭಿವೃದ್ಧಿ ನಿಗಮಕ್ಕೆ ಕಳುಹಿಸಲಾಗಿದೆ ಎಂದು ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಮಹೇಶ ಪೋತದಾರ ಸಭೆಗೆ ತಿಳಿಸಿದರು.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಲೋಕೇಶ ಜಗಲಾಸರ, ಜಿಪಂ ಸಿಇಒ ಟಿ. ಭೂಬಾಲನ್‌, ಉಪ ವಿಭಾಗಾ ಧಿಕಾರಿ ಶ್ವೇತಾ ಬೀಡಿಕಾರ, ಜಿಲ್ಲಾ ಶಿಕ್ಷಣಾಕಾರಿ ಎ.ಕೆ. ಬಸಣ್ಣವರ, ನಾಮ ನಿರ್ದೇಶಿತ ಸದಸ್ಯರಾದ ಬಸವಂತ ಮೇತ್ರಿ, ಶಶಿಧರ ಮೀಸಿ, ಸತ್ಯಪ್ಪ ಮಾದರ, ಶಿವು ಮಣ್ಣೂರು, ಮಾರುತಿ ರಂಗಣ್ಣವರ, ತಿಮ್ಮಣ್ಣ ಬಂಡಿವಡ್ಡರ, ಪರಶುರಾಮ ಬಸವ್ವಗೋಳ ಉಪಸ್ಥಿತರಿದ್ದರು.

ಎಸ್‌ಸಿಪಿ, ಟಿಎಸ್‌ಪಿ ಪ್ರಗತಿ: ಪ್ರಸಕ್ತ ಸಾಲಿನಲ್ಲಿ ಫೆಬ್ರವರಿ ಅಂತ್ಯಕ್ಕೆ ವಿಶೇಷ ಘಟಕ ಯೋಜನೆಯಡಿ ವಿವಿಧ ಇಲಾಖೆಗಳಿಗೆ ನಿಗದಿಪಡಿಸಿದ ಒಟ್ಟು 96.62 ಕೋಟಿ ರೂ. ಗಳ ಗುರಿಗೆ 82.13 ಕೋಟಿ ರೂ.ಗಳಷ್ಟು ಬಿಡುಗಡೆಯಾಗಿದ್ದು, ಈ ಪೈಕಿ 57.66 ಕೋಟಿ ರೂ. ಖರ್ಚು ಮಾಡಲಾಗಿ ಶೇ.59.68 ಪ್ರಗತಿ ಸಾಧಿಸಿದರೆ, ಗಿರಿಜನ ಉಪಯೋಜನೆಯಡಿ ನಿಗದಿಪಡಿಸಿದ ಒಟ್ಟು 40.35 ಕೋಟಿ ರೂ.ಗಳ ಗುರಿಗೆ 32.22 ಕೋಟಿ ರೂ. ಬಿಡುಗಡೆಯಾಗಿದ್ದು, ಈ ಪೈಕಿ 24.02 ಕೋಟಿ ರೂ. ಖರ್ಚು ಮಾಡಲಾಗಿ ಶೇ.59.52 ರಷ್ಟು ಪ್ರಗತಿ ಸಾಧಿ ಸಲಾಗಿದೆ. ಮಾರ್ಚ್‌ ಅಂತ್ಯಕ್ಕೆ ಸಂಪೂರ್ಣ ಅನುದಾನ ಬಳಕೆಯಾಗಬೇಕು.

-ಡಾ|ಕೆ. ರಾಜೇಂದ್ರ, ಜಿಲ್ಲಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next