ಬೆಂಗಳೂರು: ಪರಿಚಯಸ್ಥನಿಂದಲೇ ಮಹಿಳೆ ಮೇಲೆ ಅತ್ಯಾಚಾರ ಎಸಗಿರುವ ಘಟನೆ ನಡೆದಿದ್ದು, ಈ ಸಂಬಂಧ 32 ವರ್ಷದ ಸಂತ್ರಸ್ತೆ ಕಬ್ಬನ್ ಪಾರ್ಕ್ ಠಾಣೆಯಲ್ಲಿ ಅತ್ಯಾಚಾರ ಪ್ರಕರಣ ದಾಖಲಿಸಿದ್ದಾರೆ.
ಆರೋಪಿ ತಮಿಳುನಾಡು ಮೂಲದ ರಮೇಶ್ (53) ತಲೆ ಮರೆಸಿಕೊಂಡಿದ್ದಾನೆ.
ಬೆಂಗಳೂರು ಮೂಲದ ಸಂತ್ರಸ್ತೆ ಚಿಕ್ಕವಯಸ್ಸಿನಲ್ಲಿ ತಮಿಳುನಾಡಿನಲ್ಲಿ ಪೋಷಕರ ಜತೆ ವಾಸವಾಗಿದ್ದಾಗ ಆರೋಪಿ ರಮೇಶ್ ಪರಿಚಯವಾಗಿದ್ದ. ಮಹಿಳೆಗೆ ತಂದೆ ಸಮಾನನಾಗಿದ್ದ ಆರೋಪಿಯು ತಮಿಳುನಾಡಿನಲ್ಲಿ ನೆಲೆಸಿದ್ದ. ಸಂತ್ರಸ್ತೆ ಕೆಲಸ ಮಾಡುತ್ತಿದ್ದ ಖಾಸಗಿ ಕಂಪನಿ ನೂತನವಾಗಿ ಓಟಿಟಿ ಆರಂಭಿಸಿತ್ತು. ಇದಕ್ಕಾಗಿ ಮಹಿಳೆಯ ಕೋರಿಕೆ ಮೇರೆಗೆ 3 ಕೋಟಿ ರೂ. ಹೂಡಿಕೆ ಮಾಡುವುದಾಗಿ ರಮೇಶ್ ಒಪ್ಪಿಕೊಂಡಿದ್ದ. ಬಳಿಕ ಆ.6 ರಂದು ಬೆಂಗಳೂರಿಗೆ ಬಂದು, ಖಾಸಗಿ ಹೋಟೆಲ್‌ನಲ್ಲಿ ಕೊಠಡಿ ಕಾಯ್ದಿರಿಸಿ ಮಹಿಳೆಯನ್ನು ವ್ಯವಹಾರ ಕುರಿತು ಮಾತನಾಡಲು ಹೋಟೆಲ್‌ಗೆ ಕರೆಸಿಕೊಂಡಿದ್ದಾನೆ. ಈ ವೇಳೆ ಆರೋಪಿ ತನ್ನ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಮಹಿಳೆ ದೂರು ನೀಡಿದ್ದಾರೆ.
ಇದನ್ನೂ ಓದಿ: ಕಾಲೇಜಿನಲ್ಲಿ ನೃತ್ಯ ಮಾಡುವ ವಿಷಯಕ್ಕೆ ಜಗಳ : ಚಾಕು ಇರಿದು ವಿದ್ಯಾರ್ಥಿ ಕೊಲೆ
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಕೇಂದ್ರ ವಿಭಾಗದ ಡಿಸಿಪಿ ಶ್ರೀನಿವಾಸ್ ಗೌಡ ‘ಪರಿಚಯಸ್ಥರಾಗಿದ್ದ ವ್ಯಕ್ತಿಯೊಬ್ಬರು ವ್ಯವಹಾರ ಸಂಬಂಧ ಹೋಟೆಲ್‌ಗೆ ಕರೆಯಿಸಿಕೊಂಡು ತನ್ನ ಮೇಲೆ ಆತ್ಯಾಚಾರ ಎಸಗಿದ್ದಾನೆ. ಕೃತ್ಯ ಬಹಿರಂಗ ಪಡಿಸಿದರೆ ಕೊಲೆಗೈಯುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ಸಂತ್ರಸ್ತೆ ದೂರು ನೀಡಿದ್ದು, ಆರೋಪಿ ಪತ್ತೆ ಕಾರ್ಯ ನಡೆಯುತ್ತಿದೆ ಎಂದು ಹೇಳಿದರು.