Advertisement

ಹೃದಯ ಸಂಬಂಧಿ ಸಮಸ್ಯೆ ಜಾಗೃತಿ ಜಾಥಾ

01:31 PM Oct 16, 2017 | Team Udayavani |

ಮೈಸೂರು: ವಿಶ್ವ ಆರೋಗ್ಯ ದಿನದ ಅಂಗವಾಗಿ ಸಾರ್ವಜನಿಕರಲ್ಲಿ ಹೃದಯ ಸಂಬಂಧಿ ಸಮಸ್ಯೆಗಳ ಬಗ್ಗೆ ಅರಿವು ಮೂಡಿಸುವ ಸಲುವಾಗಿ ನೂರಾರು ನರ್ಸಿಂಗ್‌ ವಿದ್ಯಾರ್ಥಿಗಳು ಭಾನುವಾರ ಜಾಗೃತಿ ಜಾಥಾ ನಡೆಸಿದರು.

Advertisement

ನಗರದ ನಾರಾಯಣ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಿಂದ ನಗರದ ಕೋಟೆ ಆಂಜನೇಯಸ್ವಾಮಿ ದೇವಾಲಯದ ಆವರಣದಲ್ಲಿ ಏರ್ಪಡಿಸಿದ್ದ ಬೃಹತ್‌ ವಾಕಥಾನ್‌ಗೆ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಬಸವರಾಜ್‌ ಚಾಲನೆ ನೀಡಿ, ದೇಶದಲ್ಲಿ ಹೃದಯಾಘಾತದಿಂದ ಪ್ರತಿ 33 ಸೆಕೆಂಡ್‌ಗೆ ಒಬ್ಬರು ಮೃತಪಡುತ್ತಿದ್ದಾರೆಂದರು.

ಈ ವೇಳೆ ನರ್ಸಿಂಗ್‌ ವಿದ್ಯಾರ್ಥಿಗಳು ಧೂಮಪಾನ ಹೃದಯಕ್ಕೆ ಹಾನಿಕಾರಕ ನಾಮಫ‌ಲಕಗಳನ್ನು ಹಿಡಿದು ಆರೋಗ್ಯದ ಕುರಿತು ಜಾಗೃತಿ ಮೂಡಿಸಿದರು. ಅರಮನೆ ಕೋಟೆ ಆಂಜನೇಯಸ್ವಾಮಿ ದೇವಾಲಯದಿಂದ ಹೊರಟ ವಾಕಥಾನ್‌ ದೊಡ್ಡ ಗಡಿಯಾರ, ಗಾಂಧಿಚೌಕ, ಪ್ರಭಾ ಟಾಕೀಸ್‌, ಸಯ್ನಾಜಿರಾವ್‌ ರಸ್ತೆ, ನೆಹರು ವೃತ್ತ ಮಾರ್ಗವಾಗಿ ಕೋಟೆ ಆಂಜನೇಯಸ್ವಾಮಿ ದೇವಾಲಯದ ಆವರಣದಲ್ಲಿ ಅಂತ್ಯಗೊಂಡಿತು.

ವಾಕಥಾನ್‌ನಲ್ಲಿ ಟೆರಿಷಿಯನ್‌, ವಿದ್ಯಾವಿಕಾಸ್‌, ಸಿಪಿಸಿ ಪಾಲಿಟೆಕ್ನಿಕ್‌, ಜೆಎಸ್‌ಎಸ್‌, ಮಹಾರಾಣಿ ಮಹಿಳಾ ಕಾಲೇಜು ಸೇರಿದಂತೆ 10ಕ್ಕೂ ಹೆಚ್ಚು ಕಾಲೇಜಿನ ವಿದ್ಯಾರ್ಥಿಗಳು ವಾಕಥಾನ್‌ನಲ್ಲಿ ಹೆಜ್ಜೆ ಹಾಕಿದರು. ಈ ವೇಳೆ ನಾರಾಯಣ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ವೈದ್ಯರಾದ ಡಾ.ಕೇಶವಮೂರ್ತಿ, ಡಾ.ಎಂ.ಎನ್‌.ರವಿ, ಡಾ.ರಾಜೇಂದ್ರ, ನವೀನ್‌ ಕವಿರತ್ನ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next