ಸೌಂದರರಾಜನ್ ಅವರು ಎಂಜಿನಿಯರ್. ಬಹುರಾಷ್ಟ್ರೀಯ ಕಂಪನಿಗಳಲ್ಲಿ ಕೆಲಸ ಮಾಡುವ ಅವಕಾಶಗಳನ್ನೆಲ್ಲ ಚೆಲ್ಲಿ ಅವರು ತಮ್ಮದೇ ಸ್ವಂತ ಸಂಸ್ಥೆಯನ್ನು ಪ್ರಾರಂಭಿಸಿದರು. “ಬ್ಲೂ ಆರ್ಮರ್’ ಎನ್ನುವ ಹೆಸರಿನ ಈ ಸಂಸ್ಥೆ ಇಂದು ಎ.ಸಿ ಹೆಲ್ಮೆಟ್‌ಅನ್ನು ಅಭಿವೃದ್ಧಿಪಡಿಸಿ ಮಾರಾಟ ಮಾಡುತ್ತಿದೆ. ಅಚ್ಚರಿಯಾಗುತ್ತಿದೆಯೇ? ಆಗಲೇಬೇಕು. ಮನೆಗಳಲ್ಲಿ, ಆಫೀಸ್‌ಗಳಲ್ಲಿ, ಬಸ್ಸು, ರೈಲು, ಕಾರುಗಳಲ್ಲಿ ಎ.ಸಿ. ಇರುವುದನ್ನು ನೋಡಿಯೇ ಇರುತ್ತೀರಿ. ದ್ವಿಚಕ್ರವಾಹನ ಸವಾರರಿಗೂ ಎ.ಸಿ ಸೌಲಭ್ಯವನ್ನು ಒದಗಿಸುವ ಉತ್ಪನ್ನವನ್ನು ಜನರಿಗೆ ಲಭ್ಯವಾಗಿಸುತ್ತಿರುವ ಶ್ರೇಯ ಸೌಂದರರಾಜನ್ ಮತ್ತವರ ತಂಡಕ್ಕೆ ಸಲ್ಲುತ್ತದೆ.
ಹೆಲ್ಮೆಟ್ ತೊಟ್ಟವರಿಗೆ ಗೊತ್ತು ಅದರೊಳಗಿನ ಪಾಡು. ಇನ್ನು ಬೇಸಗೆಯಲ್ಲಂತೂ ಹೆಲ್ಮೆಟ್ ತೆಗೆದಾಗ ಬೆವರು ತೊಟ್ಟಿಕ್ಕುತ್ತಿರುತ್ತದೆ. ಇವೆಲ್ಲಕ್ಕೂ ಪರಿಹಾರ ಒದಗಿಸುವ ಸಲುವಾಗಿಯೇ ಈ ಉತ್ಪನ್ನವನ್ನು ಸಂಶೋಧಿಸಿದ್ದು ಎನ್ನುತ್ತಾರೆ ಸೌಂದರರಾಜನ್. ಯಾವುದೇ ಸಂಸ್ಥೆಯ ಹೆಲ್ಮೆಟ್‌ಗೆ ಈ ಎ.ಸಿ.ಯನ್ನು ಅಳವಡಿಸಬಹುದು. ಆದರೆ ಅದು ಫುಲ್ ಹೆಲ್ಮೆಟ್ ಆಗಿರಬೇಕು.ಈ ಉತ್ಪನ್ನದಲ್ಲಿ ಒಂದೇ ಬಟನ್ ಇದ್ದು, ಒಮ್ಮೆ ಚಾಲೂ ಮಾಡಿದರೆ ಸಾಕು; ಹೆಲ್ಮೆಟ್ ಒಳಗೆ ತಂಪಾದ ಗಾಳಿ ಪ್ರವಹಿಸುತ್ತಿರುತ್ತದೆ. 4- 5 ಗಂಟೆಗಳ ಕಾಲ ಚಾರ್ಜ್ ಮಾಡಿದರೆ ರೆಗ್ಯುಲರ್ ಮೋಡ್‌ನಲ್ಲಿ 15 ಗಂಟೆಗಳ ಕಾಲ ಚಾಲೂ ಇರುತ್ತದೆ. ಮೀಡಿಯಂ ಮೋಡ್‌ನಲ್ಲಿ 7- 8 ಗಂಟೆ ಮತ್ತು ಮ್ಯಾಕ್ಸಿಮಮ್ ಮೋಡ್‌ನಲ್ಲಿ 3 ಗಂಟೆಗಳ ಕಾಲ ಪವರ್ ಇರುತ್ತದೆ. ಇದರ ಸುಲಲಿತ ಕಾರ್ಯಾಚರಣೆಗೆ ಒಳಗಡೆ ಇರುವ ಕ್ಯಾಟ್ರಿಡ್ಜ್ಗೆ 70 ಎಂ.ಎಲ್. ನೀರನ್ನು ತುಂಬಿಸಬೇಕು. ಅದು ಒಂದೂವರೆ ಗಂಟೆಗಳ ಕಾಲ ಬರುತ್ತದೆ.
ಹೆಲ್ಮೆಟ್ ಒಳಗಿನ ವಾತಾವರಣವನ್ನು ತಂಪಾಗಿಸುವುದಷ್ಟೇ ಅಲ್ಲದೆ ಉಸಿರಾಡಲು ಸ್ವತ್ಛ ಗಾಳಿಯನ್ನು ಒದಗಿಸುವುದು ಇದರ ಹೆಗ್ಗಳಿಕೆ.
ಸದ್ಯ, ಗ್ರಾಹಕರು ಮಾರುಕಟ್ಟೆಯಲ್ಲಿ ಈ ಹಿಂದಿನ ಆವೃತ್ತಿಯಾದ “ಬ್ಲೂಸ್ನ್ಯಾಪ್ 2′ ಉತ್ಪನ್ನವನ್ನು 2,300 ರೂ.ಗಳಿಗೆ ಖರೀದಿಸಬಹುದು. ಅಥವಾ 2,750 ರೂ.ಗೆ ಹೊಸ ಆವೃತ್ತಿ “ಬ್ಲೂ3’ಯನ್ನು ಕಾಯ್ದಿರಿಸಬಹುದಾಗಿದೆ. ಹೊಸತರಲ್ಲಿ ವಾಯ್ಸ ಕಂಟ್ರೋಲ್, ಬ್ಲೂಟೂತ್ ಸ್ಪೀಕರ್, ಸ್ಮಾರ್ಟ್‌ಫೋನ್‌ನಿಂದ ನಿಯಂತ್ರಣ… ಇಂಥ ಅನೇಕ ಸವಲತ್ತುಗಳನ್ನು ನೀಡಲಾಗಿದೆ.
ಹೆಚ್ಚಿನ ಮಾಹಿತಿಗೆ: thebluarmor.com