Advertisement

ಒಂದು ಬಿಝಿನೆಸ್‌ ಐಡಿಯಾ : ಹಪ್ಪಳ

03:08 PM May 04, 2020 | Suhan S |

ಭಾರತೀಯರ ಮನೆಗಳಲ್ಲಿನ ಊಟ, ಹಪ್ಪಳ ಇಲ್ಲದೇ ಪೂರ್ತಿಯಾಗದು. ಯಾವುದೇ ಶುಭ ಸಮಾರಂಭ ಇರಬಹುದು, ಕಾರ್ಯಕ್ರಮಗಳಿರಬಹುದು; ಊಟಕ್ಕೆ ಹಪ್ಪಳ ಇರಲೇಬೇಕು. ಹೀಗಾಗಿ, ಹಪ್ಪಳ ತಯಾರಿಕೆಯನ್ನೇ ಲಾಭದಾಯಕ ಉದ್ಯಮವನ್ನಾಗಿ ರೂಪಿಸಬಹುದು. ದೊಡ್ಡ ಮಟ್ಟದಲ್ಲಿ ಹಪ್ಪಳ ತಯಾರಿಸುವಾಗ, ಅನೇಕ ಸವಾಲುಗಳು ಎದುರಾಗುತ್ತವೆ. ಸ್ಪರ್ಧಾತ್ಮಕ ಮಾರುಕಟ್ಟೆ, ಆ ಸವಾಲುಗಳಲ್ಲೊಂದು. ಆದರೆ, ಸಣ್ಣ ಮಟ್ಟದಲ್ಲಿ ಶುರು ಮಾಡುವುದಾದರೆ, ಚಿಕ್ಕ ಪ್ರಮಾಣದ ಬಂಡವಾಳದಲ್ಲಿ ಶುರು ಮಾಡಬಹುದು. ಮೊದಲು ಒಂದು ಯುನಿಟ್‌ ಅನ್ನು ಸಿದ್ಧಪಡಿಸಿಕೊಳ್ಳಬೇಕು. ಮನೆಯಲ್ಲೇ ಮಾಡುವುದಾದರೆ ಆ ಬಗ್ಗೆ ಯೋಚಿಸುವ ಅಗತ್ಯವಿಲ್ಲ. ಉದ್ದಿಮೆ ಚಿಕ್ಕ ಪ್ರಮಾಣದ್ದೇ ಆದರೂ, ಯಂತ್ರೋಪಕರಣಗಳನ್ನು ತರಿಸಿಟ್ಟುಕೊಂಡರೆ ಕಡಿಮೆ ಸಮಯದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಉತ್ಪನ್ನ ತಯಾರಿಸಬಹುದು. ಮಾರುಕಟ್ಟೆಯಲ್ಲಿ ಸ್ವಯಂಚಾಲಿತ ಯಂತ್ರಗಳಲ್ಲದೆ ಕೈಯಿಂದಲೇ ಚಾಲೂ ಮಾಡುವ ಯಂತ್ರಗಳೂ ಸಿಗುತ್ತವೆ.

Advertisement

ಯಾವುದೇ ಉದ್ದಿಮೆಯ ಪ್ರಮುಖ ಅಂಶ ಮಾರುಕಟ್ಟೆಯ ಕುರಿತಾದ್ದು. ಸುತ್ತಮುತ್ತಲ ಪ್ರದೇಶಗಳಲ್ಲಿ ಹಪ್ಪಳಕ್ಕೆ ಡಿಮ್ಯಾಂಡ್‌ ಹೇಗಿದೆ ಎಂದು ತಿಳಿದುಕೊಳ್ಳುವುದರ ಮೂಲಕ ಮಾರ್ಕೆಟಿಂಗ್‌ ಪ್ಲ್ಯಾನ್‌ ರೂಪಿಸಬಹುದು. ಅದಕ್ಕೆ ತಕ್ಕಂತೆ ಉತ್ಪಾದನೆಯನ್ನು ಮಾಡಬಹುದು. ದಿನಸಿ ಅಂಗಡಿ ಮತ್ತು ಸುತ್ತಮುತ್ತಲ ಜನರನ್ನು ಪರಿಚಯ ಮಾಡಿಕೊಂಡರೆ, ಉದ್ಯಮವನ್ನುವಿಸ್ತರಿಸುತ್ತಾ ಹೋಗಬಹುದು. ನಂತರ ಕಾರ್ಯಕ್ರಮಗಳಿಗೆ ಆರ್ಡರ್‌ ಪಡೆದುಕೊಳ್ಳುವ ಮಟ್ಟಿಗೆ ಬೆಳೆಯಬಹುದು. ­

Advertisement

Udayavani is now on Telegram. Click here to join our channel and stay updated with the latest news.

Next