Advertisement

BJP ಅಭಿಯಾನದಲ್ಲಿ ಗಣ್ಯರ ದಂಡು

01:03 AM Apr 26, 2023 | Team Udayavani |

ಬೆಂಗಳೂರು: ಚುನಾವಣೆ ಪ್ರಚಾರ ಕಣಕ್ಕೆ ಮೆರುಗು ನೀಡುವ ಉದ್ದೇಶದಿಂದ ಬಿಜೆಪಿ ಹಮ್ಮಿಕೊಂಡಿದ್ದ ವಿಶೇಷ ಮಹಾ ಪ್ರಚಾರ ಅಭಿಯಾನದಲ್ಲಿ ಪಾಲ್ಗೊಳ್ಳಲು ಮಂಗಳವಾರ ಗಣ್ಯರ ದಂಡೇ ಹರಿದುಬಂದಿತ್ತು.

Advertisement

ಮಂಗಳವಾರ ರಾಜ್ಯದ ಎಲ್ಲ ಕೇತ್ರಗಳಲ್ಲಿ ನಡೆದ ಈ ಅಭಿಯಾನದಲ್ಲಿ ಬಿಜೆಪಿಯ ಕೇಂದ್ರದ ಘಟಾನುಘಟಿ ನಾಯಕರು ಪಾಲ್ಗೊಂಡರು. ಬುಧ ವಾರವೂ ಅಭಿಯಾನ ನಡೆಯಲಿದೆ.

ಮಂಗಳವಾರ ರಾಯಚೂರು ನಗರದಲ್ಲಿ ಕೇಂದ್ರ ಬುಡಕಟ್ಟು ಇಲಾಖೆ ಸಚಿವ ಅರ್ಜುನ್‌ ಮುಂಡಾ ರೋಡ್‌ ಶೋ ನಡೆಸಿ ಬಿಜೆಪಿ ಅಭ್ಯರ್ಥಿ ಶಿವರಾಜ್‌ ಪಾಟೀಲ್‌ ಪರ ಪ್ರಚಾರ ಮಾಡಿದರು. ಬಳ್ಳಾರಿೆಯಲ್ಲಿ ಜಿ. ಸೋಮಶೇಖರ ರೆಡ್ಡಿ ಪರ ಕೇಂದ್ರ ಸಚಿವ ಕೃಷ್ಣನ್‌ ಪಾಲ್‌ ಗುರ್ಜಾರ್‌, ಚಿಕ್ಕಮಗಳೂರಿನಲ್ಲಿ ಮಾಜಿ ಸಚಿವ ಕೆ.ಎಸ್‌. ಈಶ್ವರಪ್ಪ, ಸಿ.ಟಿ. ರವಿ ಪರ ರೋಡ್‌ ಶೋ ನಡೆಸಿದರು.

ಬೆಳಗಾವಿ ದಕ್ಷಿಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅಭಯ ಪಾಟೀಲ ಪರ ಉತ್ತರ ಪ್ರದೇಶದ ಡಿಸಿಎಂ ಕೇಶವ ಪ್ರಸಾದ ಮೌರ್ಯ ರೋಡ್‌ ಶೋ ನಡೆಸಿದರಲ್ಲದೆ, ಕೆಲವೆಡೆ ಪಾದಯಾತ್ರೆ ನಡೆಸಿದರು. ದಾವಣಗೆರೆ ದಕ್ಷಿಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ.ಜಿ. ಅಜಯ್‌ ಕುಮಾರ್‌ ಪರ ಕೇಂದ್ರ ಸಚಿವ ಸರ್ಬಾನಂದ ಸೋನಾವಾಲ್‌ ಮತಯಾಚಿಸಿದರು. ಜಗಳೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಸ್‌. ವಿ. ರಾಮಚಂದ್ರ ಪರ ಬಿ.ಎಸ್‌. ಯಡಿಯೂರಪ್ಪ ರೋಡ್‌ ಶೋ ನಡೆಸಿ ಪ್ರಚಾರ ನಡೆಸಿದರು.

Advertisement

ಬೀದರ್‌ ಜಿಲ್ಲೆ ಔರಾದ್‌ ತಾಲೂಕಿನ ಕಮಲನಗರದಲ್ಲಿ ಬಿಜೆಪಿ ಅಭ್ಯರ್ಥಿ ಪ್ರಭು ಚವ್ಹಾಣ ಪರ ಕೇಂದ್ರ ಸಚಿವ ನಾರಾಯಣ ರಾಣೆ ರೋಡ್‌ ಶೋ ನಡೆಸಿದರು. ಯಾದಗಿರಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಭರ್ಜರಿ ರೋಡ್‌ ಶೋ ನಡೆಸಿದರು. ಶಿವಮೊಗ್ಗ ಜಿಲ್ಲೆ ಶಿಕಾರಿಪುರದ ಈಸೂರು ಜಿ.ಪಂ. ವ್ಯಾಪ್ತಿಯ ಗ್ರಾಮಗಳಲ್ಲಿ ಬಿಜೆಪಿ ಅಭ್ಯರ್ಥಿ ಬಿ.ವೈ. ವಿಜಯೇಂದ್ರ ರೋಡ್‌ ಶೋ ಮೂಲಕ ಮತಯಾಚನೆ ಮಾಡಿದರು. ಬೆಳಗಾವಿ ಜಿಲ್ಲೆ ನಿಪ್ಪಾಣಿಯಲ್ಲಿ ಬಿಜೆಪಿ ಅಭ್ಯರ್ಥಿ ಶಶಿಕಲಾ ಜೊಲ್ಲೆ ಪರ ಕೇಂದ್ರ ಸಚಿವೆ ಸ್ಮತಿ ಇರಾನಿ ಮತ ಯಾಚಿಸಿದರು.

ಬಳ್ಳಾರಿಯಲ್ಲಿ ಕೇಂದ್ರದ ರಾಜ್ಯ ಸಚಿವ ಕೃಷ್ಣನ್‌ ಪಾಲ್‌ ಗುರ್ಜರ್‌, ಶಿವಮೊಗ್ಗದಲ್ಲಿ ಕೇಂದ್ರ ಬೃಹತ್‌ ಕೈಗಾರಿಕೆ ಸಚಿವ ಮಹೇಂದ್ರನಾಥ ಪಾಂಡೆ ಹಾಗೂ ಕಲಬುರಗಿಯಲ್ಲಿ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್‌ ತೋಮರ್‌ ಬಿಜೆಪಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ರಾಯಚೂರಿನಲ್ಲಿ ಕೇಂದ್ರ ಬುಡಕಟ್ಟು ಖಾತೆ ಸಚಿವ ಅರ್ಜುನ ಮುಂಡಾ, ಹಾಸನ ಜಿಲ್ಲೆ ಅರಸೀಕೆರೆಯಲ್ಲಿ ಛತ್ತೀಸ್‌ಗಢದ ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಸಂಸದರಾದ ಅರುಣ್‌ ಸಾಹೋ ಪಾಲ್ಗೊಂಡಿದ್ದರು.

 

Advertisement

Udayavani is now on Telegram. Click here to join our channel and stay updated with the latest news.

Next