Advertisement
ಮಂಡೆಚಾವಡಿ ವಿಷ್ಣುಮೂರ್ತಿ ದೇವಸ್ಥಾನದ ಸಮೀಪ ಇಂದ್ರಾಣಿ ನದಿಗೆ ಅಡ್ಡಲಾಗಿ ಈ ಸೇತುವೆ ನಿರ್ಮಿಸಲಾಗಿತ್ತು. ಇದು ಗರ್ಡೆ, ಲಕ್ಷ್ಮೀನಗರ ಪ್ರದೇಶಕ್ಕೆ ಪ್ರಮುಖ ಸಂಪರ್ಕದ ಕೊಂಡಿಯಾಗಿತ್ತು. ಸೇತುವೆ ಪಕ್ಕದಲ್ಲಿ ಎರಡು ಕಡೆ ಖಾಸಗಿ ಭೂಮಿ ಇದ್ದುದರಿಂದ ಸ್ಥಳೀಯರ ವಿರೋಧ, ಭೂ ವಿವಾದದ ಹಿನ್ನೆಲೆಯಲ್ಲಿ ಸಂಪರ್ಕ ರಸ್ತೆ ನಿರ್ಮಾಣವಾಗದೆ ಸೇತುವೆ ಬಳಕೆ ಇನ್ನೂ ಸಾಧ್ಯವಾಗಿಲ್ಲ.
Related Articles
Advertisement
ಸೇತುವೆ ಬಳಕೆ ವಿಚಾರ ಮುನ್ನೆಲೆಗೆಮೂಡುಬೆಟ್ಟು ವಾರ್ಡ್ ಸದಸ್ಯ ಶ್ರೀಶ ಕೊಡವೂರು ಅವರು ಇದೀಗ ಸೇತುವೆಯ ಎರಡೂ ಬದಿ ರಸ್ತೆ ಸಂಪರ್ಕ ಕಲ್ಪಿಸಲು ಮುಂದಾಗಿದ್ದಾರೆ. ಈ ಬಗ್ಗೆ ಶಾಸಕರು, ನಗರಸಭೆಯ ಪೌರಾಯುಕ್ತರಿಗೆ ಮನವಿ ಮಾಡಿದ್ದಾರೆ. ಈಗಾಗಲೇ ಶಾಸಕರು, ನಗರಸಭೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಭೂಮಿ ತಕರಾರು
ಸೇತುವೆಯ ಎರಡೂ ಬದಿಯಲ್ಲಿರುವುದು ಖಾಸಗಿ ಜಾಗ. ಭೂಮಿ ತಕರಾರಿನಿಂದಾಗಿ ಕಳೆದ 35 ವರ್ಷಗಳಿಂದ ಸಂಪರ್ಕ ರಸ್ತೆಯನ್ನು ನಿರ್ಮಾಣ ಮಾಡಲು ಸಾಧ್ಯವಾಗಿಲ್ಲ. ಇದೀಗ ಶಾಸಕ ರಘುಪತಿ ಭಟ್ ಅವರು ಭೂಮಾಲಕರ ಮನ ಒಲಿಸಿ ರಸ್ತೆ ನಿರ್ಮಾಣ ಮಾಡುವ ಬಗ್ಗೆ ಭರವಸೆ ನೀಡಿದ್ದಾರೆ. ಈ ನಿಟ್ಟಿನಲ್ಲಿ ಎಲ್ಲ ಪ್ರಯತ್ನ ನಡೆಯುತ್ತಿದೆ.
-ಶ್ರೀಶ ಕೊಡವೂರು, ನಗರಸಭೆ ಸದಸ್ಯರು, ಮೂಡುಬೆಟ್ಟು ವಾರ್ಡ್ ಭೂಮಿ ತಕರಾರು
ಈಗಾಗಲೇ ಸ್ಥಳಕ್ಕೆ ಹೋಗಿ ಪರಿಶೀಲನೆ ನಡೆಸಿದೇªನೆ. ಸೇತುವೆಗೆ ಸಂಪರ್ಕ ಕಲ್ಪಿಸುವ ಹಡಿಲು ಗದ್ದೆಯಲ್ಲಿ ನಾಟಿ ಕಾರ್ಯ ಮಾಡಲಾಗಿದೆ. ಇಲ್ಲಿನ ಭತ್ತದ ಕಟಾವು ಕಾರ್ಯ ಮುಗಿದ ಬಳಿಕ ಸ್ಥಳದ ಮಾಲಕರ ಬಳಿ ಹೋಗಿ ಅವರ ಮನ ಒಲಿಸುವ ಪ್ರಯತ್ನ ಮಾಡಲಾಗುವುದು. ಅವರು ಒಪ್ಪಿಗೆ ಸೂಚಿಸಿದ ಮೇಲೆ ಅವರಿಂದ ಒಪ್ಪಿಗೆ ಪತ್ರ ಪಡೆದು ಮುಂದೆ ಲೋಕೋಪಯೋಗಿ ಇಲಾಖೆ ಅಥವಾ ಬೇರೆ ಯಾವುದಾರರೂ ನಿಧಿಯನ್ನು ಬಳಸಿಕೊಂಡು ಅತೀ ಶೀಘ್ರದಲ್ಲಿ ಸೇತುವೆಯ ಎರಡೂ ಬದಿಯಲ್ಲಿ ರಸ್ತೆಯನ್ನು ನಿರ್ಮಿಸಿ ಸಾರ್ವಜನಿಕರಿಗೆ ಸೇತುವೆ ಬಳಕೆಯಾಗುವಂತೆ ಎಲ್ಲ ರೀತಿಯಲ್ಲಿ ಪ್ರಯತ್ನಿಸಲಾಗುವುದು.
-ಕೆ. ರಘುಪತಿ ಭಟ್, ಶಾಸಕರು, ಉಡುಪಿ