Advertisement
ಮೊನ್ನೆ ತುಮಕೂರು ತಾಲೂಕು ಕಚೇರಿಯ ಬಳಿಯ ಮರದಡಿಯಲ್ಲಿ ಕಾಲ ಕಳೆಯುತ್ತಾ ಕುಳಿತಿದ್ದೆ. ಅಲ್ಲಿಗೆ ಒಬ್ಬ ವ್ಯಕ್ತಿ ಕಡಲೆಕಾಯಿ ಮಾರುತ್ತಾ ಬಂದ. ಅವನನ್ನು ಕಂಡು ಆಶ್ಚರ್ಯವಾಯ್ತು; ಬದುಕಲು ಹೀಗೂ ಪ್ರಯತ್ನಿಸುವವರಿದ್ದಾರಲ್ಲ ಎಂದು. ಅದರಲ್ಲೇನು ವಿಶೇಷ ಅಂದ್ರೆ, ಕಡಲೆಕಾಯಿ ಮಾರುತ್ತಿದ್ದವ ಕುರುಡನಾಗಿದ್ದ. ಕೈಯಲ್ಲೊಂದು ಕಡ್ಡಿ ಹಿಡಿದು ದಾರಿ ಹುಡುಕುತ್ತಾ ಜನಜಂಗುಳಿ ನಡುವೆ ಕಟ್ಟಿದ ಪೊಟ್ಟಣಗಳೊಂದಿಗೆ ಕಡಲೆಕಾಯಿ ವ್ಯಾಪಾರ ಮಾಡುತ್ತಿದ್ದ. ದೇಹದ ಎಲ್ಲಾ ಅಂಗಗಳು ಸರಿಯಿದ್ದರೂ ಭಿಕ್ಷೆ ಬೇಡುವ ಕೆಲವರನ್ನು ನಾವು ನೋಡಿರುತ್ತೇವೆ. ಆದರೆ, ಈ ವ್ಯಕ್ತಿ ತನ್ನ ಕುರುಡುತನವನ್ನು ಮರೆತು ದುಡಿದು ತಿನ್ನಲು ತವಕಿಸುತ್ತಿದ್ದ.
Related Articles
Advertisement
ನಾನು ಮತ್ತೆ ಕೇಳಿದೆ: “ಯಾರೂ ಮೋಸ ಮಾಡಲ್ವಾ?’ ಅದಕ್ಕಾತ “ಅಯ್ಯೋ ಬಿಡಿ ಸಾರ್… ನಮ್ಮಂಥವರಿಗೆ ಯಾರ್ ಮೋಸ ಮಾಡ್ತಾರೆ? ಹಾಗೆಲ್ಲ ಏನೂ ಇಲ್ಲ. ದಿನಕ್ಕೆ 30 ಪೊಟ್ಟಣ ತರಿ¤àನಿ. ಒಂದಕ್ಕೆ 10 ರೂ. ಪೂರ್ತಿ ವ್ಯಾಪಾರ ಆದ್ರೆ 300 ರೂಪಾಯಿ ಆಗಬೇಕು ಅಲ್ವ? ಮನೆಗೆ ಹೋದ ಮೇಲೆ ನನ್ ಹೆಂಡ್ತಿ ಲೆಕ್ಕ ಮಾಡಿ ನೋಡ್ತಾಳೆ. ಹತ್ತೋ- ಇಪ್ಪತ್ತೋ ವ್ಯತ್ಯಾಸ ಬರಬಹುದು ಅಷ್ಟೇ!’ ಎಂದ. ನನಗೆ ಉತ್ತರ ಸಿಕು¤, ಆತನ ಹೆಂಡತಿ ಕುರುಡಿ ಅಲ್ಲ ಅಂತ.
“ಸರಿಯಪ್ಪಾ, ಹೀಗೆ ದುಡೀತಾ ಆರಾಮಾಗಿರಿ. ತಗೊಳ್ಳಿ ನಂದು 20 ರೂ.’ ಅಂತ 100 ರೂ. ನೋಟು ಕೊಟ್ಟೆ. “ಸಾರ್, ಚಿಲ್ಲರೆ ನೀವೇ ತಗೋಬೇಕು’ ಅಂದ! “ಹೇಗೆ ಗೊತ್ತಾಯ್ತು ನಾನ್ ಕೊಟ್ಟಿದ್ದು 100 ರೂ. ಅಂತ?’ ಕೇಳಿದೆ. ಅದಕ್ಕೆ ಅವನು “ಅದೆಲ್ಲಾ ಗೊತ್ತಾಗುತ್ತೆ ಸಾರ್. ಅಳತೆ ಲೆಕ್ಕಾಚಾರ ಅಷ್ಟೇ… ತಗೊಳ್ಳಿ ನಿಮ್ಮ ಚಿಲ್ಲರೆ’ ಅಂತ ಜೇಬಿನಿಂದ ಎಲ್ಲಾ ಹಣವನ್ನೂ ತೆಗೆದು ನನ್ನೆದುರಿಟ್ಟ. ನಾನು 80 ರೂ. ತೆಗೆದುಕೊಂಡೆ. ಯಾಕೋ ಅನುಮಾನ ಬಂತು, ಅವನ ಹಣದಲ್ಲಿ ಕಮ್ಮಿ ಇರಬಹುದೆಂದು. ಅವನ ಚೀಲದಲ್ಲಿದ್ದ ಕಡಲೆಕಾಯಿ ಪೊಟ್ಟಣ ಬಹುತೇಕ ಮುಗಿದಿತ್ತು. ಆದರೆ, ಹಣ ಕಡಿಮೆ ಇತ್ತು? “ಇವತ್ತು ಎಷ್ಟು ಪೊಟ್ಟಣ ತಂದಿದ್ದೆ?’ ಎಂದು ಪ್ರಶ್ನಿಸಿದೆ. “30 ತಂದಿದ್ದೆ, ಉಳಿದಿರೋದು 3′ ಎಂದ. ಅಲ್ಲಿಗೆ ಅವನ ಬಳಿ 270 ರೂ. ಇರಬೇಕು. ನಾನು “ಬೇಜಾರ್ ಮಾಡ್ಕೊಬೇಡಿ. ಒಂದು ಸಲ ಎಣಿಸ್ತೀನಿ’ ಅಂದೆ. ಅವನ ಬಳಿಯಿದ್ದಿದ್ದು 100 ರೂ.ನ ಒಂದು ನೋಟು, 10 ರೂ.ನ 5 ನೋಟು, 20 ರೂ.ನ 3 ನೋಟು ಮತ್ತು ಚಿಲ್ಲರೆ ನಾಣ್ಯಗಳು. ಒಟ್ಟು 233 ರೂ. ಇತ್ತು!
ಅಯ್ಯೋ! ಯಾರೋ 40 ರೂ. ಮೋಸ ಮಾಡಿದ್ದಾರಲ್ಲ. ಅದನ್ನು ಅವನಿಗೆ ಹೇಗೆ ಹೇಳ್ಳೋದು ಅಂತ ಗೊತ್ತಾಗಲಿಲ್ಲ. ಒಂದು ವೇಳೆ ಈತ ಮನೆಗೆ ಹೋದ ಮೇಲೆ ಹೆಂಡತಿ ಎಣಿಕೆ ಮಾಡಿದಾಗ ಕಡಿಮೆ ಹಣ ಇರೋದು ಗೊತ್ತಾಗಿ, ನನ್ನನ್ನೇ ಬೈದುಕೊಳ್ಳೋದು ಪಕ್ಕಾ ಎಂದೆನಿಸಿತು. ಇಂಥವರಿಗೂ ಮೋಸ ಮಾಡುವವರಿದ್ದಾರಲ್ಲ ಎಂದು ಶಪಿಸುತ್ತಾ “ಹಣ ಸರಿ ಇದೆ ತಗೊಳ್ಳಿ’ ಅಂತ ಎಲ್ಲಾ ಹಣ ಅವರ ಜೇಬಿಗಿಟ್ಟೆ. “ಸರಿ ಸಾರ್, ನಾನು ಹೋಗ್ತಿàನಿ. ಇನ್ನೂ 3 ಪೊಟ್ಟಣ ಇದೆ. ಬೇಗ ಮನೆಗೆ ಹೋಗಬೇಕು. ಅವಳು ಕಾಯುತ್ತಾ ಇರುತ್ತಾಳೆ’ ಎಂದು ಕಡ್ಡಿ ಹಿಡಿದು ಹೊರಟರು.
ಅಂದಹಾಗೆ, ಆತ ಮನೆಯಲ್ಲಿ ಹೆಂಡತಿಯೊಡನೆ ಹಣ ಲೆಕ್ಕ ಮಾಡುವಾಗ ಖಂಡಿತಾ ಹಣ ಕಡಿಮೆ ಬಂದಿರೋಲ್ಲ. ಅದಕ್ಕೆ ನಾನೇ ಗ್ಯಾರಂಟಿ!
ನವೀನ್ ಕುಮಾರ್, ತುಮಕೂರು