Advertisement
ಇಂದು ಜೀವಜಲ ಕೊರತೆಯಿಂದ ಅನೇಕ ಪಕ್ಷಿಗಳು ಕುಡಿಯುವ ನೀರಿಲ್ಲದೆ ಸತ್ತಿರುವುದನ್ನು ಕಂಡು ಇಂತಹ ಒಂದು ಸಾಹಸಕ್ಕೆ ಮುಂದಾದರು. ಪಠ್ಯಗಳಿಂದ, ಸ್ನೇಹಿತರ ಮಾರ್ಗದರ್ಶನದಿಂದ ಪಕ್ಷಿಗಳಿಗೆ ನೀರೊದಗಿಸುವ, ನಶಿಸುತ್ತಿರುವ ಗುಬ್ಬಚ್ಚಿಯ ಸಂತಾನ ರಕ್ಷಣೆಗಾಗಿ ಮಡಕೆಯ ಕಾಪಿನಲ್ಲಿ ಮೊಟ್ಟೆ ಯಿಂದ ಮರಿ ಮಾಡುವುದಕ್ಕೂ ಕ್ರಮ ಕೈಗೊಂಡಿದ್ದಾರೆ.
ಅಪೇಕ್ಷಿತರು ಬಯಸಿದಲ್ಲಿ ಪಕ್ಷಿಗಳ ಸಂತಾನೋತ್ಪತ್ತಿಗಾಗಿ ಮಣ್ಣಿನ ಗೂಡು ಮತ್ತು ನೀರಿನ ಪಾತ್ರೆಯನ್ನು ಉಚಿತವಾಗಿ ವಿತರಿಸುತ್ತಾರೆ. ಕಳೆದ ಎರಡು ವರ್ಷಗಳಿಂದ ಅಳಿವಿನಂಚಿನಲ್ಲಿರುವ ಪಕ್ಷಿ ಸಂಕುಲ ಉಳಿವಿಗೆ, ಸಸ್ಯರಾಶಿಗಳ ಮಹತ್ವ ತಿಳಿಸುವ ಕಾರ್ಯವನ್ನೂ ಮಾಡುತ್ತಿದ್ದಾರೆ. ಸ್ಥಳೀಯವಾಗಿ ವಿವಿಧ ಶಾಲೆಗಳಿಗೆ ತೆರಳಿ ಅಳಿವಿನಂಚಿನಲ್ಲಿರುವ ಪಕ್ಷಿ ಸಂಕುಲ ಉಳಿವಿಗಾಗಿ ಸಸ್ಯರಾಶಿಗಳ ಮಹತ್ವ ಎಂಬ ಬಗ್ಗೆ ಜಾಗೃತಿ ಕಾರ್ಯಾಗಾರವನ್ನು ಆಯೋಜಿಸಿದ್ದಾರೆ.
Related Articles
ಅವರ ಮನೆ ಸನಿಹದ ವಿಶಾಲ ಬಂಡೆ ಕಲ್ಲಿನ ಮೇಲೆ ಪಕ್ಷಿಗಳಿಗೆ ಕುಡಿಯುವ ನೀರು ಒದಗಿಸಲು ಕಬ್ಬಿಣದೆ ಸಲಾಕೆಗಳಿಂದ ಮಾಡಿದ ಗೂಟದಲ್ಲಿ ಅಡ್ಡಕಟ್ಟುವ ಮೂಲಕ ನೀರಿನ ಪಾತ್ರೆ, ಆಹಾರದ ಪಾತ್ರೆಯನ್ನು ಕಟ್ಟಿ ನೇತಾಡಿಸುವ ಯೋಜನೆಯನ್ನು ಮಾಡಿದ್ದಾರೆ. ಇದರಿಂದ ಹಾರಿ ಬರುವ ಹಕ್ಕಿಗಳು ಸ್ಪಷ್ಟವಾಗಿ ನೀರನ್ನು, ಕಾಳನ್ನು ಗಮನಿಸಲು ಸಾಧ್ಯವಾಗುತ್ತದೆ ಎಂದು ಅವರು ಹೇಳುತ್ತಾರೆ.
Advertisement
ಹೆತ್ತವರ ಪ್ರೋತ್ಸಾಹತನ್ನದೇ ಜಮೀನನ್ನು ಸಂಪೂರ್ಣವಾಗಿ ಹಸಿರುಮಯವಾಗಲು ಯೋಜನೆ ರೂಪಿಸಿ, ಕಾರ್ಯಗತಗೊಳಿಸಿದ್ದಾರೆ. ಅವರ ಹೆತ್ತವರೂ ಅವರ ಕ್ರಮಕ್ಕೆ ಬೆಂಬಲ ಸೂಚಿಸಿದ್ದಾರೆ. ಪುತ್ರನ ಅನುಪಸ್ಥಿತಿಯಲ್ಲಿ ತಾವೇ ನೀರು, ಕಾಳನ್ನು ಹಾಕುವ ಕ್ರಮವನ್ನು ನಿರ್ವಹಿಸುತ್ತಿದ್ದಾರೆ. ಸ್ನಾತಕೋತ್ತರ ಪದವಿಧರರಾದ ಅವರು ಖಾಸಗಿ ಸಂಸ್ಥೆಯಲ್ಲಿ ಉದ್ಯೋಗದಲ್ಲಿದ್ದಾರೆ. ಮರ-ಗಿಡಗಳಲ್ಲಿ ಬೆಳಗ್ಗೆ ಹಕ್ಕಿಗಳ ಕಲರವ
ಇಲ್ಲಿನ ಮರ-ಗಿಡಗಳಲ್ಲಿ ಬೆಳಗ್ಗೆ ಹಕ್ಕಿಗಳ ಕಲರವ ಕೇಳಿಸುತ್ತದೆ. ಗಿಳಿ, ಗುಬ್ಬಚ್ಚಿ, ಕೋಗಿಲೆ, ಪಾರಿವಾಳ, ಪಿಕಳಾರ, ಗೋರವಂಕ, ಮುಂತಾದ ಹಕ್ಕಿಗಳು ಕಾಣಸಿಗುತ್ತವೆ. ಸ್ವಂತ 2 ಎಕ್ರೆ ಜಮೀನಿನಲ್ಲಿ ಪೇರಳೆ, ಚಿಕ್ಕು ಮುಂತಾದ ಹಣ್ಣುಗಳನ್ನು ಕೇವಲ ಪಕ್ಷಿಗಳಿಗೆ ಆಹಾರ ಉದ್ದೇಶಕ್ಕಾಗಿ ಇನ್ನಷ್ಟು ಬೆಳೆಸಲು ನಿತ್ಯಾನಂದ ಶೆಟ್ಟಿ ಉದ್ದೇಶಿಸಿದ್ದಾರೆ. ಹಣ್ಣುಗಳು ಸಿಗದೇ ಇರುವ ಬೇಸಗೆಯ ಹೊತ್ತಿನಲ್ಲಿ, ಮಳೆಗಾಲದಲ್ಲಿ ಪ್ರತಿ ನಿತ್ಯ ರಾಗಿ, ಗೋಧಿ ಇನ್ನಿತರ ಆಹಾರ ಕಾಳುಗಳನ್ನು ಮರ-ಗಿಡಗಳಿಗೆ ಅಳವಡಿಸಿದ ಪ್ರತ್ಯೇಕ ಪಾತ್ರೆಯಲ್ಲಿ ದಿನಂಪ್ರತಿಯಂತೆ ಪ್ರತಿ ತಿಂಗಳಿಗೆ ಸರಾಸರಿ 30 ಕೆ.ಜಿ.ಯಷ್ಟು ಹಾಕುವ ಮೂಲಕ ಪಕ್ಷಿಗಳಿಗೆ ಆಹಾರ ಕೊರತೆ ನೀಗಿಸುವ ಪ್ರಯತ್ನ ಮಾಡಿದ್ದಾರೆ. ಮಾನಸಿಕ ನೆಮ್ಮದಿ
ಹೆತ್ತವರಾದ ಬೇಬಿ ಶೆಟ್ಟಿ , ಸುಮತಿ ಬಿ. ಶೆಟ್ಟಿ ಅವರಿಂದ ನನ್ನ ಹವ್ಯಾಸಕ್ಕೆ ಪ್ರೋತ್ಸಾಹವಿದೆ. ಪ್ರಕೃತಿಯ ಜೀವ ರಾಶಿಗಳ ಸೇವೆಯೂ ಭಗವಂತನ ಸೇವೆ ಎಂಬುದಾಗಿ ನಂಬಿ ನಡೆಯುತ್ತಿದ್ದು, ಮಾನಸಿಕ ನೆಮ್ಮದಿ, ತೃಪ್ತಿ, ಸಂತೋಷ ಸಿಗುತ್ತದೆ. ಯಾವುದೋ ಒಂದು ಪಕ್ಷಿ ಬಂದು ಈ ಕುಡಿಕೆಗಳಿಂದ ನೀರು ಕುಡಿಯುವಾಗ ಅದರ ಚಲನವಲನ ವೀಕ್ಷಿಸುವುದೇ ಆನಂದ.
– ನಿತ್ಯಾನಂದ ಶೆಟ್ಟಿ ರಾಜಾ ಬಂಟ್ವಾಳ