Advertisement
ಈ ಹೊಸ ಮಸೂದೆಯು ಕೃತಕ ಬುದ್ಧಿಮತ್ತೆ(ಎಐ)ಯ ಸಕಾರಾತ್ಮಕ ಉಪ ಯೋಗಳನ್ನು ಈ ಹೊಸ ಮಸೂದೆಯು ಶೋಧಿಸಲಿದೆ. ಅಲ್ಲದೇ, ಸಂಸ ತ್ತಿ ನಲ್ಲಿ ಮಸೂದೆಯನ್ನು ಮಂಡಿಸುವ ಮೊದಲು ಎಲ್ಲ ಪಕ್ಷಗಳ ಸಮ್ಮತಿಯನ್ನು ಪಡೆಯುವ ಪ್ರಯತ್ನ ವನ್ನು ಸರಕಾರ ಮಾಡಲಿದೆ ಎಂದು ಸರಕಾರದ ಮೂಲಗಳು ತಿಳಿಸಿವೆ. 18ನೇ ಲೋಕ ಸಭೆಯ ಮೊದಲ ಅಧಿವೇ ಶನವು ಜೂನ್ 22 ರಂದು ಆರಂಭವಾಗಿ ಜುಲೈ 3ರಂದು ಮುಕ್ತಾಯವಾಗಲಿದೆ. ಬಳಿಕ ಸಂಸತ್ತಿನ ಮುಂಗಾರು ಅಧಿ ವೇಶನವು ಜುಲೈ 22ರಂದು ಆರಂಭವಾಗಿ ಆಗಸ್ಟ್ 9ರ ವರೆಗೂ ನಡೆಯುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ. ಡಿಜಿಟಲ್ ಮಸೂದೆಯನ್ನು ಜಾರಿಗೆ ತರುವ ಸಂಬಂಧ ಕಳೆದ ವರ್ಷವೇ ಅಂದಿನ ಮಾಹಿತಿ ತಂತ್ರಜ್ಞಾನ ಮತ್ತು ಎಲೆಕ್ಟ್ರಾನಿಕ್ಸ್ ಖಾತೆಯ ಸಚಿವರಾಗಿದ್ದ ರಾಜೀವ್ ಚಂದ್ರಶೇಖರ್ ಅವರು ಸುಳಿವು ನೀಡಿದ್ದರು. ಇದೀಗ ಕೇಂದ್ರ ಸರಕಾರವು ತನ್ನ ಮೊದಲ ಅಧಿವೇಶನದಲ್ಲಿ ಈ ಮಸೂದೆಯನ್ನು ಮಂಡಿಸಲು ಮುಂದಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಯುಟ್ಯೂಬ್ ಸೇರಿದಂತೆ ನಾನಾ ವೇದಿಕೆಗಳಲ್ಲಿನ ಆನ್‌ಲೈನ್ ವೀಡಿಯೋಗಳ ನಿಯಂತ್ರಣಕ್ಕೂ ಮಸೂದೆಯನ್ನು ಮಂಡಿಸುವ ಸಾಧ್ಯತೆಗಳಿವೆ. ಈ ಬಗ್ಗೆ ಕೂಡ ಕೇಂದ್ರ ಸರಕಾರ ಪರಿಶೀಲಿಸುತ್ತಿದೆ ಎನ್ನಲಾಗಿದೆ.