Advertisement

ತೈಲ ಸೋರಿಕೆಯಿಂದ ಕಪ್ಪಾದ ಸುಂದರ ಗೋವಾ ಬೀಚ್ : ಓಡಾಡುವುದೇ ಕಷ್ಟಕರ

08:52 PM May 18, 2022 | Team Udayavani |

ಪಣಜಿ: ಸುಂದರವಾದ ಮರಳನ್ನು ಹೊಂದಿದ ಬೀಚ್‍ನಿಂದಾಗಿ ಪ್ರಸಿದ್ಧಿ ಪಡೆದಿದ್ದ ಬಾಣಾವಲಿಯಿಂದ ಕೆಳಶಿ ವರೆಗಿನ ಬೀಚ್ ತೈಲ ಸೋರಿಕೆಯಿಂದಾಗಿ ಕಪ್ಪಾಗಿದೆ. ಇದರಿಂದಾಗಿ ಈ ಬೀಚ್‍ಗಳಲ್ಲಿ ಸದ್ಯ ಓಡಾಡುವುದೇ ಕಷ್ಟಕರ ಎಂಬಂತಾಗಿದೆ. ಇದರಿಂದಾಗಿ ಈ ಬೀಚ್‍ಗಳಿಗೆ ಪ್ರವಾಸಿಗರು ತೆರಳಲು ಹಿಂದೇಟು ಹಾಕುತ್ತಿದ್ದಾರೆ.

Advertisement

ಆಳ ಸಮುದ್ರದಲ್ಲಿ ಹಡಗು ಮತ್ತು ಬೋಟ್‍ಗಳಿಂದಾಗಿ ಭಾರಿ ಪ್ರಮಾಣದಲ್ಲಿ ತೈಲ ಸೋರಿಕೆಯಾಗುತ್ತಿರುವುದು ಇದರಿಂದ ಸ್ಪಷ್ಟವಾದಂತಾಗಿದೆ. ಇದರಿಂದಾಗಿ ಸಮುದ್ರದಲ್ಲಿರುವ ಜಲಚರಗಳಿಗೆ ಹೆಚ್ಚಿನ ತೊಂದರೆಯುಂಟಾಗಲಿದೆ ಎಂದು ಪರಿಸರ ಪ್ರೇಮಿಗಳು ಅಭಿಪ್ರಾಯಪಟ್ಟಿದ್ದಾರೆ.

ಸದ್ಯ ಪ್ರವಾಸೀ ಸೀಜನ್ ಆಗಿದ್ದರೂ ಕೂಡ ಈ ಬೀಚ್‍ಗಳಲ್ಲಿ ಹಡಗುಗಳ ತೈಲ ಸೋರಿಕೆಯ ಪರಿಣಾಮ ಪ್ರವಾಸಿಗರ ಮೇಲೆ ಬೀಳುವಂತಾಗಿದೆ.

ಇದನ್ನೂ ಓದಿ : ಶಿವಲಿಂಗದ ಕುರಿತು ಅವಹೇಳನಕಾರಿ ಟ್ವೀಟ್ : ಎಐಎಂಐಎಂ ನಾಯಕ ಅರೆಸ್ಟ್

ಈ ಕುರಿತು ಗೋವಾ ಶಾಕ್ ಮಾಲೀಕರ ಸಂಘದ ಅಧ್ಯಕ್ಷ ಕ್ರೂಜ್ ಕಾರ್ದೋಜ್ ಪ್ರತಿಕ್ರಿಯೆ ನೀಡಿ, ಕಳೆದ ಕೆಲವು ವರ್ಷಗಳಿಂದ ಕರಾವಳಿಗೆ ಕರಾವಳಿಗೆ ಆಗಮಿಸುವ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದ್ದು ತೈಲಸೋರಿಕೆ ಘಟನೆಯು  ಪ್ರವಾಸೋದ್ಯಮದ ಮೇಲೆ ವ್ಯತಿರಿಕ್ತ ಪರಿಣಾಮ ಬೀಳಲಿದೆ ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next