Advertisement

ಸಮಬಲ ಸಾಧಿಸಿದ ಶ್ರೀಲಂಕಾ”ಎ’

12:22 AM Jun 16, 2019 | Sriram |

ಹುಬ್ಬಳ್ಳಿ: ಭಾರತ “ಎ’ ವಿರುದ್ಧದ 5ನೇ ಹಾಗೂ ಅಂತಿಮ ಏಕದಿನ ಪಂದ್ಯವನ್ನು 7 ವಿಕೆಟ್‌ಗಳಿಂದ ಗೆದ್ದ ಶ್ರೀಲಂಕಾ “ಎ’ ತಂಡ ಸರಣಿಯನ್ನು 2-2ರಿಂದ ಸಮಬಲಗೊಳಿಸುವಲ್ಲಿ ಯಶಸ್ವಿಯಾಗಿದೆ.

Advertisement

ಹುಬ್ಬಳ್ಳಿಯ “ಕೆಎಸ್‌ಸಿಎ ಸ್ಟೇಡಿಯಂ’ನಲ್ಲಿ ಶನಿವಾರ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ನಡೆಸಿದ ಭಾರತ “ಎ’ 50 ಓವರ್‌ಗಳಲ್ಲಿ 259 ರನ್ನಿಗೆ ಆಲೌಟ್‌ ಆಯಿತು. ಜವಾಬಿತ್ತ ಶ್ರೀಲಂಕಾ “ಎ’ 47.4 ಓವರ್‌ಗಳಲ್ಲಿ 3 ವಿಕೆಟಿಗೆ 260 ರನ್‌ ಬಾರಿಸಿ ಗೆದ್ದು ಬಂತು. ಆರಂಭಿಕರಾದ ನಿರೋಷನ್‌ ಡಿಕ್ವಲ್ಲ 111, ಸಂಗೀತ್‌ ಕೂರೆ 61 ರನ್‌ ಬಾರಿಸಿ ಆತಿಥೇಯರ ಮೇಲೆ ಸವಾರಿ ಮಾಡಿದರು. ಇವರಿಂದ ಮೊದಲ ವಿಕೆಟಿಗೆ 165 ರನ್‌ ಒಟ್ಟುಗೂಡಿತು. ಭಾರತದ ಪರ ಓಪನರ್‌ ಋತುರಾಜ್‌ ಗಾಯಕ್ವಾಡ್‌ 74 ರನ್‌ ಹೊಡೆದರು.

ಇಲ್ಲೇ ನಡೆದ 4ನೇ ಪಂದ್ಯ ಮಳೆಯಿಂದ ರದ್ದುಗೊಂಡಿತ್ತು. ಬೆಳಗಾವಿಯಲ್ಲಿ ನಡೆದ ಮೊದಲೆರಡು ಪಂದ್ಯಗಳನ್ನು ಭಾರತ “ಎ’ ಜಯಿಸಿದರೆ, 3ನೇ ಪಂದ್ಯ ಲಂಕಾ ಪಾಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next