Advertisement

40 ವರ್ಷಗಳ ಬಳಿಕ ಬ್ರಿಟನ್ ರಾಣಿ ಡಯಾನಾ ಮದುವೆ ಕೇಕ್‌ ತುಂಡು ಹರಾಜು!

09:05 PM Jul 31, 2021 | Team Udayavani |

ಲಂಡನ್: ಬೇಗನೆ ಹಾಳಾಗುವ ತಿಂಡಿಗಳಲ್ಲಿ ಕೇಕ್ ಕೂಡ ಒಂದು. ಈ ಸಿಹಿ ತಿಂಡಿಯನ್ನು ದೀರ್ಘ ಕಾಲದ ವರೆಗೆ ಸಂಗ್ರಹ ಮಾಡಿಡಲು ಸಾಧ್ಯವಿಲ್ಲ. ಆದರೆ, ಇಲ್ಲೊಂದು ಕಡೆ ಕಳೆದ 40 ವರ್ಷಗಳಿಂದ ಒಂದು ಕೇಕ್ ನ ತುಂಡನ್ನು ಸಂರಕ್ಷಣೆ ಮಾಡಿ ಇಡಲಾಗಿದೆ. ಇದೀಗ ಅದನ್ನು ಹರಾಜು ಮಾಡಲಾಗುತ್ತಿದೆ.

Advertisement

ಹೌದು, ಬರೋಬ್ಬರಿ 40 ವರ್ಷಗಳ ಬಳಿಕ ಬ್ರಿಟನ್‌ನ ರಾಜಕುಮಾರ ಚಾರ್ಲ್ಸ್ ಮತ್ತು ರಾಜಕುಮಾರಿ ಡಯಾನಾ ಅವರ ಮದುವೆಯ ಕೇಕ್‌ನ ತುಂಡೊಂದನ್ನು ಹರಾಜಿಗಿಡಲಾಗಿದೆ!

ಬ್ರಿಟನ್‌ನ ರಾಜಕುಮಾರ ಚಾರ್ಲ್ಸ್ ಮತ್ತು ರಾಜಕುಮಾರಿ ಡಯಾನಾ ಅವರ ಮದುವೆಯು ಜು.29,1981ರಂದು ನೆರವೇರಿತ್ತು. ಆ ಸಮಾರಂಭದಲ್ಲಿ ಕತ್ತರಿಸಲಾದ ಒಂದು ತುಂಡು ಕೇಕ್‌ ಅನ್ನು ಮೋಯಿರಾ ಸ್ಮಿತ್‌ ಎಂಬವರಿಗೆ ನೀಡಲಾಗಿತ್ತು. ಅದನ್ನುಅವರು ಸಣ್ಣ ಪೆಟ್ಟಿಗೆಯಲ್ಲಿಟ್ಟು ಸಂರಕ್ಷಿಸಿಟ್ಟಿದ್ದು, 2008ರಲ್ಲಿ ಬೇರೆಯವರಿಗೆ ‌ ಮಾರಾಟ ಮಾಡಿದ್ದರು.

ಬಹುಶಃ ಇದು ಸೇವನೆ ಯೋಗ್ಯವಲ್ಲದ ಸ್ಥಿತಿಯಲ್ಲಿದ್ದರೂ ಕೂಡ ಮುಂದಿನ ತಿಂಗಳು (ಆ.11ರಂದು) ನಡೆಯಲಿರುವ ಹರಾಜಿನಲ್ಲಿ ನೂರಾರು ಡಾಲರ್ ಗೆ ಮಾರಾಟವಾಗುವ ನಿರೀಕ್ಷೆ ಇದೆ.

Advertisement

Udayavani is now on Telegram. Click here to join our channel and stay updated with the latest news.

Next