Advertisement

ಟ್ವೀಟ್‌ ದಂಧೆ ಹಿಂದೆ ಯುವ ಹ್ಯಾಕರ್ ಕೈವಾಡ

04:11 AM Jul 19, 2020 | Hari Prasad |

ಸ್ಯಾನ್‌ಫ್ರಾನ್ಸಿಸ್ಕೊ: ಅಮೆರಿಕದ ಹೈಪ್ರೊಫೈಲ್‌ ಟ್ವಿಟರ್‌ ಖಾತೆಗಳ ಹ್ಯಾಕಿಂಗ್‌ ಪ್ರಕರಣದ ಹಿಂದೆ ಯುವ ಹ್ಯಾಕರ್‌ಗಳ ಕೈವಾಡವಿದೆ ಎಂಬ ಶಂಕೆ ವ್ಯಕ್ತವಾಗಿದೆ.

Advertisement

21 ವರ್ಷದ ಸಿಮ್‌ ಸ್ಪ್ಯಾಪರ್‌ ತನ್ನ ಸ್ನೇಹಿತರ ಜತೆಗೂಡಿ ಕ್ರಿಪ್ಟೊ ಕರೆನ್ಸಿ ದಂಧೆ ನಡೆಸಿರಬಹುದು ಎಂದು FBI ಅಧಿಕಾರಿಗಳು ಶಂಕಿಸಿದ್ದಾರೆ.

ಗೇಮರ್ಸ್‌ಗಳು ಚಾಟ್‌ಗೆ ಬಳಸುವ “ಡಿಸ್ಕಾರ್ಡ್‌’ ವೇದಿಕೆ ಮೂಲಕ ಹ್ಯಾಕರ್ಸ್‌ಗಳು ಹಲವು ಸಂದೇಶಗಳನ್ನು ಪರಸ್ಪರ ರವಾನಿಸಿದ್ದಾರೆ.

ಈ ದಂಧೆಯ ಹಿಂದೆ ರಷ್ಯಾದ ಹ್ಯಾಕರ್ಸ್‌ಗಳಾಗಲೀ, ಅತ್ಯಾಧುನಿಕ ತಂತ್ರಜ್ಞರಾಗಲೀ ಭಾಗಿ ಯಾಗಿಲ್ಲ. ಬದಲಾಗಿ ಯುವಕರ ತಂಡ ಸ್ವಿಮ್‌ ಸ್ವ್ಯಾಪಿಂಗ್‌ ಮೂಲಕ ದುಷ್ಕೃತ್ಯ ಎಸಗಿದೆ ಎಂದು “ದಿ ನ್ಯೂಯಾರ್ಕ್‌ ಟೈಮ್ಸ್‌’ನ ವರದಿಗಳು ಹೇಳಿವೆ.

‘ಹ್ಯಾಕರ್ಸ್‌ ತಂಡದಲ್ಲಿ ಒಬ್ಟಾತ ಮನೆಯಲ್ಲಿ ತನ್ನ ತಾಯಿ ಜತೆ ಇರುವುದಾಗಿ ಹೇಳಿಕೊಂಡಿ ದ್ದಾನೆ. ಎಲ್ಲರ ಚಾಟಿಂಗ್‌ ಸ್ಕ್ರೀನ್‌ ಹೆಸರುಗಳು ಃy, ಃ7 ಎಂಬ ಹ್ಯಾಂಡಲ್‌ ಅಡಿಯಲ್ಲಿವೆ’ ಎಂದು ವರದಿ ಹೇಳಿದೆ.

Advertisement

ಏನಿದು ಸಿಮ್‌ ಸ್ವ್ಯಾಪಿಂಗ್‌?: ವ್ಯಕ್ತಿಯ ಫೈನಾನ್ಶಿಯಲ್‌ ವಿವರವನ್ನು ಕದಿಯುವ ಡಿಜಿಟಲ್‌ ಕಳ್ಳ ತನವಿದು. ಒಬ್ಬ ವ್ಯಕ್ತಿಯ ಖಾತೆ ಹ್ಯಾಕ್‌ ಆಗುವ ಮೊದಲು ಆತನ ಸಿಮ್‌ ಕಾರ್ಡ್‌ ಅನ್ನು ಕೆಲಕ್ಷಣ ಬ್ಲಾಕ್‌ ಮಾಡಿ, ನಕಲಿ ಸಿಮ್‌ ಮೂಲಕ ಇಂಥ ಕೃತ್ಯ ಎಸಗಲಾಗುತ್ತದೆ.

130 ಖಾತೆ ಟಾರ್ಗೆಟ್‌: ‘ಬರಾಕ್‌ ಒಬಾಮಾ, ಎಲನ್‌ ಮಸ್ಕ್, ಬಿಲ್‌ಗೇಟ್ಸ್‌ನಂಥ ಗಣ್ಯರು ಸೇರಿದಂತೆ ಸುಮಾರು 130 ಖಾತೆಗಳ ಮೇಲೆ ಹ್ಯಾಕರ್ಸ್‌ಗಳು ದಾಳಿ ಇಟ್ಟಿರುವುದು ಪ್ರಾಥಮಿಕವಾಗಿ ತಿಳಿದು ಬಂದಿದೆ’ ಎಂದು ಟ್ವಿಟರ್‌ ದೃಢಪಡಿಸಿದೆ.

ಟ್ವಿಟರ್‌ ಸಂಸ್ಥೆಗೆ ಭಾರತ ನೋಟಿಸ್‌
ಈ ನಡುವೆ ಭಾರತ ಸರ್ಕಾರ, ಟ್ವಿಟರ್‌ ಸಂಸ್ಥೆಗೆ ನೋಟಿಸ್‌ ರವಾನೆ ಮಾಡಿದೆ. ಹ್ಯಾಕಿಂಗ್‌ ಪ್ರಕರಣ ಹಿನ್ನೆಲೆಯಲ್ಲಿ ಭಾರತೀಯ ಗಣ್ಯರ ಖಾತೆಗಳ ಮೇಲಾದ ಪರಿಣಾಮಗಳ ಬಗ್ಗೆ ವಿವರವಾದ ಮಾಹಿತಿ ನೀಡುವಂತೆ ಸೂಚಿಸಿದೆ.
ಎಷ್ಟು ಮಂದಿ ಭಾರತೀಯರ ಖಾತೆಗಳು ಹ್ಯಾಕ್‌ಗೆ ತುತ್ತಾಗಿವೆ ಅಥವಾ ತುತ್ತಾಗುವ ಸಾಧ್ಯತೆ ಇದೆಯೆಂಬುದನ್ನು ವಿವರಿಸುವಂತೆ ಕೋರಿದೆ.

Advertisement

Udayavani is now on Telegram. Click here to join our channel and stay updated with the latest news.

Next